ಕೊರೋನಾ ಬಗ್ಗೆ ಹೊರಬಿದ್ದ ಮತ್ತೊಂದು ಅಚ್ಚರಿ ದಾಯಕ ಸಂಗತಿ
ಕೊರೋನಾ ಬಗ್ಗೆ ಮತ್ತೊಂದು ಅಚ್ಚರಿದಾಯಕ ಸಂಗತಿಯೊಂದು ಹೊರಬಿದ್ದಿದೆ. ಇದು ಜನಸಾಮಾನ್ಯನೂ ಖುಷಿ ಪಡುವ ವಿಚಾರವಾಗಿದೆ. ಏನದು...
ದಾವಣಗೆರೆ (ನ.03): ಕೊರೋನಾ ವೈರಸ್ ಅಂದುಕೊಂಡಷ್ಟುಮಾರಕವಂತೂ ಅಲ್ಲ. ನಾವಾಗಿ ಹೆದರದಿದ್ದರೆ ಕೊರೋನಾದಿಂದ ಯಾವುದೇ ಅಪಾಯವೂ ಸಂಭವಿಸದು ಎಂದು ಸಾಮಾಜಿಕ ಕಾರ್ಯಕರ್ತ ಡಾ.ಶ್ರೀಧರ ಉಡುಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು, ಕೊರೋನಾ ವೈರಸ್ ಹೊಸದಾಗಿ ಹುಟ್ಟಿದ್ದಂತೂ ಅಲ್ಲ. ನೆಗಡಿಗೆ ಕಾರಣವಾಗುವ ವೈರಸ್ ವರ್ಗಕ್ಕೆ ಸೇರಿದ್ದು ಇದಾಗಿದೆ. ಇದಕ್ಕೆ ಶಾಶ್ವತ ಲಸಿಕೆ ಕಂಡುಹಿಡಿಯುವುದು ಅಸಾಧ್ಯದ ವಿಚಾರ ಎಂದರು.
ಕೊರೊನಾ ಸೋಂಕು ಇಳಿಕೆಯಾದರೂ ICU ದಾಖಲಾತಿ ಹೆಚ್ಚಾಗುತ್ತಿರುವುದೇಕೆ? ...
ಕಷಾಯ, ಬಿಸಿ ನೀರು ಕುಡಿದರೆ ರೋಗ ವಾಸಿಯಾಗುತ್ತದೆ. 100 ರು. ನಲ್ಲಿ ವಾಸಿಯಾಗುವ ರೋಗಕ್ಕೆ ಲಕ್ಷಾಂತರ ಹಣ ವ್ಯಯಿಸುವ ಅವಶ್ಯಕತೆ ಇಲ್ಲ. ಕೊರೋನಾಪೀಡಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿದರೆ ಬೇಗನೆ ಗುಣಮುಖರಾಗುತ್ತಾರೆ. ಆಸ್ಪತ್ರೆ ವಾತಾವರಣದಲ್ಲಿ ರೋಗಿಯು ಇನ್ನಷ್ಟು ಹೆದರಲಿದ್ದು, ಇದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ ಎಂದು ತಿಳಿಸಿದರು.
ಆತ್ಮವಿಶ್ವಾಸವೊಂದಿದ್ದರೆ ಎಂತಹ ಕಾಯಿಲೆಯನ್ನಾದರೂ ಜಯಿಸಬಹುದು. ಗಾಳಿಯಿಂದ ಹರಡುವ ಕೊರೋನಾವನ್ನು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ನಿಯಂತ್ರಿಸುವುದು ಕಷ್ಟಸಾಧ್ಯ. ಆದರೆ, ಕೊರೋನಾ ನಿರ್ವಹಣೆ ದಂಧೆ ರೂಪ ಪಡೆದಿದೆ. ವೈದ್ಯಕೀಯ ಜ್ಞಾನವಿಲ್ಲದ ಅಧಿಕಾರಿಗಳು ಮಾರ್ಗಸೂಚಿ ಹೊರಡಿಸುವ ಪರಿಸ್ಥಿತಿ ಇದೆ ಎಂದು ದೂರಿದರು.
ಚೀನಾ ಹಿಡಿತದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಲಾಕ್‌ಡೌನ್, ಸೀಲ್‌ಡೌನ್‌ನಂತಹ ಹಾಸ್ಯಾಸ್ಪದ ನಿಯಂತ್ರಣ ಕ್ರಮಗಳನ್ನು ಸೂಚಿಸುತ್ತಿದೆ. ಇದಕ್ಕಾಗಿ ಮುಂದಿನ ಪೀಳಿಗೆ ನಮ್ಮನ್ನು ಗೇಲಿ ಮಾಡಿದರೂ ಅಚ್ಚರಿ ಇಲ್ಲ ಎಂದು ಡಾ.ಶ್ರೀಧರ ಉಡುಪ ಅಭಿಪ್ರಾಯಪಟ್ಟರು.