Asianet Suvarna News Asianet Suvarna News

ಅಪ್ಪು ಕುಟುಂಬಸ್ಥರೇ ನನ್ನ ಮಗುವಿಗೆ ಹೆಸರಿಡಬೇಕು : ಗದಗದಿಂದ ಅಭಿಮಾನಿಯ ವಿಶಿಷ್ಟ ಬಯಕೆ!

ಮಗನಿಗೆ ಅಪ್ಪು ಅಂತ ನಾಮಕರಣ ಮಾಡಬೇಕು. ರಾಜ್‌ಕುಮಾರ್ ಕುಟುಂಬಕ್ಕೆ ನರಗುಂದದಲ್ಲಿ ಮಾರುತಿ ವಿಶಿಷ್ಟ ಬೇಡಿಕೆ.

Puneeth Rajkumar Gadaga fan Maruthy demands raj family to do his son naming ceremony vcs
Author
Bangalore, First Published Aug 19, 2022, 5:25 PM IST

ಗದಗ : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 10 ತಿಂಗಳು ಕಳೀತಾ ಬಂತು ಆದರೂ ಫ್ಯಾನ್ಸ್‌ಗೆ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಇಂದಿಗೂ ಸಾವಿರಾರು ಅಭಿಮಾನಿಗಳು ದಿನನಿತ್ಯ ಅವರನ್ನು ಸ್ಮರಿಸುತ್ತಾರೆ ಆರಾಧಿಸ್ತಾರೆ. ಜಾತ್ರೆ, ದಿಬ್ಬಣಗಳಲ್ಲಿ ಅವರ ಫೋಟೋ ಹೊತ್ತು ಮೆರವಣಿಗೆ ಮಾಡ್ತಾರೆ. ಸ್ಟೈಲ್‌ಗೆ ರಾಯಭಾರಿಯಂತಿದ್ದ ಅಪ್ಪುವನ್ನ ನೆನೆದು ಕಣ್ಣೀರು ಹಾಕ್ತಿದ್ದಾರೆ.

ಅತ್ಯಂತ ಸ್ಪೆಷಲ್ ಅಭಿಮಾನಿಗಳ ದಂಡು ಹೊಂದಿರೋ ಅಪ್ಪುಗೆ ಗದಗನಲ್ಲೊಬ್ಬ ಸೂಪರ್ ಸ್ಪೆಷಲ್ ಅಭಿಮಾನಿ ಇದ್ದಾನೆ. ಆ ಅಭಿಮಾನಿಗೆ ಹುಟ್ಟಿದ ಗಂಡು ಮಗುವಿಗೆ ಪುನೀತ್ ರಾಜಕುಮಾರ್ ಅಂತ ನಾಮಕರಣ ಮಾಡಬೇಕು ಅನ್ನೋ ಮಹದಾಸೆ ಹೊಂದಿದಾನೆ. ಮಗನಿಗೆ ಅಪ್ಪು ಹೆಸರಿಡುವ ಮೂಲಕ ನೆಚ್ಚಿನ ನಟನ ನೆನಪು ಸದಾ ಹಸಿರಾಗಿಡಬೇಕು ಅನ್ನೋ ಆಸೆ ಹೊಂದಿದಾರೆ.. 

ಮಗುವಿಗೆ ಅಪ್ಪು ಹೆಸರಿಡಲು ದೊಡ್ಮನೆಗೆ ಕೋರಿದ ಅಭಿಮಾನಿ

ಅಪ್ಪು ಮನೆಯಲ್ಲಿಯೇ ರಾಜ್ ಕುಟುಂಬಸ್ಥರ ಸಮ್ಮುಖದಲ್ಲೇ, ಮಗುವಿಗೆ ಪುನೀತ್ ರಾಜಕುಮಾರ್ ಹೆಸರಿಡಬೇಕು ಅಂತ ಈತ ಮನವಿ ಮಾಡಿಕೊಂಡಿದ್ದಾರೆ. ಅಂದಹಾಗೆ ಗದಗ ಜಿಲ್ಲೆ ನರಗುಂದ ಪಟ್ಟಣದ ಕಸಬಾ ಓಣಿಯ ನಿವಾಸಿ ಮಾರುತಿ ಬೆಳವಣಿಕಿ ಮತ್ತು ಸಂಗೀತ ದಂಪತಿಗೆ  10 ದಿನದ ಹಿಂದೆ ಗಂಡು ಮಗು ಜನಿಸಿದೆ. ಮಗುವಿಗೆ ನಾಮಕರಣ ಮಾಡಬೇಕು ಅನ್ಕೊಂಡಿರೋ ಮಾರುತಿ, ರಾಜ್ ಕುಟುಂಬದ ಸಮ್ಮುಖದಲ್ಲೇ ಹೆಸರಿಡಬೇಕು ಅಂತಾ ಪಟ್ಟು ಹಿಡ್ದಿದಾನೆ.. 

ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ; ಇಲ್ಲಿವೆ ಫೋಟೋಗಳು

ಬೆಂಗಳೂರಿನಲ್ಲಿ ಅಪ್ಪು ಅವರ ಮನೆಯಲ್ಲಿಯೇ ನಾಮಕರಣ ಮಾಡಬೇಕು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಥವಾ ರಾಘಣ್ಣ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಪೈಕಿ ಯಾರಾದ್ರೂ ನಾಮಕರಣ  ಯಾರಾದರೂ ಒಬ್ರು ಮಗುವಿಗೆ ನಾಮಕರಣ ಮಾಡ್ಲಿ ಅನ್ನೋ ಹಂಬಲ ಮಾರುತಿಯವರದ್ದು..

ನರಗುಂದದಲ್ಲಿ ಮಾರುತಿ ಅಪ್ಪು ಅಂತಾನೇ ಫೇಮಸ್..!

ಅಪ್ಪು ಅಪ್ಪಟ ಅಭಿಮಾನಿಯಾಗಿರೊ ಮಾರುತಿ, ನರಗುಂದ ಭಾಗದಲ್ಲಿ ಅಪ್ಪು ಅಂತಾನೇ ಫೇಮಸ್. ಮಾರುತಿಗೆ ಅಪ್ಪು ಅಂದ್ರೆ ಪ್ರಾಣ.ಚಿಕ್ಕಂದಿನಿಂದಲೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ  ಅಪ್ಪಟ ಅಭಿಮಾನಿ. ಪುನೀತ್ ಅವರ ಚಿತ್ರಗಳು ಬಿಡುಗಡೆಯಾದರೆ ಹಬ್ಬದ ರೀತಿಯಲ್ಲಿ ಆಚರಣೆ ಮಾಡ್ತಿದ್ರಂತೆ... ಅಪ್ಪು ಅವರ ಪ್ರತಿಯೊಂದು ಚಿತ್ರ ನೋಡಿ ಖುಷಿಯಿಂದ ಸಂಭ್ರಮಿಸ್ತಿದ್ರು. ಚಿತ್ರಬಿಡುಗಡೆಯ ದಿನ ಅಪ್ಪು ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡೋದು ರೂಢಿಯಾಗಿತ್ತು. ಪ್ರತಿ ಸಿನಿಮಾ ಬಿಡುಗಡೆಯಾದಾಗ ಇವರಷ್ಟು ಖುಷಿ ಪಡೋ ವ್ಯಕ್ತಿನೇ ಇರ್ತಿರಲಿಲ್ಲ. ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದ ಮಾರೂತಿಯವರನ್ನ ಕಸಬಾ ಓಣಿಯಲ್ಲಿ ಅಪ್ಪು ಅಂತಾನೇ ಕರೆಯುತ್ತಿದ್ದಾರೆ. 

ಪುನೀತ್ ರಾಜ್‌ಕುಮಾರ್ ಸಮಾಧಿ ಅಭಿವೃದ್ಧಿ; ಸಿಎಂ ಭೇಟಿ ಮಾಡಿದ ರಾಘಣ್ಣ, ಅಶ್ವಿನಿ

ಅಪ್ಪು ತೀರಿಹೋಗಿಲ್ಲ.. ಮಗನ ರೂಪದಲ್ಲಿ ಅಪ್ಪು ಹುಟ್ಟಿಬಂದಿರೆ..

ಅಪ್ಪು ತೀರಿಹೋದಾಗ ಮಾರುತಿ ವಿಚಲಿತರಾಗಿದ್ರು. ಅಪ್ಪು ತೀರಿದ ಸಂದರ್ಭದಲ್ಲೇ ಮಾರುತಿ ಅವರ ಪತ್ಮಿ ಸಂಗೀತ ಗರ್ಭಿಣಿಯಾಗಿದ್ದ ಬಗ್ಗೆ ತಿಳಿದಿತ್ತು... ಹೀಗಾಗಿ ಗಂಡು ಮಗು ಜನಿಸಿದ್ರೆ ಅಪ್ಪು ಮತ್ತೆ ಹುಟ್ಟಿ ಬಂದಂತೆ ಅಂತಾ ಮಾರುತಿ ಅನ್ಕೊಂಡಿದ್ರು. ಅದ್ರಂತೆ, ಈಗ ಗಂಡು ಮಗು ಹುಟ್ಟಿದ್ದು, ಮಗುವಿಗೆ ಅಪ್ಪು ಅವರ ಮನೆಯಲ್ಲೇ ಅವರ ಸಂಬಂಧಿಕರಿಂದಲೇ ನಾಮಕರಣ ಮಾಡಿಸುವ ಇಂಗಿತವನ್ನ ಮಾರುತಿ ವ್ಯಕ್ತಪಡಿಸಿದ್ದಾರೆ. ದೊಡ್ಮನೆಯ ಕಡೆಯಿಂದ ಪ್ರತಿಕ್ರಿಯೆಗಾಗಿ ಮಾರುತಿ ಕಾಯ್ದು ನೋಡ್ತಿದ್ದಾರೆ. ಈ ಅಭಿಮಾನಿಯ ಕೋರಿಗೆ ದೊಡ್ಮನೆ ಯಾವ ರೀತಿ ರಿಸ್ಪಾನ್ಸ್ ಮಾಡುತ್ತೆ ಕಾಯ್ದುನೋಡಬೇಕಿದೆ..

Follow Us:
Download App:
  • android
  • ios