ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಕೆ ಕೊರೋನಾ ಸಾವಿನ ಸಂಖ್ಯೆಯು ತುಸು ಹೆಚ್ಚಳ ಜಿಲ್ಲೆಯಲ್ಲಿ 3671 ಮಂದಿ ಸಕ್ರಿಯ ಸೋಂಕಿತರು

ಮೈಸೂರು (ಜು.07): ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆಯು ತುಸು ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 389 ಮಂದಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಈಗಾಗಲೇ ಸೋಂಕಿತರ ಪೈಕಿ 388 ಮಂದಿ ಗುಣಮುಖರಾಗಿ ಡಿಸ್ಚಾಜ್‌ರ್‍ ಆಗಿದ್ದಾರೆ. ಈ ಸೋಂಕಿನಿಂದ 8 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್‌ ಸೋಂಕಿತರ ಸಂಪರ್ಕಿತರಿಂದ 326, ಐಎಲ್‌ಐ 56, ಸರಿ 7 ಸೇರಿದಂತೆ ಒಟ್ಟು 389 ಮಂದಿಗೆ ಪಾಸಿಟಿವ್‌ ಬಂದಿದೆ. ಜಿಲ್ಲೆಯಲ್ಲಿ ಈವರೆಗೂ 168546 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಇದರಲ್ಲಿ 162658 ಮಂದಿ ಗುಣಮುಖರಾಗಿದ್ದು, 2217 ಮಂದಿ ಮೃತಪಟ್ಟಿದ್ದಾರೆ. 

ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಕೊರೋನಾ ಏರಿಕೆ: ಹೆಚ್ಚಿದ ಆತಂಕ ...

ಉಳಿದ 3671 ಮಂದಿ ಸಕ್ರಿಯ ಸೋಂಕಿತರು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು ನಗರದಲ್ಲಿ 194, ಎಚ್‌.ಡಿ. ಕೋಟೆ ತಾಲೂಕಿನಲ್ಲಿ 25, ಹುಣಸೂರು 25, ಕೆ.ಆರ್‌. ನಗರ 27, ಮೈಸೂರು ತಾಲೂಕಿನಲ್ಲಿ 36, ನಂಜನಗೂಡು 20, ಪಿರಿಯಾಪಟ್ಟಣ 49 ಹಾಗೂ ಟಿ. ನರಸೀಪುರ 13 ಸೇರಿದಂತೆ ಒಟ್ಟು 389 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ.