ಬೆಂಗಳೂರು ಪೊಲೀಸರಿಗೆ ಸತ್ತಿರುವ ಇಲಿಯ ಊಟ ಕೊಟ್ಟ ಹೋಟೆಲ್ ವಿರುದ್ಧ ಕ್ರಿಮಿನಲ್ ಕೇಸ್!
ಬೆಂಗಳೂರು ಬಂದ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಇಲಿ ಸತ್ತು ಬಿದ್ದಿರುವ ಊಟ ಸರಬರಾಜು ಮಾಡಿದ ಹೋಟೆಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

ಬೆಂಗಳೂರು (ಸೆ.26): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಕೈಗೊಂಡಿದ್ದ ಬೆಂಗಳೂರು ಬಂದ್‌ಗೆ ಭದ್ರತೆಗಾಗಿ ಬಂದ ಪೊಲೀಸ್ ಸಿಬ್ಬಂದಿಗೆ ಕಳಪೆ ಊಟ (ಊಟದಲ್ಲಿ ಸತ್ತಿರುವ ಇಲಿ ಪತ್ತೆ) ಸರಬರಾಜು ಮಾಡಿದ ಹೋಟೆಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಹಾಗೂ ವಿಶ್ರಾಂತಿ ಸಿಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯವಾಗಿದೆ. ಈಗ ಪೊಲೀಸ್ ಸಿಬ್ಬಂದಿಗೆ ಕೊಡುವ ಊಟದಲ್ಲಿಯೂ ಕಳಪೆ ಊಟ ಸರಬರಾಜು ಮಾಡಿದರೆ ಹೇಗಿರುತ್ತದೆ ಹೇಳಿ. ಕಳಪೆ ಆಹಾರ ಪೂರೈಕೆಯಲ್ಲಿಯೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಹೊರ ಜಿಲ್ಲೆಗಳು ಹಾಗೂ ಬೆಂಗಳೂರಿನ ಹೊರ ವಲಯದ ವಿವಿಧ ಪೊಲೀಸ್ ಠಾಣೆಯಿಂದ ಬೆಂಗಳೂರು ಬಂದ್ ಭದ್ರತೆಗೆ ಬಂದ ಪೊಲೀಸ್ ಸಿಬ್ಬಂದಿಗೆ ಇಲಿ ಸತ್ತು ಬಿದ್ದಿರುವ ಊಟವನ್ನು ಸರಬರಾಜು ಮಾಡಲಾಗಿದೆ.
ಬೆಂಗಳೂರು ಬಂದ್ ಭದ್ರತೆಗೆ ಬಂದ ಪೊಲೀಸರಿಗೆ ಇಲಿಯ ಊಟ ಕೊಟ್ಟ ಸರ್ಕಾರ
ಪಲೀಸರಿಗೆ ಸರಬರಾಜು ಮಾಡಿದ ಊಟದಲ್ಲಿ ಇಲಿ ಸತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆಯೇ ಈ ವಿಚಾರವನ್ನು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಅವರು ಊಟ ಸರಬರಾಜು ಮಾಡಿದ ಹೋಟೆಲ್ ಹಾಗೂ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ಇನ್ನು ಕಳಪೆ ಗುಣಮಟ್ಟದ ಊಟ ಸರಬರಾಜು ಮಾಡಿದವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಕೂಡಲೇ ಸಂಬಂಧಿತ ಹೋಟೆಲ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಜೊತೆಗೆ, ಊಟ ಸರಬರಾಜು ಜವಾಬ್ದಾರಿ ನೋಡಿಕೊಳ್ಳಬೇಕಾದ ಯಶವಂತಪುರ ಟ್ರಾಫಿಕ್ ಇನ್ಸ್‌ಪೆಕ್ಟರ್‌ಗೂ ನೋಟೀಸ್ ನೀಡಿದ್ದಾರೆ.
ಕಾವೇರಿ ಹೋರಾಟಕ್ಕೆ ಟ್ವೀಟ್‌ನಲ್ಲೇ ಬೆಂಬಲಿಸಿದ ಕಿಚ್ಚ ಸುದೀಪ್: ಬೀದಿಗಿಳಿದು ಹೋರಾಡುವಂತೆ ನೆಟ್ಟಿಗರ ತಾಕೀತು!
ಯಶವಂತಪುರದ ಅಶೋಕ್ ಟಿಫಿನ್ ಸೆಂಟರ್‌ನಿಂದ (Ashok Tiffin center) ಒಟ್ಟು 180 ಊಟವನ್ನು ಪೊಲೀಸ್ ಸಿಬ್ಬಂದಿಗೆ ಪಾರ್ಸೆಲ್ ಕಟ್ಟಿಸಿಕೊಂಡು ತರಲಾಗಿತ್ತು. ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ಸೇರಿ ಎರಡು ಹೊತ್ತಿನ ಊಟಕ್ಕೆ 200 ರೂ. ಹಣವನ್ನು ಸರ್ಕಾರದಿಂದ ಕೊಡಲಾಗುತ್ತದೆ. ಇಷ್ಟೊಂದು ಹಣವನ್ನು ಕೊಟ್ಟರೂ ಕೂಡ ಗುಣಮಟ್ಟದ ಆಹಾರವನ್ನು ಯಾಕೆ ಕೊಟ್ಟಿಲ್ಲ ಎಂದು ಅಧೀನ ಅಧಿಕಾರಿಗಳ ವಿರುದ್ಧ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಸದ್ಯ ಅದೃಷ್ಟವಶಾತ್ ಯಾರೂ ಕಳಪೆ ಊಟ ಸೇವಿಸಿಲ್ಲ. ಒಂದು ವೇಳೆ ಇಲಿ ಸತ್ತು ಬಿದ್ದಿರುವ ಊಟ ಸೇವಿಸಿದ್ರೆ ಅನಾಹುತ ಆಗೋ ಸಾಧ್ಯತೆ ಇತ್ತು ಎಂದು ಕಿಡಿಕಾರಿದ್ದಾರೆ.