Asianet Suvarna News Asianet Suvarna News

ಕೆಎಂಸಿಯಲ್ಲಿ ಕೋವಿಡ್‌ ಲ್ಯಾಬ್‌ ಕಾರ್ಯಾರಂಭ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸೂಕ್ಷಾಣು ಪ್ರಯೋಗಾಲಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್‌.)ಯಿಂದ ಕೋವಿಡ್‌-19 ಪರೀಕ್ಷೆಗೆ ಅನುಮೋದನೆ ದೊರೆತ್ತಿದ್ದು, ಮಂಗಳವಾರದಿಂದ ಪರೀಕ್ಷೆಗಳನ್ನು ಆರಂಭಿಸಲಾಗಿದೆ.

Covid19 lab to be start in kmc
Author
Bangalore, First Published May 20, 2020, 8:04 AM IST
  • Facebook
  • Twitter
  • Whatsapp

ಮಣಿಪಾಲ(ಮೇ 20): ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಸೂಕ್ಷಾಣು ಪ್ರಯೋಗಾಲಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್‌.)ಯಿಂದ ಕೋವಿಡ್‌-19 ಪರೀಕ್ಷೆಗೆ ಅನುಮೋದನೆ ದೊರೆತ್ತಿದ್ದು, ಮಂಗಳವಾರದಿಂದ ಪರೀಕ್ಷೆಗಳನ್ನು ಆರಂಭಿಸಲಾಗಿದೆ. ಇಲ್ಲಿ ಉಡುಪಿ ಜಿಲ್ಲೆ ಮಾತ್ರವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಕೋವಿಡ್‌ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ.

ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ ಪ್ರಯೋಗಾಲಯ ಇರಲಿಲ್ಲ. ಇಲ್ಲಿಂದ ಶಿವಮೊಗ್ಗ, ಬೆಂಗಳೂರು, ಹಾಸನ ಅಥವಾ ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾಗುತಿತ್ತು. ಈ ವರದಿಗಳು ಬರಲು 3-4 ದಿನಗಳು ಬೇಕಾಗಿತ್ತು. ಈಗ ಮಣಿಪಾಲದಲ್ಲೇ ಅತ್ಯಾಧುನಿಕ ಪ್ರಯೋಗಾಲಯಕ್ಕೆ ಅನುಮೋದನೆ ಸಿಕ್ಕಿರುವುದರಿಂದ ವರದಿಗಳು ಒಂದೇ ದಿನದಲ್ಲಿ ಲಭ್ಯವಾಗಲಿದೆ.

ಮಂಗಳೂರಿನಲ್ಲಿ ದುಬೈ ಪ್ರಯಾಣಿಕರ ತಕರಾರು..!

ಈ ಪ್ರಯೋಗಾಲಯವು ಮಂಗಳೂರು ಮತ್ತು ಶಿವಮೊಗ್ಗದ ಪ್ರಯೋಗಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಪ್ರಯೋಗಾಲಯವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್‌ ಶೆಟ್ಟಿತಿಳಿಸಿದ್ದಾರೆ.

20 ದಿನಗಳಲ್ಲಿ ಸರ್ಕಾರಿ ಲ್ಯಾಬ್‌ ಆರಂಭ: ಡಿಸಿ

ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕೂಡ ಕೋವಿಡ್‌ ಲ್ಯಾಬ್‌ ಮಂಜೂರಾಗಿದ್ದು, 1.50 ಕೋಟಿ ರು. ವೆಚ್ಚದ ಈ ಪ್ರಯೋಗಾಲಯ 15-20 ದಿನಗಳಲ್ಲಿ ಕಾರ್ಯಾರಂಭವಾಗಲಿದೆ.

ಕೊರೋನಾ ಕಾಟ: 'ಬಸ್‌ ಟಿಕೆಟ್‌ ಕೊಡಲು ಆನ್‌ಲೈನ್‌ ವ್ಯವಸ್ಥೆಗೆ ಚಿಂತನೆ'

ಈಗಾಗಲೇ 45 ಲಕ್ಷ ರು. ವೆಚ್ಚದಲ್ಲಿ ಪ್ರಯೋಗಾಲಯಕ್ಕೆ ಅಗತ್ಯ ಮೂಲ ಸೌಕರ್ಯಗಳ ನಿರ್ಮಾಣದ ಕೆಲಸ ಭರದಿಂದ ನಡೆಯುತ್ತಿದೆ. ಅಗತ್ಯ ತಾಂತ್ರಿಕ ಸಲಕರಣೆಗಳನ್ನು ತರಿಸಲಾಗುತ್ತಿದೆ. ಕೆ.ಎಂ.ಸಿ.ಯಲ್ಲೂ ಪ್ರಯೋಗಾಲಯ ಆರಂಭವಾಗಿದ್ದು, ಜಿಲ್ಲೆಗೆ ಹೊರ ರಾಜ್ಯ, ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿರುವುದರಿಂದ ಎರಡೂ ಪ್ರಯೋಗಾಲಯಗಳ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios