ಮೈಸೂರು(ಅ.02): ಪತಿ ಹದವಾಗಿ ಹಿಟ್ಟು ಕಲೆಸಿಕೊಟ್ಟರೆ ಪತ್ನಿ ನಯವಾಗಿ ತಟ್ಟಿ, ಗರಿಗರಿಯಾಗಿ ಬೇಯಿಸಿದರು. ಮೈಸೂರಿನಲ್ಲಿ ಕಪಲ್ಸ್ ಸೇರಿಕೊಂಡು ಭರ್ಜರಿ ಅಡುಗೆ ಮಾಡಿದ್ರು.

ದಸರಾ ಮಹೋತ್ಸವದ ಅಂಗವಾಗಿ ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಮಂಗಳವಾರ ಗಂಡ ಹೆಂಡತಿಯರಿಗಾಗಿ ಆಯೋಜಿಸಿದ್ದ ರಾಗಿರೊಟ್ಟಿಮತ್ತು ಹುಚ್ಚೆಳ್‌ ಚಟ್ನಿ ನಳಪಾಕ ಸ್ಪರ್ಧೆ ಸೊಗಸಾಗಿ ನಡೆಯಿತು. ಉದ್ಯೋಗಿಗಳು, ಚಿತ್ರಮಂದಿರಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಒಟ್ಟು 10 ಜೋಡಿಗಳು ಭಾಗವಹಿಸಿದ್ದರು.

ಮೈಸೂರು: ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಮತ್ಸ್ಯಲೋಕ..!

ಪತಿ- ಪತ್ನಿಯರು ಕಾಯಿ ತುರಿಯುವುದು, ಕೊತ್ತಂಬರಿ ಸೊಪ್ಪು ಹಚ್ಚುವುದು ಹೀಗೆ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಹುಚ್ಚೆಳ್ಳು ಚಟ್ನಿ ರಾಗಿರೊಟ್ಟಿಸಿದ್ದಪಡಿಸಿದರು. ತಾಮ್ರದ ತಟ್ಟೆಯ ಒಳಗೆ ಬಾಳೆಯಲ್ಲಿ ರಾಗಿ ರೊಟ್ಟಿಮತ್ತು ಹುಚ್ಚೆಳ್‌ ಚಟ್ನಿಯನ್ನು ಇಟ್ಟು ವಿವಿಧ ಬಗೆಯ ತರಕಾರಿಗಳು ಮತ್ತು ಹೂಗಳಿಂದ ಅಲಂಕರಿಸಿದರು. ಇದರಲ್ಲಿ ಮೊದಲ ಬಹುಮಾನ ಸುಚಿತ್ರ ಮಹೇಶ್‌ ರಾಜ್ ಅರಸ್‌, ಮಧು- ನಾಗರಾಜುಗೆ ದ್ವಿತೀಯ ಸ್ಥಾನ, ಹರ್ಷಿತ -ರಾಜ ಬಸ್ಸಿ ಅವರಿಗೆ ತೃತೀಯ ಸ್ಥಾನ ಒಲಿಯಿತು.

ಮೈಸೂರು ದಸರಾದಲ್ಲಿ 'ತೇರಿ ಮೇರಿ' ಸಿಂಗರ್ ರಾನು ಮಂಡಾಲ್ ಕಾರ್ಯಕ್ರಮ ರದ್ದು

ರಾಗಿಮುದ್ದೆ ನಾಟಿಕೋಳಿ ಸಾರು:

ಆಹಾರ ಮೇಳದಲ್ಲಿ ಆಯೋಜಿಸಿದ್ದ ರಾಗಿಮುದ್ದೆ ನಾಟಿಕೋಳಿ ಸಾರು ತಿನ್ನುವ ಸ್ಪರ್ಧೆಯು ರಸವತ್ತಾಗಿತ್ತು. ಸ್ಪರ್ಧೆಯಲ್ಲಿ 27 ಮಂದಿ ಹೆಸರು ನೊಂದಾಯಿಸಿಕೊಂಡಿದ್ದರು. ಬಳಿಕ ಲಾಟರಿ ಮೂಲಕ 10 ಜನರನ್ನು ಆಯ್ಕೆ ಮಾಡಲಾಯಿತು. ಎಲ್ಲರಿಗೂ 200 ಗ್ರಾಂನ ಮೂರು ಮುದ್ದೆ, 50 ಗ್ರಾಂ ಚಿಕನ್‌ ಸಾಂಬಾರ್‌ ನೀಡಲಾಗಿತ್ತು. 56 ಸೆಕೆಂಡ್‌ನಲ್ಲಿ ತಿಂದ ವೆಂಕಟೇಶ್‌ ಪ್ರಥಮ ಸ್ಥಾನ, 1.26 ನಿಮಿಷದಲ್ಲಿ ತಿಂದ ಶಿವಾನಂದ ದ್ವಿತೀಯ ಹಾಗೂ 1.36 ನಿಮಿಷದಲ್ಲಿ ತಿಂದ ಶಿವಣ್ಣ ಮೂರನೇ ಸ್ಥಾನ ಒಲಿಯಿತು.

- ತಂಗಂ ಜಿ. ಗೋಪಿನಾಥಂ