Asianet Suvarna News Asianet Suvarna News

Covid Crisis: ಬಿಎ.4, ಬಿಎ.5 ಉಪತಳಿಯ ಮೊದಲ ದೇಶಿ ಕೇಸು ಪತ್ತೆ!

ವಿದೇಶಗಳಲ್ಲಿ ಭಾರೀ ಸೋಂಕಿಗೆ ಕಾರಣವಾಗಿದ್ದ, ಒಮಿಕ್ರೋನ್‌ನ ಬಿಎ.4 ಹಾಗೂ ಬಿಎ.5 ಉಪತಳಿಗಳ ಮೊಟ್ಟಮೊದಲ ದೇಶೀಯ ಪ್ರಕರಣಗಳು ಭಾನುವಾರ ವರದಿಯಾಗಿವೆ. ಈ ಮೂಲಕ ಲಸಿಕೆಗೂ ಬಗ್ಗದ ಒಮಿಕ್ರೋನ್‌ನ ಎರಡು ಉಪತಳಿಗಳು ಭಾರತಕ್ಕೂ ಕಾಲಿಟ್ಟಂತಾಗಿದೆ.

insacog confirms the detection of ba 4 and ba 5 variants of omicron gvd
Author
Bangalore, First Published May 23, 2022, 3:00 AM IST

ನವದೆಹಲಿ (ಮೇ.23): ವಿದೇಶಗಳಲ್ಲಿ ಭಾರೀ ಸೋಂಕಿಗೆ ಕಾರಣವಾಗಿದ್ದ, ಒಮಿಕ್ರೋನ್‌ನ ಬಿಎ.4 ಹಾಗೂ ಬಿಎ.5 ಉಪತಳಿಗಳ ಮೊಟ್ಟಮೊದಲ ದೇಶೀಯ ಪ್ರಕರಣಗಳು ಭಾನುವಾರ ವರದಿಯಾಗಿವೆ. ಈ ಮೂಲಕ ಲಸಿಕೆಗೂ ಬಗ್ಗದ ಒಮಿಕ್ರೋನ್‌ನ ಎರಡು ಉಪತಳಿಗಳು ಭಾರತಕ್ಕೂ ಕಾಲಿಟ್ಟಂತಾಗಿದೆ. 

ತಮಿಳುನಾಡಿನ 19 ವರ್ಷದ ಮಹಿಳೆಯಲ್ಲಿ ಒಮಿಕ್ರೋನ್‌ ಬಿಎ.4 ಸೋಂಕು ಪತ್ತೆಯಾಗಿದೆ. ಸೋಂಕಿತೆಯು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಕೋವಿಡ್‌ ಲಸಿಕೆಯ ಎರಡು ಡೋಸುಗಳನ್ನು ಪಡೆದಿದ್ದಾಳೆ. ಈಕೆ ಯಾವುದೇ ವಿದೇಶ ಪ್ರವಾಸದ ಇತಿಹಾಸ ಹೊಂದದ ಕಾರಣ ಇದು ಸ್ಥಳೀಯವಾಗಿ ಕಂಡುಬಂದ ಮೊದಲ ಬಿಎ.4 ಪ್ರಕರಣ ಎಂದು ಕೋವಿಡ್‌ ಜೀನೋಮ್‌ ಸೀಕ್ವೆನ್ಸಿಂಗ್‌ ಮಾಡುವ ಸಂಸ್ಥೆಗಳ ಒಕ್ಕೂಟವಾದ ‘ಇನ್ಸಾಕಾಗ್‌’ ತಿಳಿಸಿದೆ.

Omicron BA.4 ಮತ್ತು BA.5, ಭಾರತದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಬಹುದೇ ?

ಇನ್ನೊಂದೆಡೆ, ತೆಲಂಗಾಣದಲ್ಲಿ 80 ವರ್ಷದ ವ್ಯಕ್ತಿಯೊಬ್ಬನಿಗೆ ಒಮಿಕ್ರೋನ್‌ ಬಿಎ.5 ಸೋಂಕು ತಗುಲಿದ್ದು ದೃಢಪಟ್ಟಿದೆ. ಈತನು ಎರಡು ಡೋಸು ಲಸಿಕೆಯನ್ನು ಪಡೆದಿದ್ದು ಯಾವುದೇ ವಿದೇಶಿ ಪ್ರವಾಸದ ಇತಿಹಾಸ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಬ್ಬರು ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಮೊದಲು ದಕ್ಷಿಣ ಆಫ್ರಿಕಾದಿಂದ ಹೈದರಾಬಾದಿಗೆ ಬಂದಿಳಿದ ಪ್ರವಾಸಿಯಲ್ಲಿ ಬಿಎ.4 ಉಪತಳಿಯ ಸೋಂಕು ಕಂಡು ಬಂದಿತ್ತು. ಆದರೆ ಆತ ಆಫ್ರಿಕಾದಿಂದ ಬಂದಿದ್ದರಿಂದ ಮೊದಲ ದೇಶೀಯ ಪ್ರಕರಣ ಎನ್ನಿಸಿಕೊಂಡಿರಲಿಲ್ಲ. ಒಮಿಕ್ರೋನ್‌ನ ಬಿಎ.4 ಹಾಗೂ ಬಿಎ.5 ಉಪತಳಿಗಳು ಮೊಟ್ಟಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದವು. ನಂತರ ವಿವಿಧ ದೇಶಗಳಲ್ಲಿ ತೀವ್ರ ಸೋಂಕಿನ ಏರಿಕೆಗೆ ಕಾರಣವಾಗಿದ್ದವು.

ಕೊರೋನಾ ರೂಪಾಂತರಿ ಪತ್ತೆಗೆ ಕೊಳಚೆ ನೀರಿನ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಟೆಸ್ಟ್‌: ಕೊರೋನಾ ರೂಪಾಂತರಿ ಸೋಂಕು ಪತ್ತೆ ಹಚ್ಚಲು ನಗರದ 34 ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಕೊಳಚೆ ನೀರನ್ನು ಮೇ 5ರಿಂದ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಒಳಪಡಿಸಲು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.  ಕೆ.ವಿ.ತ್ರಿಲೋಕ್‌ಚಂದ್ರ ನೇತೃತ್ವದಲ್ಲಿ ಜಲಮಂಡಳಿ, ಖಾಸಗಿ ಪ್ರಯೋಗಾಲಯಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಯಿತು. 

Omicron BA.4 ಭಾರತದಲ್ಲಿ 2ನೇ ಓಮಿಕ್ರಾನ್ ಉಪತಳಿ ಪತ್ತೆ, ಮತ್ತೆ ಹೈ ಅಲರ್ಟ್!

ಕೊಳಚೆ ನೀರಿನ ಜೀನೋಮಿಕ್‌ ಪರೀಕ್ಷೆ ಬಗ್ಗೆ ಚರ್ಚಿಸಲಾಯಿತು. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ 3ನೇ ಅಲೆಯ ಬಗ್ಗೆ ಕೊಳಚೆ ನೀರಿನ ಪರೀಕ್ಷೆಯಿಂದ 15 ದಿನ ಮೊದಲೇ ಪತ್ತೆ ಮಾಡಲಾಗಿತ್ತು. ಹೀಗಾಗಿ, ಇದೇ ಮಾದರಿ ಅನುಸರಿಸಿ ನಗರದಲ್ಲಿ ಜನರು ಬಳಸಿದ ನೀರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ರಿನ ಮಾದರಿಗಳಲ್ಲಿ ಹೊಸ ರೂಪಾಂತರಿ ಪ್ರಬೇಧದ ಪತ್ತೆಗಾಗಿ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios