ಕೋಲಾರ ತಾಲೂಕು ಕಚೇರಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ: ಚಪ್ಪಲಿ ಸವಿಸಿದ್ರು ಇಲ್ಲಿ ಯಾವುದೇ ಕೆಲಸ ಆಗಲ್ಲ!
ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಆದ್ರೆ ಕೋಲಾರ ತಾಲೂಕು ಕಚೇರಿಯಲ್ಲಿ ಮಾತ್ರ ಇದಕ್ಕೆ ವಿರುದ್ಧ. ಇಲ್ಲಿ ಹಣ ನೀಡಿದ್ರೆ ಮಾತ್ರ ಕೆಲಸ ಆಗುತ್ತೆ, ಇಲ್ಲ ಅಂದ್ರೆ ನಾಳೆ ಬನ್ನಿ ಅಂತ ಕಥೆ ಹೇಳಿ ಕಳುಹಿಸುತ್ತಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಮೇ.30): ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಆದ್ರೆ ಕೋಲಾರ ತಾಲೂಕು ಕಚೇರಿಯಲ್ಲಿ ಮಾತ್ರ ಇದಕ್ಕೆ ವಿರುದ್ಧ. ಇಲ್ಲಿ ಹಣ ನೀಡಿದ್ರೆ ಮಾತ್ರ ಕೆಲಸ ಆಗುತ್ತೆ, ಇಲ್ಲ ಅಂದ್ರೆ ನಾಳೆ ಬನ್ನಿ ಅಂತ ಕಥೆ ಹೇಳಿ ಕಳುಹಿಸುತ್ತಾರೆ. ಇನ್ನು ಜಾಸ್ತಿ ಮಾತಾಡಿದ್ರೆ ಮುಗೀತು ದಾಖಲಾತಿ ನಾಪತ್ತೆ ಆಗಿದೆ ಅಂತ ಕೇಸ್ ನೆ ಮುಚ್ಚಿ ಹಾಕ್ತಾರೆ. ಇತ್ತ ಜಿಲ್ಲಾಡಳಿತ ಸಹ ಯಾವುದಕ್ಕೂ ತಲೆ ಕೆಡಿಸಿಕೊಳ್ತಿಲ್ಲ.ಈ ಕುರಿತ ವರದಿ ಇಲ್ಲಿದೆ ನೋಡಿ. ಹೌದು! ಅದ್ಯಾಕೋ ಏನೋ ಕೋಲಾರ ತಾಲೂಕು ಕಚೇರಿ ಅಂದ್ರೆ ಸಾಕು ಸಾರ್ವಜನಿಕರು ಹಾಗೂ ರೈತರು ಹಿಡಿ ಶಾಪ ಹಾಕ್ತಿದಾರೆ. ಇಲ್ಲಿಗೆ ಒಂದೇ ಸಲಕ್ಕೆ ಇದುವರೆಗೂ ಕೆಲಸ ಆಗಿರುವ ಉದಾಹರಣೆ ಇಲ್ವೇ ಇಲ್ಲ ಅಂತ ಜನಸಾಮಾನ್ಯರ ಮಾತನಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ ಕೋಲಾರದ ತಾಲೂಕು ಕಚೇರಿ.
ಪ್ರತಿ ಕೆಲಸಕ್ಕೂ ಇಲ್ಲಿ ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಒಂದು ವೇಳೆ ಲಂಚ ನೀಡಿಲ್ಲ ಅಂದ್ರೆ ಪ್ರತಿ ದಿನ ಅಲೆಸಿ ಅಲೆಸಿ ಸಾಕು ಸಾಕಾಗಿ ಮಾಡಿಬಿಡ್ತಾರೆ ಇಲ್ಲಿನ ಅಧಿಕಾರಿಗಳು. ಇನ್ನು ಇಲ್ಲಿ ಬಹುತೇಕ ರೈತರೇ ಆಗಮಿಸುತ್ತಿದ್ದು, ಹೆಚ್ಚಿಗೆ ಏನಾದ್ರು ಮಾತನಾಡಿದ್ರೆ ನೀವು ಕೇಳಿರುವ ದಾಖಲಾತಿ ಇಲ್ಲ ಅನ್ನೋ ರೆಡಿಮೇಡ್ ಉತ್ತರ ನೀಡಿ ಅಲೆದಾಡಿಸುತ್ತಾರೆ. ಇವೆಲ್ಲ ಕಣ್ಣಾರೆ ಕಂಡರು ಸಹ ತಹಶೀಲ್ದಾರ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳೋದಿಲ್ಲ. ನೋಡಿ ಸ್ವಾಮಿ ಈ ರೀತಿ ಮಾಡ್ತಿದ್ದಾರೆ ಅಂತ ರೈತರು, ತಹಶೀಲ್ದಾರರನ್ನು ಕೇಳಿದ್ರು ಸಹ ಸರಿಯಾಗಿ ಸ್ಪಂದಿಸದೆ ಕಳುಹಿಸುತ್ತಾರೆ.
ಮಳೆ ಅವಾಂತರಕ್ಕೆ ಸಾವಿರಾರು ಎಕ್ಟೇರ್‌ನಷ್ಟು ಮಾವು ನಾಶ: ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ನಾಪತ್ತೆ!
ಹೀಗಾಗಿ ರೈತರು ತಾಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. ಇನ್ನು ಮೊನ್ನೆ ತಾನೆ ಕೋಲಾರ ತಾಲೂಕಿನ ಪುರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಅನ್ನೋ ರೈತ ಇದೆ ವಿಚಾರವಾಗಿ ಡೀಸಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗ, ಕ್ಷಣಾರ್ಧದಲ್ಲಿ ಸ್ಥಳೀಯರ ಸಮಯಪ್ರಜ್ಞೆಯಿಂದ ರೈತನ ಪ್ರಾಣ ಉಳಿದಿದೆ. ಹೌದು ಕೋಲಾರ ತಾಲೂಕು ಕಚೇರಿಯ ಸಿಬ್ಬಂದಿ ದಾಖಲೆಗಳನ್ನ ನೀಡಿಲ್ಲ ಎಂದು ಮನನೊಂದ ಕೋಲಾರ ತಾಲೂಕು ಪುರಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದ.
Kolar: ಕೆಜಿಎಫ್ ಚಿನ್ನದ ಗಣಿಯಲ್ಲಿ ಪಾಲಿಟಿಕ್ಸ್: ಚುನಾವಣೆ ಬಂದ್ರೆ ಸಾಕು ನೆನಪಾಗುತ್ತೆ ಚಿನ್ನದ ಗಣಿ!
ಜಮೀನು ಮಾರಾಟ ಮಾಡಲು ಮೂಲ ದಾಖಲಾತಿಗಳನ್ನು ನೀಡದೆ ಆರು ತಿಂಗಳಿಂದ ಸತಾಯಿಸುತ್ತಿದ್ದ ತಾಲೂಕು ಕಚೇರಿ ಸಿಬ್ಬಂದಿಯ ಕ್ರಮಕ್ಕೆ ಬೇಸತ್ತ ರೈತ ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲೆ ಆತ್ಮಹತ್ಯೆಗೆ ಯತಿಸಿದ್ದ. ಆದ್ರೆ ಅದೃಷ್ಟವಶಾತ್ ಅಪಾಯದಿಂದ ಪಾರು ಮಾಡಲಾಯ್ತು. ಒಟ್ಟಾರೆ ಕೋಲಾರ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳ ಪರಿಸ್ಥಿತಿ ಇದೆ ಆಗಿದ್ದು, ಬೇಕಂತಲೆ ಸತಾಯಿಸುವುದು, ನಾಳೆ ಬಾ ಎನ್ನುವುದು, ಅದು ಸರಿಯಿಲ್ಲ ಇದು ಬೇಕು ಎಂದು ಕುಂಟು ನೆಪಗಳನ್ನ ಹೇಳಿ ರೈತರನ್ನ ಕಚೇರಿಗಳ ಸುತ್ತಾಡಿಸೋದನ್ನ, ರೂಢಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆದ್ರು ಸಹ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಮಂತ್ರಿಗಳು ಮಾತ್ರ ಕೈಕಟ್ಟಿ ಕುಳಿತಿರುವುದು ಮಾತ್ರ ದುರಂತವೇ ಸರಿ.