ಕೊರೋನಾ ಮಹಾಮಾರಿ ಆತಂಕ ಹೆಚ್ಚಾಗುತ್ತಿದೆ. ಸಾವು ನೋವುಗಳು ಜಾಸ್ತಿಯಾಗುತ್ತಿದೆ. ವ್ಯಕ್ತಿಯೋರ್ವರು ಕುಳಿತಲ್ಲೇ ಪ್ರಾಣ ಬಿಟ್ಟಿದ್ದು ಕೊರೋನಾ ಕರಾಳತೆಗೆ ಹಿಡಿದ ಕನ್ನಡಿಯಂತಿದೆ. 

ತುಮಕೂರು (ಮೇ.02): ಕೊರೋನಾ ಮಹಾಮಾರಿ ಅಬ್ಬರ ಜಾಸ್ತಿಯೇ ಆಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ.

ಆಕ್ಸಿಜನ್, ಸೂಕ್ತ ಔಷಧೋಪಚಾರಗಳಿಲ್ಲದೆಯೂ ಅನೇಕ ಸಾವು ನೋವುಗಳಾಗುತ್ತಿದ್ದು, ತುಮಕೂರಿನಲ್ಲಿ ಆಕ್ಸಿಜನ್‌ ಬೆಡ್‌ ಸಿಗದೆ ವ್ಯಕ್ತಿಯೊಬ್ಬ ಕುಳಿತಲ್ಲೇ ಸಾವನ್ನಪ್ಪಿದ್ದಾರೆ.

 ತುಮಕೂರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಶನಿವಾರ ಗುಬ್ಬಿ ತಾಲೂಕು ಕಡಬ ಗ್ರಾಮದ 45 ವರ್ಷದ ಮಹದೇವಯ್ಯ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.

ಸಾವಿನ ಸನ್ನಿಧಿಯಲ್ಲಿ ಬದುಕಿನ ಬಳ್ಳಿ;ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ! .

ಇವರು ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಬೆಡ್‌ ಸಿಗದ ಹಿನ್ನೆಲೆಯಲ್ಲಿ ಆಸ್ಪತ್ರೆ ಬಾಗಿಲಲ್ಲೇ ಕುಳಿತಿದ್ದರು. ಈ ವೇಳೆ ಸಾವನ್ನಪ್ಪಿದ್ದಾನೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona