ಚೇತರಿಕೆ ಜತೆ ಸಾವಿನ ಸಂಖ್ಯೆಯೂ ಏರಿಕೆ, ಎಚ್ಚರ ತಪ್ಪುವಂತೆ ಇಲ್ಲ
* ಕೊರೋನಾ ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ
* ಆತಂಕ ಕಡಿಮೆ ಮಾಡದ ಸಾವಿನ ಸಂಖ್ಯೆ
* ಬೆಂಗಳೂರಿನಲ್ಲಿ ತಗ್ಗಿದ ಪ್ರಕರಣಗಳು
* ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಸೋಂಕು
ಬೆಂಗಳೂರು, (ಮೇ.23): ಕರ್ನಾಟಕದಲ್ಲಿ ಹೊಸ ಸೋಂಕಿತರ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗುತ್ತಿದ್ದು, ಹೊಸ ಆಶಾಭಾವನೆ ಮೂಡಿಸಿದೆ. ರಾಜ್ಯದಲ್ಲಿಂದು (ಭಾನುವಾರ) ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಆದರೆ 626 ಜನ ಕೊರೋನಾಕ್ಕೆ ಬಲಿಯಾಗಿದ್ದಾರೆ. ಮೃತಪಡುತ್ತಿರುವವರ ಪ್ರಮಾಣ ಶೇ. 2.40 ಇದೆ.
ಹೊಸದಾಗಿ 25,979 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೋನಾ ಲಸಿಕೆ ಗೊಂದಲಗಳಿಗೆ ತೆರೆ, 18 ರಿಂದ 44ರವರಿಗೆ ಸದ್ಯಕ್ಕಿಲ್ಲ
ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದು ಇಂದು ದಾಖಲೆಯ 35,573 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಚೇತರಿಕೆ ಸಂಖ್ಯೆ 19,26,615ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಭಾನುವಾರ 7,494 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 11,19,552ಕ್ಕೆ ಏರಿಕೆಯಾಗಿದೆ. ಸೋಂಕಿಗೆ 362 ಮಂದಿ ಬಲಿಯಾಗಿದ್ದಾರೆ. ಇನ್ನು ರಾಜ್ಯದಲ್ಲಿ ಸಾವಿನ ಸಂಖ್ಯೆ 25,282ಕ್ಕೆ ಏರಿದೆ.
ಜಿಲ್ಲಾವಾರು ಸಂಖ್ಯೆ
ಬಾಗಲಕೋಟೆ-218, ಬಳ್ಳಾರಿ-1190, ಬೆಳಗಾವಿ-1066, ಬೆಂಗಳೂರು ಗ್ರಾಮಾಂತರ-400,ಬೆಂಗಳೂರು ನಗರ-7494, ಬೀದರ್-49, ಚಾಮರಾಜನಗರ-407, ಚಿಕ್ಕಬಳ್ಳಾಪುರ-613, ಚಿಕ್ಕಮಗಳೂರು-577, ಚಿತ್ರದುರ್ಗ-365, ದಕ್ಷಿಣ ಕನ್ನಡ-899, ದಾವಣಗೆರೆ-363, ಧಾರವಾಡ-858, ಗದಗ-371, ಹಾಸನ-1618,ಹಾವೇರಿ-243,ಕಲಬುರಗಿ-234,ಕೊಡಗು-329,ಕೋಲಾರ-439, ಕೊಪ್ಪಳ-356, ಮಂಡ್ಯ-643, ಮೈಸೂರು-2222, ರಾಯಚೂರು-540, ರಾಮನಗರ-279, ಶಿವಮೊಗ್ಗ-643, ತುಮಕೂರು-1269, ಉಡುಪಿ-909,ಉತ್ತರ ಕನ್ನಡ-862,ವಿಜಯಪುರ-246, ಯಾದಗಿರಿ-277
"