Asianet Suvarna News Asianet Suvarna News

kadri gopalnath: ಕದ್ರಿ ಗೋಪಾಲನಾಥ್‌ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪತ್ನಿ ಅಸ್ವಸ್ಥ: ಸ್ವತಃ ಚಿಕಿತ್ಸೆ ನೀಡಿದ ಡಿಸಿ

  • ಭಾವುಕರಾಗಿ ಅಸ್ವಸ್ಥಗೊಂಡ ದಿ. ಕದ್ರಿ ಗೋಪಾಲನಾಥ್‌ ಅವರ ಪತ್ನಿ ಸರೋಜಿನಿ
  • ಸರೋಜಿನಿಯವರನ್ನು ಸ್ವತಃ ಜಿಲ್ಲಾಧಿಕಾರಿಯವರೇ ಉಪಚರಿಸಿ, ವೈದ್ಯರ ಮುಖೇನ ಚಿಕಿತ್ಸೆ ಕೊಡಿಸಿದರು
Dakshina Kannada DC KV Rajendra Treats Kadri gopalnath wife After She Fell Down in Program snr
Author
Bengaluru, First Published Dec 7, 2021, 9:06 AM IST
  • Facebook
  • Twitter
  • Whatsapp

ಬಂಟ್ವಾಳ (ಡಿ.07): ಭಾವುಕರಾಗಿ ಅಸ್ವಸ್ಥಗೊಂಡ ದಿ. ಕದ್ರಿ ಗೋಪಾಲನಾಥ್‌ (Kadri Gopalanath) ಅವರ ಪತ್ನಿ ಸರೋಜಿನಿಯವರನ್ನು ಸ್ವತಃ ಜಿಲ್ಲಾಧಿಕಾರಿಯವರೇ (DC) ಉಪಚರಿಸಿ, ವೈದ್ಯರ (Doctors) ಮುಖೇನ ಚಿಕಿತ್ಸೆ ಕೊಡಿಸಿದ ಘಟನೆ ಸೋಮವಾರ ಸಜಿಪದಲ್ಲಿ ನಡೆದಿದೆ. ಖ್ಯಾತ ಸ್ಯಾಕ್ಸೊಫೋನ್‌ (saxophone) ವಾದಕರಾಗಿದ್ದ ಕದ್ರಿ ಗೋಪಾಲನಾಥ್‌  ಜನ್ಮದಿನದ (Birth Aniversary) ಅಂಗವಾಗಿ ಸಜಿಪದಲ್ಲಿರುವ ಡಾ. ಕದ್ರಿ ಗೋಪಾಲನಾಥ್‌ ಅವರ ಸ್ಮಾರಕದ ಬಳಿ ಸೋಮವಾರ ಸಂಗೀತ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಕದ್ರಿ ಗೋಪಾಲನಾಥರ ಹೆಸರಿನಲ್ಲಿ ‘ಕದ್ರಿ ಗೋಪಾಲನಾಥ ಜೀವಿತಾವಧಿ ಸಾಧನೆ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ (Dakshina Kannada) ಡಾ. ಕೆ.ವಿ. ರಾಜೇಂದ್ರ (Dr KV Rajendra) ರವರು ಸೇರಿದಂತೆ ಹಲವಾರು ಗಣ್ಯರು, ಖ್ಯಾತಕಲಾವಿದರು, ಕದ್ರಿ ಕುಟುಂಬಿಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕದ್ರಿ ಗೋಪಾಲಾನಾಥ್‌ ಪತ್ನಿ ಸರೋಜಿನಿಯವರ ಆರೋಗ್ಯದಲ್ಲಿ(Health) ಏರಿಳಿತವಾಗಿದ್ದು, ತಕ್ಷಣ ಜಿಲ್ಲಾಧಿಕಾರಿಯವರೆ ಅವರಿಗೆ ಸಕ್ಕರೆ ನೀರು ಕೊಟ್ಟು ಉಪಚರಿಸಿದರು. ಬಳಿಕ ತಾಲೂಕು ಆರೋಗ್ಯಾಧಿಕಾರಿವರ ಮೂಲಕ ವೈದ್ಯರನ್ನು ಕರೆಯಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರು.

ಸ್ವತಃ ವೈದ್ಯರೂ ಆಗಿರುವ ಡಾ. ಕೆ.ವಿ. ರಾಜೇಂದ್ರ ಅವರು ಉಪಚಾರ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಪ್ರಶಂಸೆ ವ್ಯಕ್ತವಾಗಿದೆ.

ಕಳೆದ ವರ್ಷ ಸ್ಮಾರಕ ಲೋಕಾರ್ಪಣೆ :   ಖ್ಯಾತ ಸ್ಯಾಕ್ಸೋಫೋನ್‌ ವಾದಕ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್‌ ಅವರ ಹುಟ್ಟೂರು ಸಜಿಪದಲ್ಲಿ ಅವರ ಜನ್ಮದಿನವಾದ ಡಿ.6ರಂದು 2020 ರಂದು ಕುಟುಂಬದ (Family) ಸದಸ್ಯರು ಪುಣ್ಯಭೂಮಿ ಸ್ಮಾರಕ ಲೋಕಾರ್ಪಣೆ ಮಾಡಿದ್ದರು.

ಡಾ.ಕದ್ರಿ ಗೋಪಾಲನಾಥ್‌ ಅವರ ಸಮಾಧಿಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಅಲ್ಲಿ ಸಂಗೀತ ದೇಶ, ಧರ್ಮ ಮೀರಿದ ವಿಶ್ವಭಾಷೆ, ಹೃದಯ ಭಾಷೆ ಎಂದು ಬರೆದಿದ್ದು, ಕದ್ರಿಯವರ ಪುತ್ಥಳಿಯಿದೆ.   ಅವರ ಶಿಷ್ಯರಾದ ಚಂದ್ರಶೇಖರನಾಥ ಕಣಂತೂರು, ಜನಾರ್ದನನ್‌ ವಿ.ಆರ್‌. ಚೆನ್ನೈ, ಶ್ರೀಧರ್‌ ಸಾಗರ, ತ್ರಿಧಾತ್‌, ಪ್ರಕಾಶ್‌ ಕೊಡ್ಯಡ್ಕ, ಪೊ›.ಬಾಬುನಾರಾಯಣ್‌, ಗಣೇಶ್‌ ನಾಥ ಮತ್ತು ವೆಂಕಟಾಚಲಪತಿ ಸಂಗೀತ ಕಾರ್ಯಕ್ರಮ ನೀಡಿದ್ರು. ಸ್ಯಾಕ್ಸೋಫೋನ್‌ ಜೊತೆಗೆ ಮ್ಯಾಂಡೊಲಿನ್‌ ವಾದನ ಮೂಲಕ ತಮ್ಮ ಗುರುಗಳನ್ನು ನೆನಪಿಸಿಕೊಂಡರು

ಹೊಸತನದ ರೂವಾರಿ:  ಪಾಶ್ಚಾತ್ಯ ಸಂಗೀತ (Western Music) ಪರಿಕರವಾದ ಸ್ಯಾಕ್ಸೋಫೋನ್‌ನ್ನು ಕರ್ನಾಟಕ ಸಂಗೀತಕ್ಕೆ (Karnataka Sangeeth) ಅಳವಡಿಸಿದ ಜಗತ್ತಿನ ಏಕೈಕ ಕಲಾವಿದ ಕದ್ರಿ ಗೋಪಾಲನಾಥ್‌. ಇದರಲ್ಲಿ ಅವರು ಹಲವಾರು ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕೇವಲ ಕರ್ನಾಟಕ ಸಂಗೀತಕ್ಕೆ ಒಗ್ಗಿಕೊಳ್ಳದೆ ಹಿಂದೂಸ್ತಾನಿ ಸಂಗೀತವನ್ನೂ ಆಳವಾಗಿ ಅಭ್ಯಸಿಸಿ, ಚರ್ಚಿಸಿ ಅದರಲ್ಲಿನ ಅಂಶಗಳನ್ನು ತಮ್ಮ ಸಂಗೀತ ಕಛೇರಿಯಲ್ಲಿ ಅಳವಡಿಸಿ ಹೊಸತನ್ನು ಸೃಷ್ಟಿಮಾಡುತ್ತಿದ್ದರು. ಇದು ಅವರ ವಿಶೇಷ ಗುಣವಾಗಿತ್ತು ಎಂದರು.

ಮುಂಚಿತವಾಗಿಯೇ ಹಾಜರ್‌!: ಗೋಪಾಲನಾಥ್‌ ಸಂಗೀತ ತಂಡದಲ್ಲಿ ನಾವು ಐದು ಮಂದಿ- ಮೃದಂಗದಲ್ಲಿ ಬಿ.ಹರಿಕುಮಾರ್‌, ವಯೋಲಿನ್‌ನಲ್ಲಿ ಕನ್ಯಾಕುಮಾರಿ, ತಬಲಾದಲ್ಲಿ ನಾನು, ಮೊಹರ್‌ ಸಿಂಗ್‌ನಲ್ಲಿ ಬಿ.ರಾಜಶೇಖರ್‌ ಇದ್ದೆವು. ಎಲ್ಲೇ ಸಂಗೀತ ಕಛೇರಿ ಇರಲಿ, ಅದಕ್ಕಿಂತ ಸಾಕಷ್ಟುಮುಂಚಿತವಾಗಿಯೇ ಗೋಪಾಲನಾಥ್‌ ಅಲ್ಲಿ ಹಾಜರಿರುತ್ತಿದ್ದರು. 6 ಗಂಟೆಗೆ ಕಛೇರಿ ಇದ್ದರೆ 5 ಗಂಟೆಗೇ ಅಲ್ಲಿರುತ್ತಿದ್ದರು. ಸಮಯ ಪರಿಪಾಲನೆ ಅವರ ಶಿಸ್ತಿನ ಜೀವನಕ್ಕೆ ಸಾಕ್ಷಿಯಾಗಿತ್ತು ಎಂದು ಹೇಳಿದರು.

ಹೊರಗೆ ಜೋಕ್ಸ್‌, ವೇದಿಕೆಯಲ್ಲಿ ತಲ್ಲೀನ:  ಕಛೇರಿ ಬಿಟ್ಟು ಹೊರಗಿದ್ದಾಗ ಜೋಕುಗಳನ್ನು ಹೇಳಿ ನಗಿಸಿ ನಗುತ್ತಿದ್ದ ಕದ್ರಿ ಗೋಪಾಲನಾಥ್‌ ಒಮ್ಮೆ ವೇದಿಕೆ ಏರಿದರೆಂದರೆ ಸಂಗೀತದಲ್ಲೇ ಶೇ.100ರಷ್ಟುತಲ್ಲೀನರಾಗಿಬಿಡುತ್ತಿದ್ದರು. ಇಡೀ ತಂಡವನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದ ಅವರ ರೀತಿಯೇ ಅನನ್ಯ ಎಂದು ರಾಜೇಂದ್ರ ನಾಕೋಡ್‌ ಸ್ಮರಿಸಿದ್ದರು.  ಕೇಳುವವರಿಹರೆಂದು...: ಕೆಲವೊಂದು ಬಾರಿ ನಾಲ್ಕೈದು ಗಂಟೆ ಬಿಡದೆ ಸಂಗೀತ ಕಛೇರಿ ನಡೆಸುತ್ತಿದ್ದರು. ಯಾಕ್‌ ಸಾರ್‌ ಎಂದರೆ, ಜನರನ್ನು ಖುಷಿಪಡಿಸಬೇಕು. ಅವರು ಕೇಳುತ್ತಿದ್ದಾರೆ ಎಂದರೆ ನಾನು ನುಡಿಸಲೇಬೇಕು ಎನ್ನುತ್ತಿದ್ದರು. ಅವರ ಸಂಗೀತ ಸೇವೆ ಅಪರೂಪದ್ದು ಎಂದು ನಾಕೋಡ್‌ ಸ್ಮರಿಸಿಕೊಂಡಿದ್ದರು

Follow Us:
Download App:
  • android
  • ios