ಕಲಬುರಗಿ [ಮಾ.17] : ಕಲಬುರಗಿಯಲ್ಲಿ ಕೊರೋನಾ ಸೋಂಕಿತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಇದೀಗ ಕೊರೋನಾ ಸೋಂಕು ದೃಢಪಟ್ಟಿದೆ. 

"

ಮೆಕ್ಕಾ ಯಾತ್ರೆ ಮುಗಿಸಿಕೊಂಡು ಬಂದು ನಾರೋಗ್ಯ ನಿಮಿತ್ತ ತಮ್ಮ ಕುಟುಂಬದ ಡಾಕ್ಟರ್ ಬಳಿ ವೃದ್ಧ ತೆರಳಿದ್ದು,  ಇದೀಗ ಈ ವೈದ್ಯರಲ್ಲೂ ಕೊರೋನಾ ದೃಢಪಟ್ಟಿದೆ. 

63 ವರ್ಷದ ಕಲಬುರಗಿಯ ಖಾಸಗಿ ಆಸ್ಪತ್ರೆ ವೈದ್ಯ ವೃದ್ಧನ ಮನೆಗೆ ಹೋಗಿ ಚಿಕಿತ್ಸೆ ನೀಡಿದ್ದು, ಅವರಲ್ಲಿ ಸೋಂಕು ದೃಢಪಟ್ಟಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಮಾಹಿತಿ ನೀಡಿದ್ದಾರೆ. 

ಕರೋನಾ ಕಾಟ; ಕಲ್ಯಾಣ ಕರ್ನಾಟಕ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಕೇಂದ್ರ

ಇದೀಗ ವೈದ್ಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಕಲಬುರಗಿಯಲ್ಲಿ 3ನೇ ಸೋಂಕು ದೃಢಪಟ್ಟಿದೆ. 

ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಜನರಲ್ಲಿ ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.