ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಭಾಗವಾದ ಯುವ ದಸರಾದಲ್ಲಿ ಇಂದು ಕಾರ್ಯಕ್ರಮ ನೀಡಬೇಕಿದ್ದ ಇಂಟರ್ನೆಟ್ ಸೆನ್ಸೇಷನ್ ಸಿಂಗರ್ ರಾನು ಮಂಡಾಲ್ ಕಾರ್ಯಕ್ರಮ ರದ್ದಾಗಿದೆ. ರಾನು ಮಂಡಾಲ್ ದಿಢೀರ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೈಸೂರಿಗೆ ಆಗಮಿಸುತ್ತಿಲ್ಲ.  

ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ

ಮೈಸೂರು ದಸರಾ ಹಬ್ಬದ ಅಂಗವಾಗಿ ಯುವ ದಸರಾ ಉದ್ಘಾಟನೆ ದಿನವಾದ ಇಂದು ರಾನು ಮಂಡಲ್ ಆಹ್ವಾನಿಸಿ ಕಾರ್ಯಕ್ರಮ ನೀಡಲು ಈ ಬಾರಿ ಮೈಸೂರು ಜಿಲ್ಲಾಡಳಿತ ಸಜ್ಜಾಗಿತ್ತು. ಮನೆಯಿಂದ ಕೋಲ್ಕತ್ತಾ ಏರ್ ಪೋರ್ಟ್ ಗೆ ಬರುವಾಗ ಅತಿಯಾದ ವಾಂತಿಯಾದ ಕಾರಣ ರಾನು ಮಂಡಾಲ್ ಬಂಗಾಳದಲ್ಲೇ ಉಳಿದುಕೊಂಡಿದ್ದಾರೆ.

ಶೋರ್ ಸಿನಿಮಾದ ಲತಾ ಮಂಗೇಶ್ಕರ್ ಹಿಟ್ ಹಾಡು ಏಕ್ ಪ್ಯಾರ್ ಕ ನಗ್ಮಾ ಹೇ ಹಾಡು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು ರಾನು ಮಂಡಾಲ್. ಇವರಲ್ಲಿರುವ ಟ್ಯಾಲೆಂಟ್ ನೋಡಿ ಸಿಂಗರ್ ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟಿದ್ದಾರೆ. 

ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾನು ಮಂಡಾಲ್; ಯಾರೀಕೆ?

ಹಿಮೇಶ್ ರೇಶಮಿಯಾ ಮುಂಬರುವ ಸಿನಿಮಾ ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್ ಸಿನಿಮಾದಲ್ಲಿ ತೇರಿ ಮೇರಿ ಕಹಾನಿ ಎನ್ನುವ ಹಾಡನ್ನು ಹಾಡಲು ಇವರಿಗೆ ಅವಕಾಶ ಕೊಟ್ಟಿದ್ದಾರೆ.