Asianet Suvarna News Asianet Suvarna News

Coronavirus In Karnataka :  20 ಸಾವಿರಕ್ಕಿಂತ ಕೆಳಗಿಳಿದ ಸಕ್ರಿಯ ಕೇಸು,   ಮೂರನೇ ಅಲೆ ಮುಕ್ತಾಯ!

* ರಾಜ್ಯದಲ್ಲಿ 20000ಕ್ಕಿಂತ ಕೆಳಗಿಳಿದ ಸಕ್ರಿಯ ಕೇಸು

* ಕೇವಲ 2 ವಾರದಲ್ಲಿ 2.75 ಲಕ್ಷದಷ್ಟುಸಕ್ರಿಯ ಪ್ರಕರಣ ಇಳಿಕೆ

* ನಿನ್ನೆ ರಾಜ್ಯದಲ್ಲಿ 1579 ಜನರಿಗೆ ಸೋಂಕು, 23 ಜನರ ಸಾವು

Coronavirus Karnataka  sees 1,579   new Covid-19 cases, 23 deaths in 24 hours mah
Author
Bengaluru, First Published Feb 18, 2022, 3:56 AM IST

ಬೆಂಗಳೂರು(ಫೆ. 18)  ರಾಜ್ಯದಲ್ಲಿ ಕೊರೋನಾ (Coronavirus) ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರದೊಳಗೆ(Karnataka) ಬಂದಿದೆ. ಎರಡು ವಾರಗಳ 3 ಲಕ್ಷ ಮೀರಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ವೇಗವಾಗಿ ಇಳಿದಿದೆ. ಹೊಸದಾಗಿ 1,579 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 23 ಮಂದಿ ಮೃತರಾಗಿದ್ದಾರೆ.

ಸೋಂಕಿನ ಪ್ರಮಾಣ ಕಡಿಮೆಯಾಗಿ ಗುಣಮುಖರ ಸಂಖ್ಯೆ ಹೆಚ್ಚಾಗಿರುವುದರಿಂದ ಸದ್ಯ 19,791 ಮಂದಿಯಲ್ಲಿ ಮಾತ್ರ ಸೋಂಕು ಸಕ್ರಿಯವಾಗಿದೆ. ಈ ಪೈಕಿ 1,291 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

90,688 ಮಂದಿಯ ಕೋವಿಡ್‌ ಪರೀಕ್ಷೆ ನಡೆದಿದ್ದು, ಶೇ.1.74 ಪಾಸಿಟಿವಿಟಿ ವರದಿಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಪಾಸಿಟಿವಿಟಿ ದರ ಶೇ.5ರೊಳಗೆ ಬಂದಿದೆ. ಗರಿಷ್ಠ ಪಾಸಿಟಿವಿಟಿ ದರ ತುಮಕೂರು ಮತ್ತು ಯಾದಗಿರಿಯಲ್ಲಿ (ಶೇ. 4.24) ದಾಖಲಾಗಿದೆ. ಮಂಡ್ಯ, ದಕ್ಷಿಣ ಕನ್ನಡ, ವಿಜಯಪುರ, ಹಾವೇರಿ, ಬೀದರ್‌, ಗದಗ, ರಾಮನಗರ, ರಾಯಚೂರು ಮತ್ತು ದಾವಣಗೆರೆಯಲ್ಲಿ ಶೇ. 1ಕ್ಕಿಂತ ಕಡಿಮೆ ಪಾಸಿಟಿವಿಟಿ ಇದೆ.

Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ: ಅನುಮತಿ ಕೋರಿಕೆ

ಬೆಂಗಳೂರು (Bengaluru)  ನಗರದಲ್ಲಿ 769 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ನೂರರ ಒಳಗೆ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದೆ. ರಾಮನಗರ (1), ರಾಯಚೂರು (3), ದಾವಣಗೆರೆ (4), ಗದಗ (6), ಹಾವೇರಿ ಮತ್ತು ಬೀದರ್‌ (7), ಕೊಪ್ಪಳ ಮತ್ತು ಬೆಂಗಳೂರು ಗ್ರಾಮಾಂತರ (9) ಜಿಲ್ಲೆಗಳಲ್ಲಿ ಕಡಿಮೆ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರದಲ್ಲಿ 7, ಬಾಗಲಕೋಟೆ, ದಕ್ಷಿಣ ಕನ್ನಡ, ಧಾರವಾಡ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ತಲಾ 2, ವಿಜಯಪುರ, ಉಡುಪಿ, ಕೊಡಗು, ಕೋಲಾರ, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮರಣವನ್ನಪ್ಪಿದ್ದಾರೆ.

ಈವರೆಗೆ ಒಟ್ಟು 39.33 ಲಕ್ಷ ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು 38.73 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,738 ಮಂದಿ ಮರಣವನ್ನಪ್ಪಿ್ದದ್ದಾರೆ.

ಲಸಿಕೆ ಅಭಿಯಾನ:  ಗುರುವಾರ 1.39 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 9,896 ಮಂದಿ ಮೊದಲ, 1.18 ಲಕ್ಷ ಎರಡನೇ ಮತ್ತು 11,159 ಮಂದಿ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 9.92 ಕೋಟಿ ಡೋಸ್‌ ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ. ಈವರೆಗೆ ಒಟ್ಟು 5.20 ಕೋಟಿ ಮಂದಿ ಮೊದಲ, 4.61 ಕೋಟಿ ಎರಡನೇ ಮತ್ತು 10 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ.

ಹೊಸ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿ, ಗುಣಮುಖರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಸಕ್ರಿಯ ಸೋಂಕು ಪ್ರಕರಣಗಳು 40 ದಿನಗಳ ಬಳಿಕ (ಜ.7) 10 ಸಾವಿರಕ್ಕಿಂತ ಕಡಿಮೆಯಾಗಿವೆ. ಸಕ್ರಿಯ ಸೋಂಕಿತರಲ್ಲಿ 486 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 161 ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ. ಉಳಿದ 9 ಸಾವಿರಕ್ಕೂ ಅಧಿಕ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ.

ಸಾವಿಗೀಡಾದ ನಾಲ್ಕು ಸೋಂಕಿತರ ಪೈಕಿ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.73 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.46 ಲಕ್ಷಕ್ಕೆ, ಸಾವಿನ ಸಂಖ್ಯೆ 16,785ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣವಿರುವ 7 ಸಕ್ರಿಯ ಕಂಟೈನ್ಮೆಂಟ್‌ ವಲಯ(Containment Zone), ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 11 ಕ್ಲಸ್ಟರ್‌ ವಲಯಗಳಿವೆ ಎಂದು ಬಿಬಿಎಂಪಿ(BBMP) ವರದಿಯಲ್ಲಿ ತಿಳಿಸಲಾಗಿದೆ.

 

Follow Us:
Download App:
  • android
  • ios