Asianet Suvarna News Asianet Suvarna News

ಸಾಹಿತ್ಯದಲ್ಲಿ ವರಕವಿ ದ.ರಾ.ಬೇಂದ್ರೆ ಯಾರನ್ನು ಅನುಕರಿಸಿಲ್ಲ: ಶ್ಯಾಮಸುಂದರ ಬಿದರಕುಂದಿ

ವರಕವಿ ದ.ರಾ.ಬೇಂದ್ರೆಯವರು ಯಾರನ್ನು ಅನುಕರಣೆ ಮಾಡಿಲ್ಲ. ಎಲ್ಲವೂ ಹೊಸತೆ ಆಗಬೇಕೆಂಬ ನೂತನ ಸಾಹಿತ್ಯ ಕೃಷಿ ಅವರು ಮಾಡಿದ್ದು, ಜೀವನಕ್ಕೆ ಉದ್ಯೋಗವಷ್ಟೇಯಲ್ಲ ಆದರ್ಶವೂ ಬೇಕು ಎಂದು ಅವರು ತಿಳಿದಿದ್ದರು ಎಂದು ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಿಶ್ರಾಂತ ಅಧ್ಯಕ್ಷ ಶ್ಯಾಮಸುಂದರ ಬಿದರಕುಂದಿ ಹೇಳಿದರು. 
 

da ra bendre sahitya sptaha programme at hubballi gvd
Author
First Published Sep 24, 2023, 2:09 PM IST

ಹುಬ್ಬಳ್ಳಿ (ಸೆ.24): ವರಕವಿ ದ.ರಾ.ಬೇಂದ್ರೆಯವರು ಯಾರನ್ನು ಅನುಕರಣೆ ಮಾಡಿಲ್ಲ. ಎಲ್ಲವೂ ಹೊಸತೆ ಆಗಬೇಕೆಂಬ ನೂತನ ಸಾಹಿತ್ಯ ಕೃಷಿ ಅವರು ಮಾಡಿದ್ದು, ಜೀವನಕ್ಕೆ ಉದ್ಯೋಗವಷ್ಟೇಯಲ್ಲ ಆದರ್ಶವೂ ಬೇಕು ಎಂದು ಅವರು ತಿಳಿದಿದ್ದರು ಎಂದು ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಿಶ್ರಾಂತ ಅಧ್ಯಕ್ಷ ಶ್ಯಾಮಸುಂದರ ಬಿದರಕುಂದಿ ಹೇಳಿದರು. 

ಇಲ್ಲಿನ ಗೋಕುಲರಸ್ತೆಯ ಬಸವೇಶ್ವರನಗರದ ಡಾ.ಕೆ.ಎಸ್.ಶರ್ಮಾ ಕ್ಯಾಂಪಸ್ ನ ವಿಶ್ವಶ್ರಮ ಚೇತನದಲ್ಲಿ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ.ಕೆ.ಎಸ್.ಶರ್ಮಾ ಸಮೂಹ ಸಂಸ್ಥೆಗಳು ಸಂಯುಕ್ತ ಆಶ್ರಯದಲ್ಲಿ ಡಾ.ಕೆ.ಎಸ್.ಶರ್ಮಾ ಇವರ 90 ನೇ ಜನ್ಮ‌ದಿನೋತ್ಸವದ ಅಂಗವಾಗಿ ಆಯೋಜಿಸಿರುವ ಡಾ.ದ.ರಾ.ಬೇಂದ್ರೆ ಸಾಹಿತ್ಯ ಚಿಂತನೆಯ ಕಾರ್ಯಕ್ರಮ, ವರಕವಿ ಡಾ.ದ.ರಾ.ಬೇಂದ್ರೆ ಸಾಹಿತ್ಯ ಸಪ್ತಾಹ, ಡಾ.ದ.ರಾ.ಬೇಂದ್ರೆ ಅವರ ಸಮಗ್ರ ಸಾಹಿತ್ಯ ಹಾಗೂ ಬಹುಮುಖ ವ್ಯಕ್ತಿತ್ವದ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾವೇರಿ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ: ವಿಜಯೇಂದ್ರ

ಹೊಸಗನ್ನಡದ ಆಧುನಿಕ ಕವಿ ದ.ರಾ.ಬೇಂದ್ರೆಯಾಗಿದ್ದು, ಯಾರನ್ನೂ ಅನುಕರಣೆ ಮಾಡದೇ ಹೊಸ ಸಾಹಿತ್ಯ ಸೃಷ್ಟಿ ಮಾಡಿದ ಅದ್ಭುತ ಕವಿ ಅವರಾಗಿದ್ದರು ಎಂದವರು,  ಬದುಕಿನುದ್ದಕ್ಕೂ ಅವರು ಸಹೃದಯರು ಇಲ್ಲದಿದ್ದರೆ ಸಮಾಜ ಹಾಳಾಗುತ್ತದೆ. ವಿಜ್ಞಾನ, ಯಂತ್ರ ಬಳಸಿಕೊಂಡು ಸಮಾಜವನ್ನು ತಿದ್ದಲು ಮುಂದಾದರು. ಹಕ್ಕಿ ಹಾರುತಿದೆ ಎಂದು ಕವನದ ಮೂಲಕ ಯಾವುದೂ ಶಾಶ್ವತವಲ್ಲ ಎಂದು ಜಾಗೃತಿ ಮೂಡಿಸಿದ್ದರು. ಗುರು ಭಕ್ತಿ, ದೈವಭಕ್ತಿ ಅವರ ಶ್ರೀಮಂತಿಕೆಯಾಗಿತ್ತು, ಬಡವರಾಗಿದ್ದರೂ ಕೂಡಾ ಅವರು ಶಪಿಸಿಲ್ಲ. ಅವರಲ್ಲಿ ಶಬ್ದ ಶಕ್ತಿಯಿತ್ತು. ಹೀಗಾಗಿ ಅದರಲ್ಲಿ ಎಲ್ಲರಿಗಿಂತಲೂ ಶ್ರೀಮಂತರಾಗಿದ್ದರು.

ಅವರು 86 ವರ್ಷ ಬದುಕಿ 63 ವರ್ಷ ಸಾಹಿತ್ಯದ ಜೊತೆ ಬಾಳಿದವರಾಗಿದ್ದು, ಯುದ್ಧವಲ್ಲ ಹೊಸ ಜೀವನದ ಆಶಯಗಳನ್ನು ರೂಪಿಸಿಕೊಳ್ಳಬೇಕು ಹಾಗೂ ಸ್ವಾತಂತ್ರ್ಯಕ್ಕಾಗಿ ಮನುಷ್ಯ ಸ್ವಾಭಿಮಾನಿಯಾಗಬೇಕು. ನಮ್ಮತನವನ್ನು ಕಂಡುಕೊಂಡು ದನಿಕೊಡಬೇಕು ಎಂದು ಬೇಂದ್ರೆಯವರು  ಕವನದಲ್ಲಿ ಅವರು ಹೇಳಿದ್ದಾರೆ.  ಆಘಾದವಾದ ಪ್ರತಿಭೆಯನ್ನು ಹೊಂದಿದ್ದ ಅವರು ದೇಶಿ ಅನುಭವವನ್ನು ಅವರು ನುಡಿಗಟ್ಟಾಗಿ ಮಾಡುತ್ತಿದ್ದರು‌. ಜಾನಪದ ಹಾಡಿನ ಆಳಕ್ಕೆ ಇಳಿಯುತ್ತಿದ್ದ ಅವರು ಸಾಮಾನ್ಯ ಜನರ ಪಾಡು ಹಾಡಾಗಿ ಬರುತ್ತಿತ್ತು. ಆಧುನಿಕ ಕಾಲದ ಮಾನವ ಮಹಾಮಾನವನಾಗಬೇಕೆಂದು ಅವರು ಸಂದೇಶ ನೀಡಿದವರು ಎಂದರು.

ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಚೇರ್ಮನ್ ಮೋಹನ್ ಲಿಂಬಿಕಾಯಿ ಮಾತನಾಡಿ, ದ.ರಾ.ಬೇಂದ್ರೆ ಸಾಹಿತ್ಯ ಕೃಷಿ 1991 ರಿಂದ ವಿಶ್ವಶ್ರಮಚೇತನದ ಆವರಣದಲ್ಲಿ ಡಾ.ಕೆ.ಎಸ್.ಶರ್ಮಾ ಅವರ ಮೂಲಕ ನಡೆಯುತ್ತಿದೆ. ದ.ರಾ.ಬೇಂದ್ರೆ ಶಬ್ದ ಗಾರುಡಿಗ ಅಂತಾ ಕರಿತ್ತೇವಿ. ಅವರು ಬರೆದ ಪದ್ಯ ಸಾಮಾನ್ಯವಾಗಿ ಅರ್ಥ ಆಗೋದಿಲ್ಲ. ಹೀಗಾಗಿ ಇದಕ್ಕಾಗಿಯೇ ಬೇಂದ್ರೆ ನಿಘಂಟನ್ನು ಡಾ.ಕೆ.ಎಸ್.ಶರ್ಮಾ ಅವರು ಬಿಡುಗಡೆ ಆಗಿದೆ. ಬೇಂದ್ರೆ ಪದ್ಯ ಓದುವಾಗ ನಿಘಂಟು ಪಕ್ಕದಲ್ಲಿ ಇಟ್ಟುಕೊಂಡು ಓದಬೇಕು ಅಂದಾಗ ಮಾತ್ರ ಬೇಂದ್ರೆ ಕಾವ್ಯ ಪರಿಪೂರ್ಣವಾಗಿ ಅರ್ಥ ಆಗುತ್ತದೆ ಎಂದರು.

ಯಾವ ರೀತಿಯಲ್ಲಿ ಸೆಕ್ಸಪೀಯರ್ ನಾಟಕದ ಕೊನೆಯಲ್ಲಿ ಸಮಾಜಕ್ಕೆ ನೀತಿ ಪಾಠ ಹೇಳುತ್ತದೆ ಅದೇ ಮಾದರಿಯಲ್ಲಿ ದ.ರಾ.ಬೇಂದ್ರೆ ಅವರ ಕಾವ್ಯ ಕೂಡಾ ಓದಿದ ಬಳಿಕ ಒಂದೊಂದು ನೀತಿಯನ್ನು ಅರ್ಥ ಮಾಡಿಸುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ದ.ರಾ.ಬೇಂದ್ರೆ ಅವರ ಸಾಹಿತ್ಯವನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದರು. ಕ.ರಾ.ಸ.ದಿ.ನೌ.ಮಹಾಮಂಡಳದ ಅಧ್ಯಕ್ಷರು ಹಾಗೂ  ಸಾಹಿತಿ ಕೆ.ಎಸ್. ಶರ್ಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಬಳಿಕ ನಟ ಅನಂತಕೃಷ್ಣ ದೇಶಪಾಂಡೆಯವರಿಂದ ವರಕವಿ ದ.ರಾ.ಬೇಂದ್ರೆ ಅವರ ಏಕವ್ಯಕ್ತಿ ನಾಟಕಭಿನಯವನ್ನು ಮಾಡಿ  ಸಭೆಯಲ್ಲಿ ನೆರೆದಿದ್ದ ಸಭಿಕರನ್ನು ಮನರಂಜನೆ ಮಾಡುವಲ್ಲಿ ಅವರು ಸಫಲರಾದರು. ಈ ಸಂದರ್ಭದಲ್ಲಿ ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಸೋಮಶೇಖರ್ ಹುದ್ದಾರ, ಚರಂತಯ್ಯ ಹಿರೇಮಠ, ಸಂಜಯ ತ್ರಾಸದ, ಪವನ ದೇಸಾಯಿ, ಸುಮಿತ್ರಾ ಪೋತ್ನಿಸ್,  ಸುಲೋಚನಾ ಪೋತ್ನಿಸ್, ಪುನರ್ವಸು ಬೇಂದ್ರೆ ಉಪಸ್ಥಿತರಿದ್ದರು. 

Chikkaballapur: ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್‌ ಈಶ್ವರ್‌

ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ: ವರಕವಿ ಡಾ.ದ.ರಾ.ಬೇಂದ್ರೆ ಸಾಹಿತ್ಯ ಸಪ್ತಾಹ ಹಿನ್ನೆಲೆ ಸೆ.24 ರಂದು ಸಂಜೆ 4.30 ಕ್ಕೆ ಡಾ.ದ.ರಾ.ಬೇಂದ್ರೆಯವರ ಕವನಗಳ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಹಿಂದೂಸ್ಥಾನಿ ಗಾಯಕಿ ಸಂಗೀತಾ ಕಟ್ಟಿ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

Follow Us:
Download App:
  • android
  • ios