ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಕೊರೋನಾ ಏರಿಕೆ: ಹೆಚ್ಚಿದ ಆತಂಕ
* ಅನ್‌ಲಾಕ್ ಆಗುತ್ತಿದ್ದಂತೆಯೇ ರಾಜ್ಯದಲ್ಲಿ ಏರಿಕೆಕಂಡ ಕೊರೋನಾ
* ಕೊರೋನಾ ಪಾಸಿಟಿವ್ ಕೇಸ್ ಹಾಗೂ ಸಾವಿನ ಸಂಖ್ಯೆ ಏರಿಕೆ
* ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
ಬೆಂಗಳೂರು, (ಜುಲೈ.06): ಕರ್ನಾಟಕದಲ್ಲಿ ನಿನ್ನೆಯಿಂದ ಅಂದ್ರೆ ಜುಲೈ 05ರಿಂದ ಬಹುತೇಕ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕೊರೋನಾ ಕೇಸ್ ಹಾಗೂ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಹೌದು..ಇಂದು ಮಂಗಳವಾರ ಒಂದೇ ದಿನ 3104 ಕೊರೋನಾ ಕೇಸ್ ಪತ್ತೆಯಾಗಿದ್ದು, 92 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.ಬೆಂಗಳೂರು ಮಹಾನಗರದಲ್ಲಿ 715 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 15 ಜನರು ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ ಇಳಿಕೆಯತ್ತ ಕೊರೋನಾ: ಪಾಸಿಟಿವಿಟಿ ದರ ಶೇಕಡ 1.02ಕ್ಕೆ ಇಳಿಕೆ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 28,59,595ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ 35,526 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಕೇವಲ 1ಕ್ಕೆ ಇಳಿದಿದ್ದ ಕೊರೋನಾ ಪಾಸಿಟಿವಿಟಿದರ ಇಂದು ಶೇ. 2.65ಕ್ಕೆ ಏರಿದೆ. ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸೋಂಕಿತರ ಪೈಕಿ 27,84,030 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 40,016 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ಕೇಸ್
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 715 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ 5, ಬಳ್ಳಾರಿ 24, ಬೆಳಗಾವಿ 157, ಬೆಂಗಳೂರು ಗ್ರಾಮಾಂತರ 67, ಬೀದರ್ 6, ಚಾಮರಾಜನಗರ 68, ಚಿಕ್ಕಬಳ್ಳಾಪುರ 29, ಚಿಕ್ಕಮಗಳೂರು 109, ಚಿತ್ರದುರ್ಗ 64, ದಕ್ಷಿಣ ಕನ್ನಡ 216, ದಾವಣಗೆರೆ 60, ಧಾರವಾಡ 29, ಗದಗ 7, ಹಾಸನ 270, ಹಾವೇರಿ 14, ಕಲಬುರಗಿ 15, ಕೊಡಗು 140, ಕೋಲಾರ 108, ಕೊಪ್ಪಳ 15, ಮಂಡ್ಯ 113, ಮೈಸೂರು 389, ರಾಯಚೂರು 4, ರಾಮನಗರ 32, ಶಿವಮೊಗ್ಗ 119, ತುಮಕೂರು 138, ಉಡುಪಿ 114, ಉತ್ತರ ಕನ್ನಡ 72, ವಿಜಯಪುರ 2, ಯಾದಗಿರಿ 3 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.