ಬೆಳಗಾವಿ(ಅ.10): ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ.ತಿಮ್ಮಾಪುರ ಗ್ರಾಮದ ಇನ್ನೂ 7 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಇರುವುದು ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ವಿದ್ಯಾಗಮದಡಿ ಪಾಠ ಕಲಿಯುತ್ತಿದ್ದ ಮಕ್ಕಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಎರಡು‌ ದಿನದಲ್ಲಿ ಒಟ್ಟು 130 ಜನರಿಗೆ ರ‍್ಯಾಪಿಡ್ ಟೆಸ್ಟ್ ಮಾಡಲಾಗಿತ್ತು. 

ಅ. 4 ಹಾಗೂ ಅ. 5ರಂದು ನಡೆಸಿದ ರ‍್ಯಾಪಿಡ್ ಟೆಸ್ಟ್ ವೇಳೆಯಲ್ಲಿ ಒಟ್ಟು 30 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿತ್ತು. ಇದೀಗ ಮತ್ತೆ 7 ವಿದ್ಯಾರ್ಥಿಗಳಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಎಲ್ಲಾ 30 ವಿದ್ಯಾರ್ಥಿಗಳಿಗೂ ಯಾವುದೇ ರೋಗದ ಗುಣಲಕ್ಷಣಗಳು ಇರದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಹೋಮ್ ಐಸೊಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. 

ಬೆಳಗಾವಿಯೊಂದರಲ್ಲಿಯೇ ಕೋವಿಡ್‌ನಿಂದ 110 ಶಿಕ್ಷಕರು ಸಾವು

ಮಕ್ಕಳಿಗೆ ಕೊರೋನಾ ವಕ್ಕರಿಸಿದ್ದರಿಮದ ಎಂ.ತಿಮ್ಮಾಪುರದಲ್ಲಿ ಸದ್ಯ ವಿದ್ಯಾಗಮ ಯೋಜನೆಯಡಿ ಪಾಠವನ್ನ ಸ್ಥಗಿತಗೊಳಿಸಲಾಗಿದೆ. ಮಕ್ಕಳಿಗೆ ಪಾಠ ಮಾಡುತ್ತಿದ್ದ 6 ಶಿಕ್ಷಕರಿಗೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ರಾಮದುರ್ಗ ಬಿಇಒ ಎಂ.ಆರ್.ಅಲಸೆ  ಅವರು ಸೂಚನೆ ನೀಡಿದ್ದಾರೆ. ಮುಖ್ಯಶಿಕ್ಷಕರಿಗೆ ಕೋವಿಡ್‌ ಟೆಸ್ಟ್ ಮಾಡಿಸಿದ್ದು ಅವರ ವರದಿ ನೆಗೆಟಿವ್ ಬಂದಿದೆ.