ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿ ಪಂಚಾಯತ್‌ನಿಂದ ಪಾರ್ಲಿಂಮೆಂಟ್‌ ಹಂತದವರೆಗಿನ ಒಕ್ಕಲಿಗರ ನಾಯಕರನ್ನು ಸೆಳೆಯಲು ಬಿಜೆಪಿ ನಾನಾ ತಂತ್ರಗಳನ್ನು ರೂಪಿಸಿದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಮತ್ತು ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ನವದೆಹಲಿ (ಜ.02): ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿ ಪಂಚಾಯತ್‌ನಿಂದ ಪಾರ್ಲಿಂಮೆಂಟ್‌ ಹಂತದವರೆಗಿನ ಒಕ್ಕಲಿಗರ ನಾಯಕರನ್ನು ಸೆಳೆಯಲು ಬಿಜೆಪಿ ನಾನಾ ತಂತ್ರಗಳನ್ನು ರೂಪಿಸಿದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಮತ್ತು ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವ ಅಮಿತ್‌ ಶಾ ಮಂಡ್ಯದಲ್ಲಿ ಬೃಹತ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಕ್ಷದ ಪರ ಅಲೆ ಯತ್ನಿಸಲು ಮುನ್ನುಡಿ ಬರೆದ ಬೆನ್ನಲ್ಲೇ ಇಲ್ಲಿ ಪ್ರತಿಕ್ರಿಯೆ ನೀಡಿರುವ ಅರುಣ್‌ ಸಿಂಗ್‌ ‘ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ದಾಖಲೆ ಸಂಖ್ಯೆಗಳನ್ನು ಗೆಲ್ಲಲಿದೆ. ಅದಕ್ಕಾಗಿ ನಾವು ಕಳೆದ ಕೆಲ ಸಮಯದಿಂದ ಬೂತ್‌ ಮಟ್ಟದ ಕಾರ್ಯಾಚರಣೆ ಆರಂಭಿಸಿದ್ದೇವೆ. ಕರ್ನಾಟಕ ಸರ್ಕಾರದಲ್ಲೂ ಹಲವು ಒಕ್ಕಲಿಗ ಸಚಿವರಿದ್ದಾರೆ. ಅದೇ ರೀತಿ ಕೇಂದ್ರ ಸಚಿವ ಸಂಪುಟದಲ್ಲೂ ಒಕ್ಕಲಿಗರಿದ್ದಾರೆ. ಬಿಜೆಪಿಯಲ್ಲಿ ಎಲ್ಲಾ ಸಮುದಾಯಕ್ಕೂ ಸಾಕಷ್ಟು ಅವಕಾಶವಿದೆ. ಪಕ್ಷ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ತತ್ವದಲ್ಲಿ ನಂಬಿಕೆ ಇಟ್ಟಿದೆ’ ಎಂದು ಹೇಳಿದ್ದಾರೆ.

ಅಭಿವೃದ್ಧಿಯಾದಂತೆ ಬೇಡಿಕೆ ಹೆಚ್ಚಳ: ಸಚಿವ ಶಿವರಾಮ ಹೆಬ್ಬಾರ

ಪಕ್ಷದ ಇನ್ನೋರ್ವ ಹಿರಿಯ ನಾಯಕ ಸಿ.ಟಿ.ರವಿ ಕೂಡಾ ಅರುಣ್‌ಸಿಂಗ್‌ ಧಾಟಿಯಲ್ಲೇ ಮಾತನಾಡಿದ್ದು, ‘ಹಳೆಯ ಮೈಸೂರು ಭಾಗದಲ್ಲಿ 2 ರೀತಿಯ ಕಾರ್ಯತಂತ್ರ ರೂಪಿಸಿ ಅದರ ಜಾರಿಗೆ ಪ್ರಯತ್ನಿಸುತ್ತಿದ್ದೇವೆ. ಪೇಜ್‌ ಸಮಿತಿಯಿಂದ ಹಿಡಿದು ಮಂಡಲ ಮಟ್ಟದವರಿಗೆ ಈಗಾಗಲೇ ನಾವು ನಮ್ಮ ತಳಮಟ್ಟದ ತಂಡಗಳನ್ನು ಸಕ್ರಿಯಗೊಳಿಸಿದ್ದೇವೆ. ಜೊತೆಗೆ ಪಂಚಾಯತ್‌ ಹಂತದಿಂದ ಹಿಡಿದು ಪಾರ್ಲಿಮೆಂಟ್‌ ಹಂತದವರೆಗ ಸಮಾನ ಮನಸ್ಕ ಒಕ್ಕಲಿಗ ನಾಯಕರನ್ನು ಪಕ್ಷ ಸೇರುವಂತೆ ಆಹ್ವಾನಿಸಿದ್ದೇವೆ’ ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯನ್ನು ಕೇವಲ ಸಮುದಾಯ ಕೇಂದ್ರಿತ ಪಕ್ಷ ಎಂದು ಯಾರೂ ಕಾಣಬಾರದು, ಏಕೆಂದರೆ ಪಕ್ಷವು ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ರಾಜಕೀಯದಲ್ಲಿ ನಂಬಿಕೆ ಹೊಂದಿದೆ ಎಂದು ಉಭಯ ನಾಯಕರು ಪ್ರತಿಪಾದಿಸಿದ್ದಾರೆ.

ಜ.12ರಂದು ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ: ಜಿಲ್ಲಾಧಿಕಾರಿ ಗುರುದತ್ತ

ಕೇವಲ 9 ಸೀಟು ಗೆದ್ದಿದ್ದ ಬಿಜೆಪಿ: ಹಳೆ ಮೈಸೂರು ಭಾಗವು (ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ) ಒಕ್ಕಲಿಗರ ಮತ ಪ್ರಾಬಲ್ಯ ಹೊಂದಿದ್ದು, ರಾಜ್ಯ ವಿಧಾನಸಭೆಯಲ್ಲಿ 59 ಸ್ಥಾನಗಳನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿ ಇಲ್ಲಿ ಕೇವಲ 9 ಸ್ಥಾನ ಗೆದ್ದಿತ್ತು. ಹೀಗಾಗಿ ಈ ಬಾರಿ ಇಲ್ಲಿಗೆ ಹೆಚ್ಚಿನ ಗಮನ ನೀಡಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.