Asianet Suvarna News Asianet Suvarna News

52 ಶಾಸಕರಿದ್ರೂ ದಲಿತರಿಗೆ ರಾಜ್ಯದಲ್ಲಿ ಅಧಿಕಾರವಿಲ್ಲ: ಮಾದಾರ ಚೆನ್ನಯ್ಯ ಶ್ರೀ

*   ಪರಿಶಿಷ್ಟರು ಕಚ್ಚಾಟ ನಿಲ್ಲಿಸಬೇಕು
*   ದಲಿತ ಸಂಘಟನೆಗಳು ನೂರಾರು ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ
*   ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ಏಕೆ ಒಂದಾಗಬೇಕು? 

Dalit MLA's Did Not Get Power in Karnataka Says Madara Chennaiah grg
Author
Bengaluru, First Published Sep 13, 2021, 8:31 AM IST

ದಾವಣಗೆರೆ(ಸೆ.13): ವಿಧಾನಸಭೆಯಲ್ಲಿ 52 ಜನ ಪರಿಶಿಷ್ಟ ಜಾತಿ-ಪಂಗಡಗಳ ಶಾಸಕರಿದ್ದರೂ ರಾಜ್ಯದ ಚುಕ್ಕಾಣಿ ಹಿಡಿಯಲು ಸಮುದಾಯದ ಒಬ್ಬರಿಗೂ ಸಾಧ್ಯವಾಗಿಲ್ಲ ಎಂಬ ಬಗ್ಗೆ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯಗಳು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದು ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ. 

ಇಲ್ಲಿನ ಜಯನಗರದ ಶ್ರೀ ಸಾಯಿಬಾಬಾ ಸಮುದಾಯ ಭವನದಲ್ಲಿ ಸ್ವಾಭಿಮಾನಿ ಎಸ್‌ಸಿ ಮತ್ತು ಎಸ್‌ಟಿ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ಏಕೆ ಒಂದಾಗಬೇಕು? ಒಂದು ಚರ್ಚೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಯಡಿಯೂರಪ್ಪನವರು ಅನ್ಯಪಕ್ಷಗಳಿಂದ ಬಂದ 13 ಶಾಸಕರಿಂದ ಮುಖ್ಯಮಂತ್ರಿಯಾದರು ಎನ್ನುತ್ತಾರೆ. ಆದರೆ, 16 ಜನ ಎಸ್ಟಿ ಶಾಸಕರು, 36 ಜನ ಎಸ್ಸಿ ಶಾಸಕರಿದ್ದರೂ ಸಮದಾಯದ ಒಬ್ಬರಿಗೂ ರಾಜ್ಯದ ಚುಕ್ಕಾಣಿ ಹಿಡಿಯಲಾಗಿಲ್ಲ. ಪರಿಶಿಷ್ಟ ಜಾತಿ-ಪಂಗಡದವರು ಪರಸ್ಪರ ಕಚ್ಚಾಡುವುದನ್ನು ಮೊದಲು ನಿಲ್ಲಿಸಬೇಕು. ರಾಜ್ಯದಲ್ಲಿ ಎಸ್‌ಸಿಯಲ್ಲಿ 101 ಪರಿಶಿಷ್ಟ ಜಾತಿಗಳು, ಎಸ್‌ಟಿಯಲ್ಲಿ 50 ಉಪ ಜಾತಿಗಳಿವೆ. ಈ ಎಲ್ಲಾ ಜಾತಿ, ಉಪ ಜಾತಿಗಳು ಒಂದಾಗಿ, ದೊಡ್ಡ ಶಕ್ತಿಯಾಗಿ ನಿಂತರೆ ಬರೀ ರಾಜ್ಯವಲ್ಲ, ಇಡೀ ದೇಶದ ಚಿತ್ರಣ ಬದಲಿಸಬಹುದು ಎಂದರು.

ದಲಿತರು, ರೈತರ ‘ಪ್ರವಾಹ’ಕ್ಕೆ ಕೊಚ್ಚಿ ಹೋಗಲಿರುವ ಮೋದಿ: ರಾಹುಲ್ ಕಿಡಿ!

ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಎಲ್ಲಾ ಸ್ವಾಮೀಜಿಗಳು ಸೇರಿಕೊಂಡು, ಎಲ್ಲಾ ಜಾತಿ, ಉಪ ಜಾತಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ರಾಷ್ಟ್ರೀಯ ಸ್ವಯಂ ಸೇವಕ ಸ್ಥಾಪನೆಯಾಗಿ ಶತಮಾನ ಕಳೆದರೂ ಇರುವುದೊಂದೇ ಸಂಘಟನೆ. ಅದು ಆರೆಸ್ಸೆಸ್‌ ಮಾತ್ರ. ಆದರೆ, 5 ದಶಕಗಳ ಹಿಂದೆ ಸ್ಥಾಪನೆಯಾದ ದಲಿತ ಸಂಘಟನೆಗಳು ನೂರಾರು ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
 

Follow Us:
Download App:
  • android
  • ios