ಉಡುಪಿ(ಫೆ.15): ಜಿಲ್ಲೆಯ ಮಲ್ಪೆ ಮೀನುಗಾರರ ಬಲೆಗೆ ಭಾರಿ ಗಾತ್ರದ ಅಕ್ಟೋಪಸ್‌ ಮೀನು ಸಿಕ್ಕಿದೆ. ದೆವ್ವ ಮೀನು ಅಥವಾ ಡೆವಿಲ್‌ ಫಿಶ್‌ ಎಂದು ಕರೆಯಲಾಗುವ ಬಿಗ್‌ ಬ್ಲೂ ಅಕ್ಟೋಪಸ್‌ ಜಾತಿಯ ಈ ಮೀನು ಸುಮಾರು 6 ಕೆ.ಜಿ. ತೂಕ, 5 ಅಡಿ ಉದ್ದವಿತ್ತು.

ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರರ ಬಲೆಗೆ ಭಾರಿ ಗಾತ್ರದ ಅಕ್ಟೋಪಸ್‌ ಮೀನು ಸಿಕ್ಕಿದೆ. ದೆವ್ವ ಮೀನು ಅಥವಾ ಡೆವಿಲ್‌ ಫಿಶ್‌ ಎಂದು ಕರೆಯಲಾಗುವ ಬಿಗ್‌ ಬ್ಲೂ ಅಕ್ಟೋಪಸ್‌ ಜಾತಿಯ ಈ ಮೀನು ಸುಮಾರು 6 ಕೆ.ಜಿ. ತೂಕ, 5 ಅಡಿ ಉದ್ದವಿತ್ತು.

ಮಲ್ಪೆಯಲ್ಲಿ ಬಲೆಗೆ ಬಿತ್ತು ಸ್ಪಾನರ್ ಕ್ರ್ಯಾಬ್..! 1 ಕೆಜಿ ತೂಗುತ್ತೆ ಈ ಏಡಿ

ವಿಶ್ವದಾದ್ಯಂತ ಸಾಗರದಲ್ಲಿ ಅಕ್ಟೋಪಸ್‌ಗಳಲ್ಲಿ ಸುಮಾರು 200 ಜಾತಿಗಳಿವೆ. ಭಾರತದ ಸಮುದ್ರ ತೀರದಲ್ಲಿ ಬಿಗ್‌ ಬ್ಲೂ ಸೇರಿದಂತೆ 38 ಜಾತಿಯ ಅಕ್ಟೋಪಸ್‌ಗಳು ಸಾಮಾನ್ಯವಾಗಿ ಪತ್ತೆಯಾಗುತ್ತವೆ. ಒಂದಡಿಯ ಅಕ್ಟೋಪಸ್‌ಗಳು ಬಲೆಗೆ ಬೀಳುವುದು ಅಪರೂಪವೇನಲ್ಲ. ಆದರೆ ಗುರುವಾರ ಅಪರೂಪಕ್ಕೆಂಬಂತೆ 5 ಅಡಿ ಉದ್ದದ ಮೀನು ಬಲೆಗೆ ಬಿದ್ದಿದೆ.