ಕಲಬುರಗಿ, (ಮಾ.19): ಡೆಡ್ಲಿ ಕೊರೋನಾ ವೈರಸ್‌ಗೆ ಭಾರತದಲ್ಲಿಯೇ ಮೊದಲ ಸಾವಾಗಿದ್ದು ಕರ್ನಾಟಕದ ಕಲಬುರಗಿಯಲ್ಲಿ. ಇದರಿಂದ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ. 

ಅದರಲ್ಲೂ ಕಲಬುರಗಿಯಲ್ಲಿ ಮೃತಪಟ್ಟ ವೃದ್ಧ ಪುತ್ರಿ ಹಾಗೂ ವೈದ್ಯರೊಬ್ಬರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಜನತೆ ಭಯಭೀತರಾಗಿದ್ದಾರೆ.

ಕೊರೋನಾ ಕಾಟ ಅಷ್ಟಿಷ್ಟಲ್ಲ: ಬರೀ ಕೆಮ್ಮಿದ್ದಕ್ಕೆ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಜನ!

ಮತ್ತೊಂದೆಡೆ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಶರತ್ ಅವರು ಫುಲ್ ಅಲರ್ಟ್ ಆಗಿದ್ದು, ಭಾರೀ ನಿಗಾವಹಿಸಿದ್ದಾರೆ. ಕಲಬುರಗಿಯಿಂದ ಹೊರಹೋಗುವ ಖಾಸಗಿ ಬಸ್‌ಗಳನ್ನ ರದ್ದು ಪಡಿಸಲಾಗಿದೆ. ಇದೀಗ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಕಲಬುರಗಿಯಲ್ಲಿ 144 ಸೆಕ್ಷನ್ ಜಾರಿ
ಹೌದು...ಕಲಬುರಗಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಇಂದು (ಗುರುವಾರ) ಜಿಲ್ಲಾಧಿಕಾರಿ ಶರತ್ ಅವರು ಆದೇಶ ಹೊರಡಿಸಿದ್ದು,ಅದು ಗುರುವಾರ ಸಂಜೆಯಿಂದಲೇ ಜಾರಿಯಾಗಲಿದೆ.

144 ಅನ್ವಯ ಸಾರ್ವಜನಿಕರು ಮನೆಯಿಂದ ಹೊರಬಾರದು. ಹಾಗೂ ಗುಂಪು-ಗುಂಪಾಗಿ ಸೇರಬಾರದು ಎಂದು  ಸೂಚನೆ ನೀಡಿದ್ದಾರೆ. ಕೊರೋನಾ ತಡೆಗಟ್ಟಲು ಇಂತಹ ಕಠಿಣ ಕ್ರಮ ಅನೀವಾರ್ಯವಾಗಿದೆ. ಒಂದು ವೇಳೆ ನಿಯಮ ಮೀರಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಕೊರೋನಾ‌ ವೈರಸ್ ಕುರಿತು ಯಾರೇ ಸುಳ್ಳು ಸುದ್ದಿ ಹರಡಿಸಿದಲ್ಲಿ ಅಂತಹವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಕಲಬುರಗಿ : ಸೋಂಕಿತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯಗೂ ಕೊರೋನಾ ಸೋಂಕು

ಸರ್ಕಾರಿ ವ್ಯವಸ್ಥೆಯಲ್ಲಿ 32 ವೆಂಟಿಲೇಟರ್ ಲಭ್ಯ. ಜಿಮ್ಸ್ ಮತ್ತು ಇ.ಎಸ್.ಐ.ಸಿ.ಯ ಐಸೋಲೇಷನ್ ವಾರ್ಡ್ ನಲ್ಲಿ  ತಲಾ 2  ವೆಂಟಿಲೇಟರ್ ಗಳು ಕೊರೊನಾ ಸೊಂಕಿತ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಿದೆ.

ಸಹಾಯವಾಣಿಗೆ ಕರೆ ಮಾಡಿ
ಕೋವಿಡ್ -19 ಹಿನ್ನೆಲೆಯಲ್ಲಿ ಸಹಾಯವಾಣಿ ಕೇಂದ್ರ 2 ರಿಂದ 4ಕ್ಕೆ ಹೆಚ್ಚಳ: ಸಹಾಯವಾಣಿ ಸಂಖ್ಯೆ: 08472-278648, 278698, 278604, 278677.