ಹಾಸನ (ಫೆ.07):  ಮರಣ ಹೊಂದಿದ್ದ ತಾಯಿ ಅಂತ್ಯಸಂಸ್ಕಾರ ಮುಗಿಸಿ ಬಂದ ನಂತರ ಮಗನೂ ಸಾವನ್ನಪ್ಪಿದ್ದಾನೆ.

ಈ ದಾರುಣ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲಿ ನಡೆದಿದೆ. 

ವಯೋಸಹಜ ಕಾಯಿಲೆ ಯಿಂದ ಬಳಲುತ್ತಿದ್ದ 75 ವರ್ಷದ ತಾಯಿ ಗೌರಮ್ಮ ಸಾವನ್ನಪ್ಪಿದ್ದರು. ಅನಾರೋಗ್ಯ ಹಿನ್ನೆಲೆ ಒಂದು ವಾರದಿಂದ  ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗೌರಮ್ಮನ ಮಗ ಗಣೇಶ್  ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಮರಣ ಹೊಂದಿದ ಹಿನ್ನೆಲೆ ಅಂತ್ಯಸಂಸ್ಕಾರ ನಡೆಸಲು ಮಗ ತೆರಳಿದ್ದರು.  ಅಂತ್ಯ ಸಂಸ್ಕಾರ ನಡೆಸಿ ಮನೆಗೆ ವಾಪಸ್ಸಾದ  53 ವರ್ಷದ ಗಣೇಶ್ ದಿಡೀರ್ ತೀವ್ರ ಅಸ್ವಸ್ಥರಾಗಿದ್ದರು. 

ಬಾಗಲಕೋಟೆ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ, ಅಬಕಾರಿ ನಿರೀಕ್ಷಕನ ವಿರುದ್ಧ FIR ...

ಕೂಡಲೇ ಅರಕಲಗೂಡು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಗಣೇಶ್  ಸಾವನ್ನಪ್ಪಿದ್ದಾರೆ. 

ಒಂದು ದಿನದ ಅಂತರದಲ್ಲಿ ತಾಯಿ- ಮಗ ಇಬ್ಬರೂ ಸಾವನ್ನಪ್ಪಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ.