'ಜನ್ಮದಿನ ಆಚರಣೆ ಮಾಡಿಕೊಳ್ಳಲ್ಲ, ಜಾಹೀರಾತು ಕೊಡಬೇಡಿ'
* ನನ್ನ ಜನ್ಮದಿನ ಆಚರಣೆ ಬೇಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ
* ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಬಂಧು-ಬಳಗದವರಿಗೆ ಮನವಿ
* ಇಡಿ ಜಗತ್ತು ಕೊರೋನಾ ಸಂಕಷ್ಟ ಎದುರಿಸುತ್ತಿದೆ
* ಮಾಧ್ಯಮಗಳಲ್ಲಿ ನನಗೆ ಶುಭಾಶಯ ಕೋರಿ ಯಾರೊಬ್ಬರೂ ಜಾಹೀರಾತು ನೀಡಬಾರದು.
ಬೆಂಗಳೂರು:(ಮೇ 13) ಕೋವಿಡ್ ಪಿಡುಗು ತೀವ್ರವಾಗಿದ್ದು, ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ(ಮೆ 15) ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಬಂಧು-ಬಳಗದವರಿಗೆ ಪತ್ರಿಕಾ ಹೇಳಿಕೆಯಲ್ಲಿ ಶಿವಕುಮಾರ್ ಅವರು ಗುರುವಾರ ಮಾಡಿರುವ ಮನವಿ ಮಾಡಿಕೊಂಡಿದ್ದಾರೆ.
'ರಾಜ್ಯ ತೀವ್ರ ಸಂಕಷ್ಟ ಸಮಯ ಎದುರಿಸುತ್ತಿದೆ. ಕೊರೋನಾ ರುದ್ರತಾಂಡವ ಆಡುತ್ತಿದೆ. ಈ ಸಮಯದಲ್ಲಿ ಸಂಭ್ರಮಾಚರಣೆ ವಿಹಿತವಲ್ಲ. ಹೀಗಾಗಿ ಈ ಬಾರಿ ನಾನೂ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ನೀವೂ ಸಹ ನನ್ನ ಜನ್ಮದಿನ ಆಚರಿಸುವುದಾಗಲಿ, ಶುಭಾಶಯ ಕೋರುವುದಾಗಲಿ, ಶುಭಾಶಯ ಕೋರಲು ದೂರವಾಣಿ ಕರೆ ಮಾಡುವುದಾಗಲಿ ಬೇಡ ಎಂದು ತಿಳಿಸಿದ್ದಾರೆ.
ಸಂಸದರ ವಿರುದ್ಧ ಡಿಕೆ ಶಿವಕುಮಾರ್ ಗುಡುಗು
ನಾನು ಆ ದಿನ ಊರಲ್ಲಿ ಇರುವುದಿಲ್ಲ. ಹೀಗಾಗಿ ಯಾರೂ ಕೂಡ ಶುಭಾಶಯ ಕೋರಲು ನಿವಾಸದ ಬಳಿ ಬರುವುದು ಬೇಡ. ಮಾಧ್ಯಮಗಳಲ್ಲಿ ನನಗೆ ಶುಭಾಶಯ ಕೋರಿ ಯಾರೊಬ್ಬರೂ ಜಾಹೀರಾತು ನೀಡಬಾರದು.
ಪರಿಸ್ಥಿತಿಯ ಗಂಭೀರತೆ ಅರಿತು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯಾರು ಕೂಡ ಈ ವಿಚಾರದಲ್ಲಿ ತಪ್ಪು ಭಾವಿಸಬಾರದು. ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.