Asianet Suvarna News Asianet Suvarna News

CT Ravi: ಅಟಲ್‌ಜೀ, ಮೋದಿಯವರಂತೆ ಭಾರತವನ್ನು ಮುನ್ನಡೆಸುವ ಗುಣ ಬೆಳೆಸಿಕೊಳ್ಳಿ: ಸಿ.ಟಿ.ರವಿ

ಭವಿಷ್ಯದಲ್ಲಿ ಭಾರತವನ್ನು ಮುನ್ನಡೆಸುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

Cultivate the character to lead India says CT Ravi at chikkamagaluru rav
Author
First Published Jan 4, 2023, 9:03 AM IST

ಚಿಕ್ಕಮಗಳೂರು (ಜ.4) : ಭವಿಷ್ಯದಲ್ಲಿ ಭಾರತವನ್ನು ಮುನ್ನಡೆಸುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಯುವ ಮೋರ್ಚಾ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಅಟಲ್‌ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಮುನ್ನ​ಡೆ​ಸು​ವ ಗುಣಗಳು ನಮ್ಮಲ್ಲಿ ಬರಬೇಕಾದರೆ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಆ ಯಶಸ್ಸು ವೈಯಕ್ತಿಕ ಆಗಬಾರದು ಎಂದು ಸಲಹೆ ನೀಡಿ​ದರು.

\ಹಳೆ ಮೈಸೂರಲ್ಲಿ ಒಕ್ಕಲಿಗರ ಸೆಳೆಯಲು ಬಿಜೆಪಿ ತಂತ್ರ: ಸಿ.ಟಿ.ರವಿ

ಅಟಲ್‌ಜೀ ಅವರು ಚುನಾವಣೆಗಾಗಿ ಯೋಚನೆ ಮಾಡುವ ರಾಜಕಾರಣಿ ಆಗಿರಲಿಲ್ಲ. ಅವರು ಅಜಾತಶತ್ರು. ರಾಷ್ಟ್ರದ ಹಿತದೃಷ್ಟಿವಿಚಾರದಲ್ಲಿ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರಲ್ಲಿತ್ತು. ಹೂವಿನಂತೆ ಮೃದು, ವಜ್ರದಷ್ಟು ಕಠಿಣವೂ ಹೌದು. ಮಾತಿನಲ್ಲಿ ವೇಗ ಇರಲಿಲ್ಲ, ಭಾವ ತುಂಬಿ ಮಾತನಾಡುತ್ತಿದ್ದರು. ಯುವಸಮೂಹ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಸಂವಾದ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಅಲ್ಲಿ ಉರು ಹೊಡೆದು ಮಾತನಾಡುವುದಲ್ಲ, ವಿಷಯವನ್ನು ಗ್ರಹಿಸಿ ಅನುಭವಿಸಿ ಮಾತನಾಡಬೇಕು ಎಂದು ತಿಳಿ​ಸಿ​ದರು.

ಅಟಲ್‌ಜೀ(Atal bihari vajapeyi), ನರೇಂದ್ರ ಮೋದಿ(narendra modi) ಅವರಂತೆ ನಮ್ಮಲ್ಲಿ ರಾಷ್ಟ್ರೀಯ, ಸಮಾಜದ ಚಿಂತನೆ ಇರಬೇಕು, ಆ ರೀತಿಯ ನಾಯಕತ್ವದಿಂದ ಮುಂದಿನ ದಿನಗಳಲ್ಲಿ ಭಾರತವನ್ನು ಲೀಡ್‌ ಮಾಡಬಹುದು. ಜಾತಿವಾದಿಗಳಿಂದ, ಬಂಡವಾಳಶಾಹಿಗಳಿಂದ ಭಾರತವನ್ನು ಲೀಡ್‌ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಭಾರತೀಯತೆ ಮೈಗೂಡಿಸಿಕೊಂಡು ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ಕೆಲಸ ಮಾಡುವ ನಾಯಕತ್ವ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಜ್ಞಾನಯೋಗಿಮ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ(Siddeshwar swamiji) ಅವರದು ಸಾರ್ಥಕ ಬದುಕು. ಅವರ ಮಾತು ಮುತ್ತಿನಂತೆ, ಅದು, ನಮ್ಮ ಜೀವನಕ್ಕೆ ದಾರಿದೀಪ. ಚಿಕ್ಕ ಕಥೆ, ಉಪನ್ಯಾಸಗಳು ಯೂ ಟ್ಯೂಬ್‌ನಲ್ಲಿ ಸಿಗುತ್ತವೆ. ಅವುಗಳನ್ನು ಕೇಳಿದಾಗ ನಮ್ಮ ಬದುಕಿಗೂ ಅನುಕೂಲ ಆಗುತ್ತದೆ ಎಂದರು.

Chikkamagaluru: 20 ವರ್ಷಗಳ ಬಳಿಕ ಸಿ.ಟಿ.ರವಿ ವಿರುದ್ಧ ಬಂಡಾಯದ ಕಹಳೆ

ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ, ನಗರ ಅಧ್ಯಕ್ಷ ಮಧುಕುಮಾರ್‌ ರಾಜೇ ಅರಸ್‌, ಯುವ ಮೋರ್ಚಾ ಜಿಲ್ಲಾ ಉಸ್ತುವಾರಿ ಚಿಕ್ಕದೇವನೂರು ರವಿ, ಯುವ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅನೂಪ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios