ಒಂದೇ ಕುಟುಂಬದ 11 ಮಂದಿಗೂ ಕೊರೋನಾ

  • ಒಂದೇ ಕುಟುಂಬದ 11 ಸದಸ್ಯರಿಗೆ ಕೊರೋನಾ ಸೋಂಕು 
  • ಸೋಂಕಿತರ ಮನೆಯ ಸುತ್ತಲಿನ ಪ್ರದೇಶ  ಕಂಟೈನ್ಮೆಂಟ್‌ ಝೋನ್‌  
  • ಸೋಂಕಿತ 11 ಜನರನ್ನು ನವನಗರದ ಕೋವಿಡ್‌ ಕೇರ್‌ ಸೆಂಟರ್‌ಗೆ  ಸ್ಥಳಾಂತರ
Covid Test Result Positive For 11 Members Of One Family in Bagalkot snr

ಬಾಗಲಕೋಟೆ (ಮೇ.24): ತಾಲೂಕಿನ ಮುರುನಾಳ ಗ್ರಾಮದ ಒಂದೇ ಕುಟುಂಬದ 11 ಸದಸ್ಯರಿಗೆ ಕೊರೋನಾ ಸೋಂಕು ಹಬ್ಬಿದ್ದು, ಗ್ರಾಮವನ್ನೇ ತಲ್ಲಣಗೊಳಿಸಿದೆ.

 ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರುವ ಪುನರ್ವಸತಿ ಕೇಂದ್ರದಲ್ಲಿ ಇರುವ ಮುರುನಾಳ ಗ್ರಾಮದ ಸೋಂಕಿತರ ಮನೆಯ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ.

ಹಳ್ಳಿಗಳಿಗೆ ಹೊಕ್ಕಿರುವ ಕೊರೋನಾದಿಂದ ರಕ್ಷಣೆ ಹೇಗೆ? ವೈದ್ಯರ ವಿವರಣೆ

ಅಲ್ಲದೇ ಅಧಿಕಾರಿಗಳು ಸೋಂಕಿತ 11 ಜನರನ್ನು ನವನಗರದ ಕೋವಿಡ್‌ ಕೇರ್‌ ಸೆಂಟರ್‌ಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಿದ್ದಾರೆ.

ಸೋಂಕಿತರ ಮನೆಯ ಅಕ್ಕಪಕ್ಕದಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾದವರನ್ನು ಗುರುತಿಸಿ ಕೋವಿಡ್‌ ಪರೀಕ್ಷೆ ನಡೆಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಜೊತೆಗೆ ಇಡೀ ಗ್ರಾಮದಲ್ಲಿ ಮನೆ ಮನೆ ಸರ್ವೆ ಕಾರ್ಯವನ್ನು ಸಹ ಮುಂದುವರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios