ಕಾರಟಗಿಯಲ್ಲಿ ಅಪರೂಪದ ಬಿಳಿ ಕಾಗೆ ಮರಿ ಪ್ರತ್ಯಕ್ಷ: ನೋಡಲು ಮುಗಿಬಿದ್ದ ಜನತೆ..!

First Published Jun 17, 2020, 7:29 AM IST

ಕಾರಟಗಿ(ಜೂ.15): ತಾಲೂಕಿನ ಬಸವಣ್ಣ ಕ್ಯಾಂಪ್‌ನ ಜಮೀನಿನಲ್ಲಿ ಭಾನುವಾರ ಬೆಳಗ್ಗೆ ಬಿಳಿ ಕಾಗೆ ಮರಿಯೊಂದು ದೊರೆಕಿದೆ. ಕ್ಯಾಂಪಿನ ರೈತ ಮತ್ತಿಪಾಟಿ ಕೃಷ್ಣ ಇವರ ಬತ್ತದ ಜಮೀನಿನಲ್ಲಿನ ಕೆರೆಯ ಬಳಿ ಗಿಡದಲ್ಲಿದ್ದ ಕಾಗೆಗೂಡಿನಿಂದ ಬಿಳಿ ಕಾಗೆ ಬೆಳಿಗ್ಗೆ ಕೆಳಗೆ ಬಿದ್ದಾಗ ಪತ್ತೆಯಾಗಿದೆ.