ಶೃಂಗೇರಿ(ಜೂ. 11) ಲಾಕ್ ಡೌನ್ ನಡುವೆ ದೇವಾಲಯಕ್ಕೆ ತೆರಳಲು, ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಅದು ಎಷ್ಟೋ ದಿನದಿಂದ ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡುತ್ತಿದ್ದವರು ತಮ್ಮ ಇಷ್ಟದ ದೇವರನ್ನು ಸ್ಮರಿಸಲು, ಸ್ಥಳಕ್ಕೆ ತೆರಳಿ ನಮಿಸಲು ಅನುಮತಿ ಸಿಕ್ಕಿದೆ.

ಒಬ್ಬರು ನಂಜನಗೂಡಿಗೆ ತೆರಳಿದರೆ, ಇನ್ನೊಬ್ಬರು ತಿರುಪತಿಗೆ ತೆರಳುತ್ತಾರೆ, ಮತ್ತೊಬ್ಬರು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದರೆ, ಮಗದೊಬ್ಬರು ಶೃಂಗೇರಿಗೆ ತೆರಳುತ್ತಾರೆ. ಅವರವರ ಇಷ್ಟ, ಅವರವರ ಭಾವನೆ, ಅವರವರ ಆರಾಧ್ಯ ದೈವ.

ಬೆಂಗಳೂರು ಪೊಲೀಸರ ನೆರವಿಗೆ ನಿಂತ ಸ್ಪಿನ್ ಮಾಂತ್ರಿಕ

ಸ್ಪಿನ್ ಮಾಂತ್ರಿಕ, ಕ್ರಿಕೆಟ್ ದಿಗ್ಗಜ ಕನ್ನಡಿಗ ಅನಿಲ್ ಕುಂಬ್ಳೆ ಯಾರಿಗೆ ತಾನೆ ಗೊತ್ತಿಲ್ಲ. ಇನ್ನು ಕನ್ನಡ  ಸಿನಿಲೋಕದ ಸುಮಧುರ ಕಂಠದ ವಿಜಯ್ ಪ್ರಕಾಶ್ ಸಹ ಗೊತ್ತಿಲ್ಲದವರು ಇದ್ದಾರೆಯೇ!  ಒಬ್ಬರು ಪಾಕಿಸ್ತಾನದ ವಿರುದ್ಧ ಹತ್ತಕ್ಕೆ ಹತ್ತು ವಿಕೆಟ್ ಕಿತ್ತು ಬೀಗಿದವರು, ಇನ್ನೊಬ್ಬರು ಜೀವ್ ಝಲ್ ಎಂತದೆ ಎನ್ನುತ್ತ ಕಿವಿಗೆ ಇಂಪು ನೀಡಿದವರು. ಈ ಇಬ್ಬರು ಮಹಾನ್ ದಿಗ್ಗಜರು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. 

ಚಿರಂಜೀವಿ ಸರ್ಜಾ ಬಗ್ಗೆ ವಿಜಯ್ ಪ್ರಕಾಶ್ ಹೇಳಿದ್ದಿಷ್ಟು

ಕ್ರಿಕೆಟ್ ಜರ್ಸಿಯಲ್ಲಿ ಇಂಡಿಯನ್ ಕ್ಯಾಪ್ ಹೊತ್ತ ಅನಿಲ್ ಕುಂಬ್ಳೆ ಅವರನ್ನು ಕಂಡಿದ್ದೇವೆ. ಸೂಟು ಬೂಟು ಧರಿಸಿ ಮೈಕ್ ಮುಂದೆ ಮೈಮರೆಯುವ ವಿಜಯ್ ಪ್ರಕಾಶ್ ಅವರನ್ನು ಕಂಡಿದ್ದೇವೆ. ಬಿಳಿ ಪಂಚೆಯಲ್ಲಿ ಶಾರದಾಂಬೆಯ ಸನ್ನಿಧಿಯಲ್ಲಿ ದಿಗ್ಗಜರ ಸಮಾಗಮವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಿಂದೆ ಕವನ ವಾಚನ ಚಾಲೆಂಜ್ ಎದುರಾದಾಗ ಪರಸ್ಪರರು ನಾಮಿನೇಟ್ ಮಾಡಿಕೊಂಡಿದ್ದರು.

ಅನಿಲ್ ಕುಂಬ್ಳೆ ಮತ್ತು ಗಾಯಕ ವಿಜಯ್ ಪ್ರಕಾಶ್ ಶೃಂಗೇರಿಗೆ ಭೇಟಿ ನೀಡಿ ಶಾರದೆಯ ಆಶೀರ್ವಾದ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋವನ್ನು ಶೇರ್ ಮಾಡಿ ಕುಮಾರ್ ಭನು ಎಂಬುವರು ಕ್ಷಣಗಳನ್ನು ಹಂಚಿಕೊಂಡಿದ್ದಾರೆ.