ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ
ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ, ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ| ಗದಗ, ಕೊರೋನಾ ನಿಯಂತ್ರಿಸುವಲ್ಲಿ ವಿಶ್ವದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆಂದು ಮಾಧ್ಯಮದಲ್ಲಿ ಗುಣಗಾನ ಮಾಡಲಾಗುತ್ತಿದೆ| ಆದರೆ, ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಆರ್ಭಟಿಸುತ್ತಾ ಮರಣಮೃದಂಗ ಬಾರಿಸುತ್ತಿದೆ|
ಕೊಪ್ಪಳ(ಜೂ.15): ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿ ನಗರದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಮುಖಂಡ ಸುಂಕಪ್ಪ ಗದಗ, ಕೊರೋನಾ ನಿಯಂತ್ರಿಸುವಲ್ಲಿ ವಿಶ್ವದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆಂದು ಮಾಧ್ಯಮದಲ್ಲಿ ಗುಣಗಾನ ಮಾಡಲಾಗುತ್ತಿದೆ. ಆದರೆ, ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಆರ್ಭಟಿಸುತ್ತಾ ಮರಣಮೃದಂಗ ಬಾರಿಸುತ್ತಿದೆ. ಇದು ಕೇಂದ್ರ ಸರ್ಕಾರದ ಸಾಧನೆ ಎಂದು ಪ್ರಶ್ನಿಸಿದ ಅವರು, ಯಾವುದೇ ಮುನ್ಸೂಚನೆ ನೀಡದೆ ಲಾಕ್‌ಡೌನ್ ಘೋಷಿಸಿದ ಪರಿಣಾಮ ಕೆಲಸ ಅರಸಿ ಬೇರೆ ರಾಜ್ಯಗಳಿಗೆ ಹೋಗಿದ್ದ ಕಾರ್ಮಿಕರು ನಡೆದುಕೊಂಡು ಬಂದು ಆಹಾರವಿಲ್ಲದೆ ಪ್ರಾಣಬಿಟ್ಟಿದ್ದಾರೆ. ದುಡಿಯಲು ಕೆಲಸವಿಲ್ಲದೆ ಜೀವನ ನಡೆಸಲು ಪರದಾಡುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಸುಂಕಪ್ಪ ಪ್ರಶ್ನಿಸಿದರು.
ಕಾರಟಗಿಯಲ್ಲಿ ಅಪರೂಪದ ಬಿಳಿ ಕಾಗೆ ಮರಿ ಪ್ರತ್ಯಕ್ಷ: ನೋಡಲು ಮುಗಿಬಿದ್ದ ಜನತೆ..!
ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ತೆರಳು ವಾಹನಗಳ ವ್ಯವಸ್ಥೆ ಇಲ್ಲದೆ ಹಸಿವು, ಬಾಯಾರಿಕೆಯಲ್ಲಿಯೆ ಸಾವಿರಾರು ಕಿಲೋ ಮೀಟರ್ ನಡೆದುಕೊಂಡು ಊರು ತಲುಪಿದ್ದಾರೆ. ಈ ವೇಳೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ನೆರವಿಗೆ ಧಾವಿಸಬೇಕಾದ ಸರ್ಕಾರಗಳು ಕೈಕಟ್ಟಿಕುಳಿತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕಾಏಕಿ ಲಾಕ್‌ಡೌನ್ ಘೋಷಿಸಿದ್ದರಿಂದ ರೈತರು ಬೆಳೆದ ಬೆಳೆ ಮಾರಾಟಕ್ಕೆ ಮಾರುಕಟ್ಟೆವ್ಯವಸ್ಥೆ ಇಲ್ಲದ ಪರಿಣಾಮ ಹೊಲದಲ್ಲಿಯೇ ಕೊಳೆಯಬೇಕಾಯಿತು. ಹಲವು ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶ ಮಾಡಿದರು. ಜನರಿಗೆ ಅನ್ನ ನೀಡುವ ರೈತರೆ ಸಂಕಷ್ಟಕ್ಕೆ ಸಿಲುಕಿದರು. ಪೂರ್ವ ತಯಾರಿ ಇಲ್ಲದೆ ಲಾಕ್‌ಡೌನ್ ಘೋಷಿಸಿದ್ದರಿಂದ ದೇಶವ ಬಡವರು, ಮಧ್ಯಮ ವರ್ಗದವರು ಬೀದಿಪಾಲಾದರು. ಇದಕ್ಕೆ ಕೇಂದ್ರ ಸರ್ಕಾರದ ಆಡಳಿತ ವೈಖರಿಯೇ ಕಾರಣವೆಂದು ದೂರಿದರು.
ಲಾಕ್‌ಡೌನ್‌ನಿಂದ ದೇಶದ ಮೇಲೆ ಆದ ದುಷ್ಪರಿಣಾಮಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇತ್ತ ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ಇದೀಗ ಆಯಾ ರಾಜ್ಯ ಸರ್ಕಾರಗಳು ಸರಿಯಾಗಿ ಲಾಕ್‌ಡೌನ್ ಅನುಷ್ಠಾನ ಮಾಡದ ಪರಿಣಾಮ ಕೊರೋನಾ ಹೆಚ್ಚಾಗಲು ಕಾರಣವೆಂದು ಕೇಂದ್ರ ಸರ್ಕಾರ ದೂರುತ್ತಿದೆ ಎದು ಆರೋಪಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಖಾಸಿಂಸಾಬ್ ಸರದಾರ, ಹುಸೇನಸಾಬ್ ನದಾಫ್, ರಾಮಣ್ಣ ದೊಡ್ಡಮನಿ, ಸೈಯದ್ ಗುಲಾಮ್ ಹುಸೇನ, ಷಣ್ಮುಖಪ್ಪ ಕೆ. ಮಹೇಶ ಕುಕನೂರ ಇದ್ದರು.