Asianet Suvarna News Asianet Suvarna News

ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್‌ ಹೆಬ್ಬಾರ್‌

ಸಹಕಾರಿ ಸಂಘಗಳನ್ನು ಸಂಪೂರ್ಣ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವ ಮೂಲಕ ರೈತರ ಸರ್ವಾಂಗೀಣ ಏಳಿಗೆಗೆ ಸಹಕಾರ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಹೇಳಿದರು.

Cooperation for comprehensive development of farmers says minister shivaram hebbar gvd
Author
First Published Nov 7, 2022, 9:18 PM IST

ಜೋಯಿಡಾ (ನ.07): ಸಹಕಾರಿ ಸಂಘಗಳನ್ನು ಸಂಪೂರ್ಣ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವ ಮೂಲಕ ರೈತರ ಸರ್ವಾಂಗೀಣ ಏಳಿಗೆಗೆ ಸಹಕಾರ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಹೇಳಿದರು. ತಾಲೂಕಿನ ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಸೇವಾ ಸಹಕಾರಿ ಸಂಘದ ಶಾಖಾ ಕಟ್ಟದ ಮತ್ತು ಯರಮುಖದ ಸಭಾಭವನ ಉದ್ಘಾಟಿಸಿ ಯರಮುಖದ ಸೋಮೇಶ್ವರ ಸಭಾ ಭವನದಲ್ಲಿ ಮಾತನಾಡುತ್ತಿದ್ದರು. ಈ ಸಭಾ ಭವನ .50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿಯೇ ದೊಡ್ಡ ಸಭಾಭವನ ಇದಾಗಿದೆ. ಯಾವುದೇ ಅಭಿವೃದ್ಧಿ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಕ್ರಿಯಾಶೀಲ ಕಾರ್ಯ ಪಡೆ ಇದ್ದಾಗ ಮಾತ್ರ ಇದು ಸಾಧ್ಯ. 

ಸಹಕಾರಿ ಕ್ಷೇತ್ರ ಎಲ್ಲಿ ಉತ್ತಮ ವಾಗಿದೆಯೋ ಅಲ್ಲಿ ರೈತರು ಜೀವಂತವಾಗಿದ್ದಾರೆ. ಎಲ್ಲಿ ಸಹಕಾರಿ ಕ್ಷೇತ್ರ ಜೀವಂತವಾಗಿಲ್ಲವೋ ಅಲ್ಲಿ ರೈತರು ಕೂಡ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಅನುದಾನ ರೈತರಿಗೆ ಸಿಗಬೇಕಾದ ಸಹಕಾರಿ ಕ್ಷೇತ್ರ ಗಟ್ಟಿಯಾಗಬೇಕು ಎಂದು ಹೇಳಿದರು. ರಾಜ್ಯದಲ್ಲಿ 9 ಜಿಲ್ಲೆಗಳಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಉತ್ತಮವಾಗಿದೆ. ಉಳಿದೆಡೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳು ನಿಷ್ಕಿ್ರಯವಾಗಿವೆ. ಅಲ್ಲಿ ರೈತರಿಗೆ ಸರ್ಕಾರದ ಸಾಲ ಮನ್ನಾ, ಬಡ್ಡಿ ಮನ್ನಾದಂತಹ ಯಾವ ಯೋಜನೆಗಳೂ ಸಿಗುತ್ತಿಲ್ಲ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ 103 ವರ್ಷ ಪೂರೈಸಿದೆ. ಇದುವರೆಗೂ ಹಾನಿ ಅನುಭವಿಸಲಿಲ್ಲ. ಜಿಲ್ಲೆಯ ಜನರ .3000 ಕೋಟಿ ಠೇವಣಿ ಇದ್ದು ಮಾದರಿ ಬ್ಯಾಂಕ್‌ ಆಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರವಾರ ನಗರಸಭೆ ಅಂಗಡಿಗಳ ಹರಾಜಿನಲ್ಲಿ ಅವ್ಯವಹಾರ: ಆರೋಪ

ದೇಶದಲ್ಲಿ ಸಹಕಾರಿ ಚಳವಳಿ ಜೀವಂತವಾಗಿದ್ದರೆ ಮಾತ್ರ ರೈತರು ಜೀವಂತವಾಗಿರುತ್ತಾರೆ. ರೈತರು, ಕಾರ್ಮಿಕರು, ಸೈನಿಕರು, ದೇಶದ ಬೆನ್ನೆಲುಬು ಎಂದು ಹಲವಾರು ಉದಾಹರಣೆ ನೀಡಿದರು. ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ದೇಶದ ಅಭಿವೃದ್ಧಿ ಬಗ್ಗೆ ನಿಮ್ಮೆಲ್ಲರ ನಿಷ್ಠೆ ಮೆಚ್ಚುವಂತಹದ್ದು. ಸಹಕಾರಿ ರಂಗ ಶ್ರಮಿಕರ ಮೇಲೆ ನಿಂತಿದೆ. ಆ ದಿಶೆಯಲ್ಲಿ ನಮ್ಮ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್‌ ಕೂಡ ಉತ್ತಮ ಸಾಧನೆ ಮಾಡುತ್ತಿದೆ. ತಾಲೂಕು ಅರಣ್ಯಗಳಿಂದ ಕೂಡಿದ ಕಾರಣ ರೈತರ ಜೀವನ ಕಷ್ಟಕರವಾಗಿದೆ. ಅರಣ್ಯ ಇಲಾಖೆಯವರು ತಾವೇ ಇಲಾಖೆಯ ಮಾಲೀಕರಂತೆ ವರ್ತಿಸುತ್ತಿದ್ದಾರೆ. 

Uttara Kannada: ಹೋವರ್‌ಕ್ರಾಫ್ಟ್ ನಿಲುಗಡೆಗೆ ಮುಂದುವರಿದ ವಿರೋಧ

ಅವರು ಬೇಕಾದಂತೆ ಅರಣ್ಯದಲ್ಲಿ ವರ್ತಿಸಿದರೂ ಕಾನೂನು ಕ್ರಮ ಇಲ್ಲ. ಆದರೆ ಬಡ ರೈತರಿಗೆ ಕಿರುಕುಳ ನೀಡುತ್ತಿರುವುದು ಸರಿ ಅಲ್ಲ. ರೈತರು ಉಳಿಸಿದ ಕಾಡಿನಲ್ಲಿ ಅವರಿಗೆ ತೊಂದರೆ ಆದರೆ ಮುಂದೆ ಕಷ್ಟಕರವಾಗಬಹುದು ಎಂದರು. ಪ್ರಸನ್ನ ಭಟ್ಟ, ಅರುಣ ದೇಸಾಯಿ ಮಾತನಾಡಿದರು. ಎನ್‌.ವಿ. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಸ್ವರ್ಣವಲ್ಲಿ ಮಠದ ಗುಂದ ಸೀಮಾ ಅಧ್ಯಕ್ಷ ದತ್ತಾತ್ರೇಯ ಹೆಗಡೆ ನಂದಿಗದ್ದ ಗ್ರಾಪಂ ಅಧ್ಯಕ್ಷೆ ಸುಮನಾ ಹರಿಜನ ಉಪಸ್ಥಿತರಿದ್ದರು. ಆರ್‌.ಎನ್‌. ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬೆಂಗಳೂರಿನ ಗಣಪತಿ ಭಟ್ಟ ನಿರ್ವಹಿಸಿದರು.

Follow Us:
Download App:
  • android
  • ios