ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ದಿನದಿನವೂ ಸಾವು-ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಮಂಡ್ಯ ಜಿಲ್ಲೆಯೂ ಕೊರೋನಾ ಹಾಟ್‌ಸ್ಪಾಟ್ ಆಗಿದ್ದು ಇಲ್ಲಿನ 8 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. 

ಮಂಡ್ಯ (ಏ.02) : ಮಂಡ್ಯದಲ್ಲಿ ಕೊರೋನಾ ಹಳ್ಳಿಗಳಿಗೆ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 25ಕ್ಕಿಂತ ಹೆಚ್ಚು ಸೋಂಕಿತರಿರುವ ಗ್ರಾಮಗಳನ್ನು ತಾಲೂಕು ಆಡಳಿತ ಸೀಲ್‌ಡೌನ್‌ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಅದರಂತೆ ಮಂಡ್ಯ ತಾಲೂಕಿನ 8 ಗ್ರಾಮಗಳು ಸೀಲ್‌ಡೌನ್‌ ಆಗಿದ್ದು, ಇನ್ನೂ 2 ಗ್ರಾಮಗಳು ಸೀಲ್‌ಡೌನ್‌ ಆಗುವ ಸನಿಹದಲ್ಲಿವೆ. 

ಕೊರೋನಾ ಕರಾಳತೆ: ಆಸ್ಪತ್ರೆ ಮುಂದೆ ಕುಳಿತಲ್ಲೇ ವ್ಯಕ್ತಿ ಸಾವು ...

ತಾಲೂಕಿನ ಹನಕೆರೆ(41), ಬಸರಾಳು(31), ಹುಲಿವಾನ(38), ಕೀಲಾರ(45), ಮಂಗಲ(30), ಹೆಮ್ಮಿಗೆ(28), ತೂಬಿನಕೆರೆ(25), ಹಳುವಾಡಿ(24 ಸೋಂಕಿತರು) ಸೀಲ್‌ಡೌನ್‌ ಆಗಿರುವ ಗ್ರಾಮಗಳು. ಕೊತ್ತತ್ತಿ ಹಾಗೂ ಹೆಬ್ಬಕವಾಡಿ ಗ್ರಾಮಗಳಲ್ಲೂ ಸೋಂಕಿತರು ಹೆಚ್ಚಿದ್ದು, ಸೀಲ್‌ಡೌನ್‌ ಆಗುವ ನಿರೀಕ್ಷೆ ಇದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona