Asianet Suvarna News Asianet Suvarna News

ಬಾವಿಯಲ್ಲಿ ಹಸು ಕಳೇಬರ: ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡ ಗ್ರಾಮಸ್ಥರು

ಕುಡಿಯುವ ನೀರಿನ ಬಾವಿಯಲ್ಲಿ ಹಸು ಬಿದ್ದು, ಸಾವನ್ನಪ್ಪಿದ್ದು, ಹಸು ಬಿದ್ದು ಸಾವನ್ನಪ್ಪಿದ ಬಗ್ಗೆ ಮಾಹಿತಿ ಇಲ್ಲದೇ ಇದೇ ಬಾವಿಯ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಲೂರು ಗ್ರಾಮದಲ್ಲಿ ನಡೆದಿದೆ.

Cow death in well at ahaluru Village well water drunken people injury sat
Author
First Published Jan 25, 2023, 12:45 PM IST

ಚಿಕ್ಕಮಗಳೂರು (ಜ.25): ಕುಡಿಯುವ ನೀರಿನ ಬಾವಿಯಲ್ಲಿ ಹಸು ಬಿದ್ದು, ಸಾವನ್ನಪ್ಪಿದ್ದು, ಹಸು ಬಿದ್ದು ಸಾವನ್ನಪ್ಪಿದ ಬಗ್ಗೆ ಮಾಹಿತಿ ಇಲ್ಲದೇ ಇದೇ ಬಾವಿಯ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಕುಡಿಯುವ ನೀರಿನಲ್ಲಿ  ದುರ್ವಾಸನೆ ಬಂದಿದೆ. ಜೊತೆಗೆ, ಈ ಬಾವಿಯ ನೀರು ಕುಡಿದ ಗ್ರಾಮಸ್ಥರಿಗೆ ಅನಾರೋಗ್ಯವೂ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬಾವಿಗೆ ಅಳವಡಿಕೆ ಮಾಡಲಾಗಿದ್ದ ಪರದೆಯನ್ನು ತೆರೆದು ನೋಡಿದಾಗ ಬಾವಿಯಲ್ಲಿ ಹಸುವಿನ ಕಳೇಬರ ತೇಲುತ್ತಿರುವುದು ಕಂಡುಬಂದಿದೆ. ಇನ್ನು ದುರ್ವಾಸನೆ ಬೀರುತ್ತಿದ್ದ ಕಲುಷಿತ ನೀರು ಸೇವೆನ ಮಾಡಿದ ಗ್ರಾಮಸ್ಥರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಬಾವಿಯಲ್ಲಿ ಬಿದ್ದದ್ದ ಹಸುವಿನ ಕಳೇಬರಹ ಮೇಲೆತ್ತಲು ಗ್ರಾಮಸ್ಥರು ಪ್ರಯತ್ನ ಮುಂದುವರೆಸಿದ್ದಾರೆ. 

agalakote: ಒಂದೇ ಬಾರಿಗೆ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು: ರೈತರಿಗೆ ಭಾರೀ ಅಚ್ಚರಿ

ಕಳೆದ ಎಂಟು ದಿನಗಳ ಹಿಂದೆಯೇ ಬಾವಿಗೆ ಬಿದ್ದಿರುವ ಹಸು: ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಹಾಲೂರು ಗ್ರಾಮದಲ್ಲಿನ ಬಾವಿಗೆ ಕಳೆದ ಎಂಟು ದಿನಗಳ ಹಿಂದೆಯೇ ಹಸು ಬಾವಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ. ಜೊತೆಗೆ ಕಳೆದ ಎಂಟು ದಿನಗಳಿಂದ ಇದೇ ಬಾವಿಯ ನೀರನ್ನು ಗ್ರಾಮಸ್ಥರು ಸೇವನೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಕೊಳೆತಶವ ಹೊರಕ್ಕೆ ತೆಗೆಯುತ್ತಿದ್ದಾರೆ. ಬಾವಿಗೆ ಮೇಲ್ಚಾವಣಿ ಇಲ್ಲದಿರುವ ಕಾರಣ ಹಸು ಬಂದು ಬಾವಿಗೆ ಬಿದ್ದಿರಬಹುದು. ಕುಡಿಯುವ ನೀರಿನಲ್ಲಿ ಹಸುವಿನ ಕೊಳೆತ ದೇಹ  ಕಂಡು ಗ್ರಾಮಸ್ಥರಿಗೆ ಶಾಕ್‌ ಆಗಿದ್ದು, ಅನಾರೋಗ್ಯಕ್ಕೆ ಒಳಗಾದವರ ಮೇಲೆ ತೀವ್ರ ನಿಗಾವಹಿಸಲಾಗಿದೆ. 

ಉತ್ತರಕನ್ನಡ: ಅನುದಾನದ ಕೊರತೆಯಿಂದ ಸಂಕಷ್ಟದಲ್ಲಿ ಗೋಶಾಲೆ

ಬೊಲೆರೋ ಗುದ್ದಿ ಪಾದಚಾರಿ ಸಾವು: ಕೊಪ್ಪಳ (ಜ.25): ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಪಾದಾಚಾರಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ವಾಹನ ಡಿಕ್ಕಿ ಹೊಡೆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ಹುಲಿಹೈದರ ಗ್ರಾಮದ ಸಣ್ಣ ಶರಣಪ್ಪ ಬಗ್ಗಿಕಾನಿ ಎಂದು ಗುರುತಿಸಲಾಗಿದೆ. ಬುಲೇರೋ ವಾಹನ ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲು; ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ಹಾಯ್ದು ಹೋದ ರಾಜ್ಯ ಹೆದ್ದಾರಿ 29ರಲ್ಲಿ ನೆಡೆದ ಅಪಘಾತ ನಡೆದಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಡಿಕ್ಕಿ ಹೊಡೆದ ವಾಹನ ಇನ್ನೂ ಪತ್ತೆಯಾಗಿಲ್ಲ. 

Follow Us:
Download App:
  • android
  • ios