ಕಲಬುರಗಿ(ಮಾ.18): ಕೊರೋನಾ ಸೋಂಕು ಜನರಲ್ಲಿ ಅದೆಷ್ಟರ ಮಟ್ಟಿಗೆ ಭೀತಿ ಹುಟ್ಟಿಸಿದರೆಯೆಂದರೆ ಯಾರಾದರೂ ಸಾರ್ವಜನಿಕವಾಗಿ ಜೋರಾಗಿ ಕೆಮ್ಮಿದರೂ ಸಾಕು ಸುತ್ತಮುತ್ತಲಿದ್ದವರು ಬೆಚ್ಚಿ ಬೀಳುವ, ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕುದುರೆಗೂ ಕೊರೋನಾ ವೈರಸ್‌ ಕಾಟ: ಹಾರ್ಸ್‌ಗೂ ಮಾಸ್ಕ್! 

ಕಲಬುರಗಿ ಜಿಲ್ಲೆ ಮಂಗಳವಾರ ಇಂಥದ್ದೇ ಒಂದು ಪ್ರಕರಣಕ್ಕೆ ಸಾಕ್ಷಿಯಾಗಿದೆ. ದೇವಸ್ಥಾನಕ್ಕೆ ಬಂದಿದ್ದಾತ ಜೋರಾಗಿ ಕೆಮ್ಮಿದ್ದಾನೆ ಎಂಬ ಒಂದೇ ಕಾರಣಕ್ಕೆ ಆತನನ್ನು ಕೊರೋನಾ ಪೀಡಿತ ಎಂದು ಶಂಕಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಐಪಿಎಲ್‌ ನಡೆದರೂ ವಿದೇಶಿ ಆಟಗಾರರು ಬರೋದಿಲ್ಲ?

ಆಗಿದ್ದೇನು?: 

ಮಂಗಳವಾರ ಇಲ್ಲಿನ ಶರಣಬಸವೇಶ್ವರ ಮಂದಿರದಲ್ಲಿನ ಶರಣರ ಸಮಾಧಿ ದರ್ಶನಕ್ಕೆಂದು ಬಂದಿದ್ದ ಯುವಕನೊಬ್ಬ ಕೆಲ ಹೊತ್ತು ಜೋರಾಗಿ ಕೆಮ್ಮಿದ್ದಾನೆ. ಯುವಕ ಏಕಾಏಕಿ ಹೀಗೆ ಕೆಮ್ಮಲು ಶುರುವಿಟ್ಟದ್ದನ್ನು ಕಂಡ ಜನ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಆ್ಯಂಬುಲೆನ್ಸ್‌ನಲ್ಲಿ ಯುವಕನನ್ನು ಜಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಇದು ಕೊರೋನಾ ಆತಂಕದ ಕೆಮ್ಮು ಅಲ್ಲ, ಯುವಕನಿಗೆ ಧೂಳಿನಿಂದ ಇಂಥ ಕೆಮ್ಮು ಉಂಟಾಗಿದೆ ಎಂದು ಹೇಳಿ ಯುವಕನನ್ನು ವಾಪಸ್‌ ಕಳುಹಿಸಿದ್ದಾರೆ.