23 ವರ್ಷದಿಂದ ಮುಚ್ಚಿದ್ದ 140 ವರ್ಷ ಹಳೆಯ ಕೆಜಿಎಫ್‌ ಆಸ್ಪತ್ರೆ ಈಗ Covid ಕೇರ್‌ ಕೇಂದ್ರ

  • 23 ವರ್ಷಗಳಿಂದ ಮುಚ್ಚಿದ್ದ ಕಾಲದ ಬಿ.ಜಿ.ಎಂ.ಎಲ್‌ ಆಸ್ಪತ್ರೆ ಓಪನ್
  • ಕೋವಿಡ್‌ ಕೇರ್‌ ಸೆಂಟರ್‌ ಆಗಿ ಮಾರ್ಪಾಡು 
  • 140 ವರ್ಷಗಳಷ್ಟು ಹಳೆಯ ಆಸ್ಪತ್ರೆಗೆ ಮರುಜೀವ
covid 140 year Old KGF Hospital  Reopen After 23 years snr

ಕೆಜಿಎಫ್‌ (ಮೇ.19): ಕಳೆದ 23 ವರ್ಷಗಳಿಂದ ಮುಚ್ಚಿದ್ದ ಕಾಲದ ಬಿ.ಜಿ.ಎಂ.ಎಲ್‌ ಆಸ್ಪತ್ರೆಯನ್ನು ಮಂಗಳವಾರ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಮಾರ್ಪಾಡು ಮಾಡಲಾಗಿದ್ದು ಮಂಗಳವಾರದಂದು ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದ್ದಾರೆ.

 ಆಸ್ಪತ್ರೆಯಲ್ಲಿನ ಬೆಡ್‌ ವ್ಯವಸ್ಥೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಅವರು ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಪ್ರಾರಂಭಿಕವಾಗಿ 250 ಹಾಸಿಗೆಗಳನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಿ, ಆಕ್ಸಿಜನ್‌ ಪ್ಲಾಂಟ್‌ನ್ನು ಸಹ ನಿರ್ಮಿಸಲಾಗುತ್ತದೆ. ಸರ್ಕಾರ ಮತ್ತು ಸ್ವಯಂಸೇವಕ ಡಾಕ್ಟರ್‌ಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದು ಸರ್ಕಾರ ಅವರಿಗೆ ಗೌರವಧನವನ್ನು ನೀಡಲಿದೆ ಎಂದರು. ಕೆಜಿಎಫ್‌ನ ಗಣಿ ಕಾರ್ಮಿಕರ ಚಿಕಿತ್ಸೆ ಸಲುವಾಗಿ ಬ್ರಿಟಿಷ್ ಕಾಲದಲ್ಲಿ ಕಟ್ಟಲ್ಪಟ್ಟಈ ಆಸ್ಪತ್ರೆಗೆ 140 ವರ್ಷಗಳ ಇತಿಹಾಸವಿದೆ.

ಹೆಚ್ಚಿದ ಕೊರೋನಾ: ಪಾಳುಬಿದ್ದಿದ್ದ ಬ್ರಿಟಿಷ್ ಕಾಲದ BGML ಆಸ್ಪತ್ರೆಗೆ ಮರುಜೀವ

ಕಾಲಕ್ರಮೇಣ ಆಸ್ಪತ್ರೆಗೆ ಆದಾಯ ಕಡಿಮೆಯಾಗಿ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ 2001ರಲ್ಲಿ ಅನಿವಾರ್ಯವಾಗಿ ಬೀಗ ಹಾಕಲಾಗಿತ್ತು. ಇದೀಗ ಪಾಳು ಬಿದ್ದಿದ್ದ ಆಸ್ಪತ್ರೆಯನ್ನು ಬಿಜೆಪಿ ಮತ್ತು ಆರೆಸ್ಸೆಸ್‌ ಕಾರ್ಯಕರ್ತರು ಮುತುವರ್ಜಿ ವಹಿಸಿ ಶುಚಿಗೊಳಿಸಿಕೊಟ್ಟಿದ್ದು ಕೋವಿಡ್‌ ಸೆಂಟರ್‌ ಆಗಿ ಪರಿವರ್ತಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios