Asianet Suvarna News Asianet Suvarna News

Hindu Leader in Trouble : ದಕ್ಷಿಣ ಕನ್ನಡ ಡಿಸಿಯಿಂದ ಹಿಂದೂ ಮುಖಂಡ ಕಾರಂತ್ ವಿರುದ್ಧ ದೂರು

  • ಹಿಂದೂ ಮುಖಂಡ ಜಗದೀಶ್ ಕಾರಂತ್ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಡಾ.ಕೆ.ವಿ ರಾಜೇಂದ್ರ ದೂರು ದಾಖಲು
  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ 
dakshina kannada DC lodge Complaint against hindu leader jagadish karanth snr
Author
Bengaluru, First Published Nov 24, 2021, 2:19 PM IST

ಮಂಗಳೂರು (ನ.24):   ಹಿಂದೂ ಮುಖಂಡ ಜಗದೀಶ್ ಕಾರಂತ್ (Hindu leader Jagadish karanth) ವಿರುದ್ದ ದಕ್ಷಿಣ ಕನ್ನಡ (Dakshina kannada) ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ (DC KV Rajendra) ದೂರು ದಾಖಲಿಸಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (bantwal) ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲು ಮಾಡಲಾಗಿದೆ.  ಡಿ ಸಿ ಕಚೇರಿಗೆ ನುಗ್ಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೊರಳ ಪಟ್ಟಿ ಹಿಡಿಯುವುದಾಗಿ ಹೇಳಿ  ಪ್ರಚೋದನಕಾರಿ ಭಾಷಣ ಹಿನ್ನೆಲೆ ಡಿಸಿ ಡಾ.ಕೆ.ವಿ.ರಾಜೇಂದ್ರ ಜಗದೀಶ್ ಕಾರಂರತ್ ವಿರುದ್ಧ ಇಂದು ದೂರು (Complaint) ದಾಖಲು ಮಾಡಿದ್ದಾರೆ. 

ನ.21ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನ (Temple) ಉಳಿಸಿ ಹೋರಾಟದಲ್ಲಿ ಜಗದೀಶ್ ಕಾರಂತ ಭಾಷಣ (Speech) ಮಾಡಿದ್ದರು. ಈ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಅವರ ವಿರುದ್ಧ 153,117, 504, 506, 189 ಐಪಿಸಿ ಸೆಕ್ಷನ್ ಗಳ (IPC Section) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಸಾರ್ವಜನಿಕ ನೌಕರನಿಗೆ ಭೀತಿಯನ್ನುಂಟು ಮಾಡಿರುವುದಲ್ಲದೇ, ಸರಕಾರಿ ಅಧಿಕಾರಿಗೆ (Govt servant) ಹಾನಿ ಮತ್ತು ಹಲ್ಲೆ ಮಾಡಲು ಪ್ರಚೋದನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.  

ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ಕಲ್ಲು ಗಣಿಗಾರಿಕೆ (Mining) ನಿಲ್ಲಿಸಲು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ್ದ ಜಗದೀಶ್ ಕಾರಂತ್ ಕಲ್ಲು ಗಣಿಗಾರಿಕೆ ನಿಲ್ಲಿಸಲು ಡಿ.21ರವರೆಗೆ ಜಿಲ್ಲಾಧಿಕಾರಿಗೆ (DC) ಗಡುವು ಕೊಡುತ್ತೇವೆ.   ಇಲ್ಲದೇ ಇದ್ದರೆ ಡಿ.21ರಂದು ಎಲ್ಲರೂ ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕುತ್ತೇವೆ ಎಂದು ಹೇಳಿದ್ದರು. ಇಲ್ಲವಾದಲ್ಲಿ ಅವನ ಕೊರಳು ಪಟ್ಟಿಯನ್ನ ಹಿಡೀತೀವಿ, ತಾಕತ್ತಿದ್ದರೆ ಕಲ್ಲು ಗಣಿಗಾರಿಕೆ ನಿಲ್ಲಿಸು, ಇಲ್ಲವೆಂದರೆ ಟ್ರಾನ್ಸ್ಪರ್ (Transfer)  ತೆಗೆದುಕೊಂಡು ಹೋಗು ಎಂದು ಭಾಷಣದಲ್ಲಿ ಹೇಳಿದ್ದರು. 

ಜಿಲ್ಲಾ ಉಸ್ತುವಾರಿ ಮಂತ್ರಿಗೂ (In Charge Minister) ಹೇಳುತ್ತೇವೆ, ಗಣಿಗಾರಿಕೆ ನಿಲ್ಲಿಸಿ, ಇಲ್ಲವೆಂದರೆ ರಾಜೀನಾಮೆ (Resignation) ಕೊಟ್ಟು ‌ಮನೆಗೆ ಹೋಗಿ. ಬಂಟ್ವಾಳ ಎಂಎಲ್ಎಯೂ (MLA) ತಮ್ಮಿಂದ ಈ ಕೆಲಸ ಆಗಿಲ್ಲವೆಂದಾದಲ್ಲಿ ರಾಜೀನಾಮೆ ಕೊಟ್ಟು ಹೊಗಲಿ. ರಾಜ್ಯದಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ 30 ದಿನಗಳ ಕಾಲಾವಕಾಶ ಕೊಡುತ್ತಿದ್ದೇವೆ ಎಂದು ಜಗದೀಶ್ ಕಾಂರತ್ ಎಚ್ಚರಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಇದೀಗ ದೂರು ದಾಖಲು ಮಾಡಲಾಗಿದೆ. 

SDPI ನಿಂದ ಕಾಂಗ್ರೆಸ್ ಮುಖಂಡರಿಗೆ ಬೆದರಿಕೆ : ಮಾಜಿ ಸಚಿವ ಯು.ಟಿ. ಖಾದರ್ (UT Khader) ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ವಿರುದ್ದ ಎಸ್ ಡಿಪಿಐ (SDPI) ವಾರ್ ಆರಂಭಿಸಿದೆ. ಕಾಂಗ್ರೆಸ್ (congress) ಮುಖಂಡರಿಗೆ ಬಹಿರಂಗವಾಗಿ  ಎಸ್ ಡಿಪಿಐ ಜಿಲ್ಲಾಧ್ಯಕ್ಷ  ಕೊಲೆ ಬೆದರಿಕೆ (Murder Threat) ಒಡ್ಡಿದ್ದಾರೆನ್ನಲಾಗಿದೆ.  'ಕಾಂಗ್ರೆಸ್ಸಿಗರನ್ನು ಆಸ್ಪತ್ರೆಗೆ (hosputal) ಕಳುಹಿಸಲೂ ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸಲೂ ಗೊತ್ತಿದೆ' ಎಂದು ಮಂಗಳೂರಿನ (mangaluru) ಉಳ್ಳಾಲದಲ್ಲಿ (Ullal) ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ (Abubakar kulai) ಬಹಿರಂಗವಾಗಿ ಹೇಳಿದೆ ನೀಡುವ ಮೂಲಕ ಬೆದರಿಕೆ ಒಡ್ಡಿದ್ದರು. 

ಸಾಮಾಜಿಕ ತಾಣಗಳಲ್ಲಿ (social media) ಸದ್ಯ ಕಾಂಗ್ರೆಸ್ (Congress) ಮುಖಂಡರಿಗೆ ಬೆದರಿಕೆ ಹಾಕಿದ ಎಸ್‌ಡಿಪಿಐ ಮುಖಂಡನ ಭಾಷಣ ವೈರಲ್ (Viral) ಆಗಿದೆ. ಕಾಂಗ್ರೆಸ್ ಪಕ್ಷದವರು ನಿರಾಶ ಭಾವನೆಗೆ ಹೋಗಿರೋದನ್ನ ಗಮನಿಸುತ್ತಿದ್ದೇವೆ,  ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ಕ್ಷೇತ್ರದಲ್ಲಿ ನಮ್ಮ ಎಸ್ ಡಿಪಿಐ ಪ್ರತಿನಿಧಿಗಳು ಬೆಳೆಯುತ್ತಾ ಇದ್ದಾರೆ ಎಂದು ಅಬೂಬಕ್ಕರ್ ಕುಳಾಯಿ ಹೇಳಿದ್ದಾರೆ.  

ಎಸ್‌ಡಿಪಿಐ ಬೆಳೆಯುತ್ತಾ ಇರುವುದನ್ನು ಕಂಡು ಅವರಿಗೆ ಸಹಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಯಾರೋ ಕಾಂಜಿ ಪೀಂಜಿ ಗಾಂಜಾದವರನ್ನ (Ganja) ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇಷ್ಟರ ವರೆಗೆ ನಾವು ತಲೆ ತಗ್ಗಿಸಿದ್ದೇವೆ, ಆದರೆ ನಮಗೆ ಎರಡು M ಇದೆ.  ಇದರಲ್ಲಿ ಒಂದು ಮ್ಯಾನ್ ಪವರ್ (Man power), ಇನ್ನೊಂದು ಮಸಲ್ ಪವರ್ (Muscle Power) ಎಂದು ಹೇಳಿಕೆ ನೀಡಿದ್ದರು. ಇನ್ನೆಲ್ಲಿಯಾದರೂ ನಮ್ಮ ‌ಪಕ್ಷದ ಕಾರ್ಯಕರ್ತರನ್ನ (workers) ಮುಟ್ಟಿದರೆ ಒಂದು M ಯೂಸ್ ಮಾಡುತ್ತೇವೆ ಎಂದು ಭಾಷಣದಲ್ಲಿ ಹೇಳಿಕೆ ನೀಡಿದ್ದು, ಎಸ್ ಡಿಪಿಐಗೆ ಸೇರುವುದಾದರೆ ಆಸ್ಪತ್ರೆ ಮಲಗೋಕೆ, ಜೈಲಿಗೆ (jail) ಹೋಗೋಕೆ, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು ಎಂದು ಹೇಳಿರುವುದು ವೈರಲ್ ಆಗಿತ್ತು. 

Follow Us:
Download App:
  • android
  • ios