Asianet Suvarna News Asianet Suvarna News

ಚಿಕ್ಕಮಗಳೂರು : 3 ಸಾವಿರದತ್ತ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಏರಿಕೆ ಆಗುತ್ತಿರುವಂತೆ ಚಿಕ್ಕಮಗಳೂರಿನಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೊಸ ಐಸಿಯುವನ್ನು ಆರಂಭ ಮಾಡಲಾಗಿದೆ.

Corona Cases Hikes In Chikmagalur District
Author
Bengaluru, First Published Aug 24, 2020, 1:17 PM IST

 ಚಿಕ್ಕಮಗಳೂರು (ಆ.24):  ಕೋವಿಡ್‌ ವೈರಸ್‌ ಮಹಾಮಾರಿ ಕಾಫಿಯ ನಾಡಿನಲ್ಲಿ ರುದ್ರ ನರ್ತನ ಮಾಡುತ್ತಿದೆ. ಸತತ ಎರಡು ತಿಂಗಳ ಕಾಲ ಗ್ರೀನ್‌ ಝೋನ್‌ನಲ್ಲಿ ಇದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3 ಸಾವಿರ ಗಡಿಗೆ ಸಮೀಪಿಸಿದೆ. ಈವರೆಗೆ 56 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು ಮೇ 12ರಂದು. ಆ ದಿನದಂದು ಪತ್ತೆಯಾಗಿರುವ ಎರಡು ಪ್ರಕರಣಗಳು ಫಾಲ್ಸ್‌. ಆದರೆ, ನಂತರ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತ ಹೋಗಿದ್ದು, ಲಾಕ್‌ಡೌನ್‌ ಸಡಿಲಗೊಳಿಸಿದ ನಂತರ ಈ ಸಂಖ್ಯೆ ಇನ್ನಷ್ಟುಹೆಚ್ಚಳವಾಯಿತು. ಈವರೆಗೆ ಜಿಲ್ಲೆಯಲ್ಲಿ 2814 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಇವರಲ್ಲಿ 1743 ಮಂದಿ ಗುಣಮುಖರಾಗಿದ್ದಾರೆ. ಸದ್ಯ 964 ಮಂದಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಗಾವತಿ: ಕೊರೋನಾ ಸೋಂಕಿಗೆ ಬಿಜೆಪಿ ಮುಖಂಡ ಬಲಿ...

ಡಯಾಬಿಟಿಸ್‌:

ಶೀತ, ಜ್ವರ, ತಲೆನೋವು, ಮಳೆಗಾಲದ ಆರಂಭದಲ್ಲಿ ಮಲೆನಾಡಿನಲ್ಲಿ ಸಹಜವಾಗಿ ಬರುವಂತಹ ಚಿಕ್ಕಪುಟ್ಟಸಮಸ್ಯೆಗಳು. ನಾಲ್ಕೈದು ದಿನ ಮನೆಯಲ್ಲಿಯೇ ಇದ್ದು ಆರೋಗ್ಯ ನೋಡಿಕೊಂಡರೆ ಸರಿಹೋಗುತ್ತವೆ. ಆದರೆ, ಕೋವಿಡ್‌-19 ಮಲೆನಾಡಿನ ಜನರಲ್ಲಿ ಆತಂಕ ಮೂಡಿಸಿದೆ. ಏರಿಕೆ ಆಗುತ್ತಿರುವ ಸೋಂಕಿತರ ಸಂಖ್ಯೆ ಹಾಗೂ ಮೃತಪಡುವವರ ಸಂಖ್ಯೆ ಈಗ ಆತಂಕಕ್ಕೆ ಕಾರಣವಾಗುತ್ತಿದೆ.

ಕೊರೋನಾ ಪರೀಕ್ಷೆಗೆ ಹೆದರಬೇಡಿ: ಜನತೆಗೆ ಸರ್ಕಾರದ ಮನವಿ...

ಜಿಲ್ಲೆಯಲ್ಲಿ ಸೋಂಕಿನಿಂದ ಈವರೆಗೆ 56 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಡಯಾಬಿಟಿಸ್‌ ಇದ್ದವರು. ಅಂಥವರಿಗೆ ಕೋವಿಡ್‌ ಸೋಂಕು ಬಂದರೆ ಆರೋಗ್ಯದಲ್ಲಿ ಬೇಗ ಚೇತರಿಕೆ ಕಂಡುಬರುವುದಿಲ್ಲ. ಆಗ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು. ಈವರೆಗೆ ಮೃತಪಟ್ಟಿರುವವರಲ್ಲಿ ಹೆಚ್ಚಿನ ಮಂದಿ ಡಯಾಬಿಟಿಸ್‌ ಇರುವವರು. ಆದ್ದರಿಂದ ಡಯಾಬಿಟಿಸ್‌, ಬಿಪಿ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ತೊಂದರೆ ಇರುವವರು ಎಚ್ಚರಿಕೆಯಿಂದ ಇರಬೇಕು.

12 ಹಾಸಿಗೆಗಳ ಐಸಿಯು ವಾರ್ಡ್‌

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಒಳಪಡುವ ಹೆರಿಗೆ ಆಸ್ಪತ್ರೆಯಲ್ಲಿ ಕೋವಿಡ್‌ ನಿಗಾ ಘಟಕ ತೆರೆಯಲಾಗಿದೆ. ಇಲ್ಲಿ 15 ಹಾಸಿಗೆಗಳ ವಾರ್ಡ್‌ ತೆರೆಯಲಾಗಿದೆ. ಇಲ್ಲಿ ಎಲ್ಲ ಹಾಸಿಗೆಗಳಿಗೆ ಆಕ್ಸಿಜನ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಸರ್ಜನ್‌ ಡಾ.ಮೋಹನ್‌ಕುಮಾರ್‌ ತಿಳಿಸಿದ್ದಾರೆ.

ಆಸ್ಪತ್ರೆ ಆವರಣದಲ್ಲಿರುವ ಒಳರೋಗಿಗಳ ವಿಭಾಗದಲ್ಲಿ 12 ಹಾಸಿಗೆಗಳ ಐಸಿಯು ವಾರ್ಡ್‌ ಹೆಚ್ಚುವರಿಯಾಗಿ ತೆರೆಯಲಾಗಿದೆ. ಅಗತ್ಯಬಿದ್ದರೆ ಈ ವಾರ್ಡ್‌ ಬಳಸಿಕೊಳ್ಳಲಾಗುವುದು. ಇಲ್ಲೂ ಆಕ್ಸಿಜನ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು  ತಿಳಿಸಿದ್ದಾರೆ.
 

Follow Us:
Download App:
  • android
  • ios