ಬೆಂಗ್ಳೂರಲ್ಲಿ ದಿನೇ ದಿನೆ ಹೆಚ್ಚುತ್ತಿದೆ ಕೊರೋನಾ ಸೋಂಕು..!
* ಪಾಸಿಟಿವಿಟಿ ದರ ಶೇ.1.22ಕ್ಕೆ ಏರಿಕೆ
* ಬೆಂಗಳೂರಲ್ಲಿ ಸದ್ಯ 1804 ಸಕ್ರಿಯ ಪ್ರಕರಣ
* ಐದು ಕಂಟೈನ್ಮೆಂಟ್ ವಲಯ
ಬೆಂಗಳೂರು(ಮೇ.29): ನಗರದಲ್ಲಿ ಕ್ರಮೇಣ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಶನಿವಾರ 175 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಪಾಸಿಟಿವಿಟಿ ದರ ಶೇ.1.22ಕ್ಕೆ ಹೆಚ್ಚಾಗಿದೆ. 125 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಸಾವು ದಾಖಲಾಗಿಲ್ಲ.
ಸದ್ಯ ನಗರದಲ್ಲಿ ಒಟ್ಟು 1804 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಇಬ್ಬರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ. ಶನಿವಾರ ಹೊಸದಾಗಿ ಯಾವುದೇ ಕಂಟೈನ್ಮೆಂಟ್ ವಲಯ ಸೃಷ್ಟಿಯಾಗಿಲ್ಲ. ಒಟ್ಟು ಐದು ಕಂಟೈನ್ಮೆಂಟ್ ವಲಯಗಳಿವೆ.
Covid Crisis: ಬಿಎ.4, ಬಿಎ.5 ಉಪತಳಿಯ ಮೊದಲ ದೇಶಿ ಕೇಸು ಪತ್ತೆ!
15,164 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 2244 ಮಂದಿ ಮೊದಲ ಡೋಸ್, 6936 ಮಂದಿ ಎರಡನೇ ಡೋಸ್ ಮತ್ತು 5984 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟು 14029 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 10,986 ಆರ್‌ಟಿಪಿಸಿಆರ್ ಹಾಗೂ 3043 ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.