ಮೈಸೂರು(02): ರೈತ ದಸರಾ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯಲೋಕ ಹಲವು ಬಗೆಯ ಮೀನುಗಳನ್ನು ಪರಿಚಯಿಸುತ್ತಿದೆ.

ಮತ್ಸ್ಯ ಸಂಕುಲದ ಮಾಯಾ ಲೋಕವನ್ನೇ ಸೃಷ್ಟಿಸಿರುವ ಈ ಮಳಿಗೆ ನೂರಾರು ಜಾತಿಯ ಸಾಕು ಮೀನುಗಳು, ಅವುಗಳ ವೈಶಿಷ್ಟ್ಯವನ್ನು ತಿಳಿಸುತ್ತದೆ. ಗಾತ್ರದಲ್ಲಿ ಬಾಸುಮತಿ ಅಕ್ಕಿಯಂತಿರುವ ಮೀನಿನಿಂದ ಹಿಡಿದು ದಪ್ಪದಪ್ಪ ಮೀನುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ದಸರಾ ಕ್ರೀಡಾಕೂಟ ಉದ್ಘಾಟಿಸಿದ ಪಿವಿ ಸಿಂಧು!

ಮೀನು ಮಾರಾಟ, ತಿನ್ನುವುದು ಮತ್ತು ಸಾಕಾಣಿಕೆಯ ಜೊತೆಗೆ ಮೀನು ಕೃಷಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟುಪ್ರೋತ್ಸಾಹ ದೊರೆಯುತ್ತಿದೆ. ಇದೇ ಉದ್ದೇಶದಿಂದಾಗಿ ರೈತ ದಸರಾ ಭಾಗವಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ಮತ್ಸ್ಯಲೋಕ ಮಳಿಗೆ ತೆರೆಯಲಾಗಿದೆ. ಮಳೆಯ ಕೊರತೆ, ಬರಗಾಲ, ಅತಿವೃಷ್ಟಿಮುಂತಾದ ಕಾರಣದಿಂದಾಗಿ ರೈತರು ಬೆಳೆ ನಷ್ಟಅನುಭವಿಸಿ ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ಈ ಸಂದರ್ಭದಲ್ಲಿ ಮೀನುಗಾರಿಕೆ ಮೂಲಕ ರೈತರು ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ.

ಮಾಹಿತಿ ಪ್ರದರ್ಶನ:

ಕಾಟ್ಲ, ಮೃಗಾಲ್‌, ಮಿಶ್ರ ತಳಿ ಮೀನು ಸಾಕಾಣಿಕೆ ಮಾಡಲು ರೈತರಿಗೆ ಉತ್ತೇಜನ ನೀಡುವ ಕಾರ್ಯಕ್ರಮವನ್ನು ಮೀನುಗಾರಿಕೆ ಇಲಾಖೆ ಹಮ್ಮಿಕೊಂಡಿದೆ. ಸರ್ಕಾರದಿಂದ ರೈತರಿಗೆ ದೊರಕಬಹುದಾದ ಸೌಲಭ್ಯ, ಸಾಲ, ಸಾಕಿದ ಮೀನುಗಳ ಮಾರಾಟ ವ್ಯವಸ್ಥೆ ಮುಂತಾದ ಎಲ್ಲ ಬಗೆಯ ಮಾಹಿತಿಯನ್ನೂ ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಅಂತೆಯೇ ಇಲಾಖೆ ಮೀನು ಸಂರಕ್ಷಣೆ ಮತ್ತು ಸಾಕಾಣಿಕೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿರುವ ಹೊಸ ಕಾರ್ಯಕ್ರಮ ತಿಳಿಸಿಕೊಡಲಾಗುತ್ತದೆ.

ಬ್ಯಾನರ್ ಬದಲಾಯಿಸದ್ದಕ್ಕೆ ಸಚಿವರು ಫುಲ್ ಗರಂ..!

ಇದಿಷ್ಟುರೈತರಿಗೆ ಸಂಬಂಧಿಸಿದ ಮಾಹಿತಿಯಾದರೆ, ಯುವಕ, ಯುವತಿಯರು ಮತ್ತು ಮತ್ಸ್ಯ ಪ್ರಿಯರಿಗಾಗಿ ಹಲವು ಬಗೆಯ ಸಾಕು ಮೀನುಗಳಿವೆ. ಬೆಳಗ್ಗೆಯಿಂದ ಸಂಜೆವರೆಗೆ ಆಗಮಿಸುವ ನೂರಾರು ಯುವತಿಯರು ಮೀನುಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಮಕ್ಕಳನ್ನು ನಿಲ್ಲಿಸಿ ಹಲವರು ಫೋಟೋ ಕ್ಲಿಕ್ಕಿಸಿಕೊಂಡರು. ಎಲ್ಲ ಬಗೆಯ ಮೀನುಗಳ ಮಾಹಿತಿ ಪಡೆದುಕೊಂಡರು, ಮತ್ಯ ಪ್ರದರ್ಶನದಿಂದ ಉತ್ತೇಜಿತರಾಗಿ ತಾವೂ ಕೂಡ ಅಕ್ವೇರಿಯಂ ಮತ್ತು ಮೀನು ಖರೀದಿಸಿದರು.

ಸುಮಾರು 60 ತಳಿಯ ಪ್ರದರ್ಶನ

ವಿವಿಧ ಮಾದರಿ ಮತ್ತು ಗಾತ್ರದ ಅಕ್ವೈರಿಯಂ, ಮೀನುಗಳು ಮತ್ತು ಅವುಗಳ ಆಹಾರ ಮಾರಾಟ ಜೋರಾಗಿತ್ತು. 50 ರಿಂದ 60 ತಳಿಯ ಮೀನುಗಳು ಪ್ರದರ್ಶನಗೊಳ್ಳುತ್ತಿವೆ. ಒಂದೊಂದು ಜಾತಿಯ ಮೀನೂ ಹತ್ತಾರು ತಳಿಯನ್ನು ಹೊಂದಿವೆ. ಈ ಎಲ್ಲ ತಳಿಯ ಮೀನುಗಳು ಇಲ್ಲಿ ಲಭ್ಯವಿದೆ. ಹೊಂಡದಲ್ಲಿ ಮೀನು ಸಾಕಾಣಿಕೆ, ಪಂಜರ ಮಾದರಿಯ ಅಕ್ವೈರಿಯಂಗಳಲ್ಲಿ ಮೀನು ಸಾಕಾಣಿಕೆ, ಮಿಶ್ರತಳಿ ಮೀನು ಸಾಕಾಣಿಕೆ ಮಾಹಿತಿ ಇಲ್ಲಿ ದೊರೆಯುತ್ತದೆ.

ಮೈಸೂರು ದಸರಾದಲ್ಲಿ 'ತೇರಿ ಮೇರಿ' ಸಿಂಗರ್ ರಾನು ಮಂಡಾಲ್ ಕಾರ್ಯಕ್ರಮ ರದ್ದು

ಮೀನು ಕೃಷಿಯ ಜೊತೆಗೆ ಇತರೆ ಬೆಳವಣಿಕೆ, ಸಾಕಾಣಿಕೆ, ಪಂಜರದಲ್ಲಿ ಮೀನು ಸಾಕಾಣಿಕೆ, ಮಿಶ್ರ ತಳಿ ಮೀನು ಸಾಕಾಣಿಕೆ ಮಾಹಿತಿ ದೊರೆಯುತ್ತದೆ. ಮನೆಯಲ್ಲಿ ಅಲಂಕಾರಿಕ ಮತ್ತು ಸಾಕು ಮೀನುಗಳಾದ ಗೋಲ್ಡ್‌ ಫಿಶ್‌, ಫಿಶಿಂಗ್‌ ಗೊರಾಮಿ, ಆಲ್ಬಿನಾ ಟೈಗರ್‌, ಟೈಗರ್‌ ಶಾರ್ಕ್, ಇೕಲ್ಸ್‌, ಪ್ಯಾರೆಟ್‌ ಫಿಶ್‌, ಮೃಗಾಲ್‌, ಕಾಮನ್‌ ಕೋರ್ಕ್, ಕೋಯಿ ಕಾರ್ಕ್, ಸಿಟ್ಲೆಡ್‌ ಹೀಗೆ ಹಲವು ಜಾತಿಯ ಬಣ್ಣದ ಆಧಾರದ ಮೇಲೆ ಹತ್ತಾರು ಉಪ ಜಾತಿಯ ಮೀನುಗಳ ಪರಿಚಯವಾಗುತ್ತದೆ. ಅ. 6 ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8.30 ವರೆಗೆ ಈ ಮತ್ಸ್ಯಲೋಕದ ಪ್ರದರ್ಶನ ಇರುತ್ತದೆ.

-ಮಹೇಂದ್ರ ದೇವನೂರು