ಹಾಸನ (ಫೆ.16):  ಸಾಕಿ ಬೆಳೆಸಿದ ಮಗಳು ತಾವು ತೋರಿಸಿದ ವರನನ್ನು ಮದುವೆಯಾಗಲು ಒಪ್ಪದೆ ಬೇರೊಬ್ಬನನ್ನು ಪ್ರೀತಿಸಿದ್ದರಿಂದ ನೊಂದ ಪುಟ್ಟರಾಜು(58) ಹಾಗೂ ಕಾಂತಮ್ಮ(53) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪುಟ್ಟರಾಜು ಹಾಗೂ ಕಾಂತಮ್ಮ ಅವರಿಗೆ ಮಕ್ಕಳಿರಲಿಲ್ಲ. ಇದರಿಂದ ಕಾಂತಮ್ಮ ಅವರ ಅಕ್ಕನ ಮಗ ಹಾಗೂ ತಂಗಿಯ ಮಗಳನ್ನು ದತ್ತು ಪಡೆದು ಚಿಕ್ಕಂದಿನಿಂದ ತಾವೇ ಸಾಕಿ ಬೆಳೆಸಿ, ಓದಿಸಿದ್ದರು. 

ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಬಂದ ಮಗನೂ ಸಾವು ...

2 ವರ್ಷಗಳ ಹಿಂದೆ ಮಗನಿಗೆ ಮದುವೆ ಮಾಡಿದ್ದರು. ಮದುವೆಯಾದ ನಂತರ ಮಗ ಇಲ್ಲಸಲ್ಲದ ಕಾರಣ ತೆಗೆದು ಬೂವನಹಳ್ಳಿಯಲ್ಲಿರುವ ತನ್ನ ಹೆತ್ತಮ್ಮನ ಮನೆ ಸೇರಿಕೊಂಡ. ಇದರಿಂದ ಪುಟ್ಟರಾಜು ಹಾಗೂ ಕಾಂತಮ್ಮ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು.

ಈ ನಡುವೆ ಮಗಳಿಗೆ ಮದುವೆ ಮಾಡಲು ಸಿದ್ಧತೆ ನಡೆಸಿ ಅರಕಲಗೂಡು ತಾಲೂಕಿನ ಹಂಡ್ರಂಗಿ ಗ್ರಾಮದ ಹುಡುಗನ ಜತೆ ಫೆ.14 ರಂದು ನಿಶ್ಚಿತಾರ್ಥ ಇಟ್ಟುಕೊಂಡಿದ್ದರು. ಆದರೆ ಮಗಳು ನಿಶ್ವಿತಾರ್ಥಕ್ಕೆ ಸುತಾರಾಂ ಒಪ್ಪಲೇ ಇಲ್ಲ. ಇದಕ್ಕೆ ಕಾರಣ ಅವಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಮಗಳನ್ನು ಎಷ್ಟೇ ಮನವೊಲಿಸಿದರೂ ಒಪ್ಪದೇ ಅವಳೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಳು. ಕಡೆಗೆ ನಿಶ್ಚಿತಾರ್ಥ ಕಾರ್ಯಕ್ರಮ ಮುರಿದುಬಿತ್ತು. ಕುಟುಂಬದ ಗೌರವ ಹಾಳಾಯಿತು ಎಂದು ನೊಂದ ದಂಪತಿ ನೇಣು ಬಿಗಿದುಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.