ರಾಯಚೂರು(ಆ.22): ಜಮೀನಿನಲ್ಲಿ ಇದ್ದ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೋರ್ವ ಸಜೀವವಾಗಿ ದಹನವಾದ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನ ನಾಗಪ್ಪ (36) ಎಂದು ಗುರುತಿಸಲಾಗಿದೆ. 

ಎಂದಿನಿಂತೆ ನಾಗಪ್ಪ ನಿನ್ನೆ ರಾತ್ರಿ ಕೂಡ ಗುಡಿಸಲಿನಲ್ಲಿ ಮಲಗಿದ್ದ, ಆದರೆ ತಡರಾತ್ರಿ ಗುಡಿಸಲಿಗೆ ಆಕಸ್ಮಿಕ  ಬೆಂಕಿ ಬಿದ್ದಿದೆ. 

ರಾಯಚೂರು: ದ್ವೀಪದಲ್ಲಿ ಸಿಲುಕಿದವರ ಪರದಾಟ, ಡ್ರೋನ್ ಮೂಲಕ ಔಷಧಿ, ಅಗತ್ಯ ಸಾಮಗ್ರಿಗಳ ಪೂರೈಕೆ

ಬೆಂಕಿಯ ಕೆನ್ನಾಲಿಗೆ ನೋಡಿ ಗುಡಿಸಲಿನಿಂದ ಹೊರ ಬಂದು ಮತ್ತೆ ಗುಡಿಸಲಿನಲ್ಲಿ ಇಟ್ಟಿದ್ದ 60 ಸಾವಿರ ರೂ. ಹಣವನ್ನ  ತರಲು ಹೋದಾಗ ನಾಗಪ್ಪ ಸಜೀವ ದಹನವಾಗಿದ್ದಾನೆ ಎಂದು ತಿಳಿದು ಬಂದಿದೆ.  ಘಟನಾ ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.