ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ‌ ಕೊರೋನಾ ಸೋಂಕಿತರ ‌ಪರದಾಟ| ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ವಿಡಿಯೋ ವೈರಲ್| ಆಸ್ಪತ್ರೆ ಕ್ಲೀನ್ ಮಾಡಿ ಸೂಕ್ತ ಚಿಕಿತ್ಸೆ ‌ನೀಡುವಂತೆ ಸೋಂಕಿತರ ಅಗ್ರಹ| 

ರಾಯಚೂರು(ಆ.23): ಸೂಕ್ತ ಚಿಕಿತ್ಸೆ ಸಿಗದೇ ಕೊರೋನಾ ‌ಸೋಂಕಿತರು ಪರಾದಾಡುತ್ತಿರುವ ಘಟನೆ ನಗರದ ಓಪೆಕ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಕೊರೊನಾ ಸೋಂಕಿತರು ಮಾಡಿದ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಕೋವಿಡ್ ಆಸ್ಪತ್ರೆಯ ತುಂಬ ಕಸದ ರಾಶಿ ಬಿದ್ದಿದೆ. ಈ ಕಸದ ರಾಶಿಯಲ್ಲೇ ಹಂದಿಗಳು ಓಡಾಡುತ್ತಿವೆ. ಹೀಗಾಗಿ ಆಸ್ಪತ್ರೆಯಲ್ಲಿರುವ ಕೊರೋನಾ ರೋಗಿಗಳು ಪಡಬಾರದ ಕಷ್ಟಗಳನ್ನ ಅನುಭವಿಸುತ್ತಿದ್ದಾರೆ. 

ದೇವದುರ್ಗ: ಆಕಸ್ಮಿಕ ಬೆಂಕಿ, ಹಣ ತರಲು ಹೋಗಿ ವ್ಯಕ್ತಿ ಸಜೀವ ದಹನ

ಹಂದಿಗಳ ಓಡಾಟ ಪಕ್ಕದಲ್ಲೇ ಕೊರೋನಾ ಸೋಂಕಿತರ ವಾರ್ಡ್‌ಗಳಿವೆ. ಹೀಗಾಗಿ ಆಸ್ಪತ್ರೆ ಕ್ಲೀನ್ ಮಾಡಿ ಸೂಕ್ತ ಚಿಕಿತ್ಸೆ ‌ನೀಡುವಂತೆ ಮಾಡಿ ಅಂತ ಕೊರೋನಾ ಸೋಂಕಿತರು ಮನವಿ ಮಾಡಿಕೊಂಡಿದ್ದಾರೆ. 

Updates: ಸುವರ್ಣನ್ಯೂಸ್ ಇಂಪ್ಯಾಕ್ಟ್: ಆಸ್ಪತ್ರೆಗೆ ಹಂದಿಗಳಿಂದ ಮುಕ್ತಿ

"