Asianet Suvarna News Asianet Suvarna News

ಕಲಬುರಗಿಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪೀಠ

*  ಬೆಂಗಳೂರು ನಂತರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗುತ್ತಿರುವ ರಾಜ್ಯದ ಮೊದಲ ಸಂಚಾರಿ ಪೀಠ
*  ಕಲ್ಯಾಣ ಕರ್ನಾಟಕ 7 ಜಿಲ್ಲೆಗಳ ಗ್ರಾಹಕರಿಗೆ ಬಂಪರ್‌ ಕೊಡುಗೆ ನೀಡಿದ ರಾಜ್ಯ ಸರಕಾರ
*  ಜೂನ್‌ 7 ರಂದು ಸರ್ಕಾರದಿಂದ ಆದೇಶ, ನ್ಯಾಯಾಂಗ, ಮಹಿಳಾ ಸದಸ್ಯ ಸೇರಿ 22 ಸಿಬ್ಬಂದಿ
 

Consumer Claims Compensation Commission Bench Will be Start in Kalaburagi grg
Author
Bengaluru, First Published Jun 16, 2022, 1:00 AM IST

ಕಲಬುರಗಿ(ಜೂ.15):  ಗ್ರಾಹಕರಿಗೆ ತ್ವರಿತಗತಿಯಲ್ಲಿ ನ್ಯಾಯವನ್ನು ದೊರಕಿಸಲು ಅನೂಕೂಲವಾಗುವಂತೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಬೆಂಗಳೂರು ನಂತರ ಕಲಬುರಗಿ ಕೇಂದ್ರವಾಗಿರುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠವನ್ನು ಸ್ಥಾಪಿಸಿದೆ.

ಇದೇ ಜೂ.7ರಂದು ಈ ಕುರಿತಂತೆ ಅಧಿಸೂಚನೆ ಹೊರಬಿದ್ದಿದ್ದು ಸದರಿ ಪೀಠಕ್ಕೆ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿ ಜೋಡಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪಕ್ಷಕಾರರಿಗೆ, ಸಾರ್ವಜನಿಕರಿಗೆ ಹಾಗೂ ವಕೀಲರಿಗೆ ಬೆಂಗಳೂರಿಗೆ ಬಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿನ ಪ್ರಕರಣಗಳನ್ನು ನಡೆಸೋದು ತುಂಬಾ ಅನಾನುಕೂಲವಾಗುತ್ತಿದೆ, ಸದರಿ ಪೀಠ ಕಲಬುರಗಿಗೆ ಕೊಡುವಂತೆ ಕೋರಿ ಜಿಲ್ಲಾ ವಕೀಲರ ಸಂಘಟನೆ ಕಳೆದ ಫೆಬ್ರುವರಿಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರದ ರಾಷ್ಟ್ರೀಯ ಆಯೋಗ, ರಾಜ್ಯ ಆಯೋಗ, ಮುಖ್ಯಮಂತ್ರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿ ಗಮನ ಸೆಳೆದಿತ್ತು.

Kalaburagi; ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜೂ.15ರಿಂದ ಅಹೋರಾತ್ರಿ ಸತ್ಯಾಗ್ರಹ

ವಕೀಲರ ಸಂಘದ ಮನವಿಯ ಕೇವಲ 4 ತಿಂಗಳಲ್ಲಿ ವ್ಯಾಜ್ಯ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಕಲಬುರಗಿಗೆ ಒಲಿದು ಬಂದಿರೋದು ಈ ಭಾಗದ ಕಕ್ಷೀದಾರರಿಗೆ, ವಕೀಲರಿಗೆ ಹಲವು ಹತ್ತು ಅನುಕೂಲಗಳನ್ನು ಅವರ ಮನೆ ಬಾಗಿಲಿಗೇ ತಂದು ಕೊಡಲಿದೆ.

ಕಲ್ಯಾಣ ಕರ್ನಾಟಕ ಭಾಗದ ಮೇಲ್ಮನವಿಗಳೇ ಅಧಿಕ:

ರಾಜ್ಯ ಆಯೋಗದಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ, ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶದಡಿ ಬರುವ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸಂಬಂಧಿತ ಪ್ರಕರಣೇ ಹೆಚ್ಚು. ಈ ಭಾಗದ ಜನರ ಹಿತದೃಷ್ಟಿಯಿಂದ ಇಲ್ಲೇ ಕಾಯಂ ಸಂಚಾರಿ ಪೀಠ ಸ್ಥಾಪನೆಗೆ ಇದಕ್ಕಿಂತ ಅನ್ಯ ಕಾರಣ ಬೇಕೆ? ಎಂದು ಸರ್ಕಾರ ಈ ಭಾಗದಲ್ಲಿ ಪೀಠ ಸ್ಥಾಪಿಸಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಕಲಂ 42 ರ ಅಡಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಸ್ಥಾಪನೆಯಾಗುತ್ತಿದೆ.

ಪಿಎಸ್ಐ ನೇಮಕಾತಿ ಅಕ್ರಮ ಕೇಸ್‌: ಬೇಲ್‌ ಮತ್ತೆ ರಿಜೆಕ್ಟ್, ದಿವ್ಯಾ ಸೇರಿ 8 ಮಂದಿಗೆ ಜೈಲೇ ಗತಿ..!

ಕಾಯಂ ಸಂಚಾರಿ ಪೀಠ ಸ್ಥಾಪನೆಯಿಂದ ಇವೆಲ್ಲ ಅನುಕೂಲ:

1) ಕಲಬುರಗಿಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಕಾಯಂ ಸಂಚಾರಿ ಪೀಠ ಸ್ಥಾಪನೆಯಿಂದಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ
2) ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆಗಳ ಫಿರ್ಯಾದುದಾರರಿಗೆ ಹೆಚ್ಚು ಅನುಕೂಲ
3) ಕಲ್ಯಾಣದ ಪ್ರಕರಣಗಲು ಇಲ್ಲೇ ದಾಖಲಾಗೋದರಿಂದ ರಾಜ್ಯ ಆಯೋಗದಲ್ಲಿಯೂ ದಾಖಲಾಗುವ ಪ್ರಕರಣಗಳ ಸಂಖ್ಯೆ ತಗ್ಗಲಿದೆ
4) ರಾಜ್ಯ ಆಯೋಗದ ಮುಂದೆ ಬಾಕಿ ಇರುವ ಪ್ರಕರಣಗಳನ್ನು ಕಾಲಕಾಲಕ್ಕೆ ಕಾಯ್ದೆಯನುಸಾರ ತ್ವರಿತಗತಿಯಲ್ಲಿ ಕಾಲಾವಧಿಯೊಳಗೆ ಇತ್ಯರ್ಥ
5) ಗ್ರಾಹಕ ವಾಜ್ಯಗಳ ಮೊತ್ತ 5 ಲಕ್ಷಕ್ಕೂ ಹೆಚ್ಚಿರುವ ಪ್ರಕರಣಗಳಲ್ಲಿ ಇಲ್ಲಿ ದಾವೆ ಹೂಡಲು ಅನುಕೂಲ
6) ಪೀಠ ಇಲ್ಲೇ ಬಂದಿರುವ ಕಾರಣ ಪ್ರಕರಣಗಳ ದಾಖಲಾತಿಯಲ್ಲಿ ಸಹಜ ಹೆಚ್ಚಳ ಸಂಭವ

ಹುದ್ದೆಗಳ ವಿವರ

1) ನ್ಯಾಯಾಂಗ ಸದಸ್ಯರು- 01
2) ಮಹಿಳಾ ಸದಸ್ಯರು- 01
3) ಸಹಾಯಕ ರಿಜಿಸ್ಟ್ರಾರ್‌ ಹಾಗೂ ಸಹಾಯಕ ಆಡಳಿತಾಧಿಕಾರಿ- 01
4) ಶಿರಸ್ತೇದಾರರು- 01
5) ಶೀಘ್ರಲಿಪಿಗಾರರು- 04
6) ಪ್ರಥಮ ದರ್ಜೆ ಸಹಾಯಕರು- 03
7) ದ್ವಿತೀ ದರ್ಜೆ ಸಹಾಯಕರು- 03
8) ದತ್ತಾಂಶ ನಮೂದು ಸಹಾಯಕರು- 02
9) ಗ್ರೂಪ್‌ ಡಿ- 06
ಒಟ್ಟು ಹುದ್ದೆಗಳು- 22

ಆಗಸ್ಟ್‌ ಒಳಗಾಗಿ ಕಾರ್ಯಾರಂಭಿಸಲಿ- ವಕೀಲರ ಸಂಘ ಆಗ್ರಹ

ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮೇಲ್ಮನವಿ ಸಲ್ಲಿಸಲು ಅನುಕೂಲ ಆಗುವಂತೆ ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲ 7 ಜಿಲ್ಲೆಗಳನ್ನು ಒಳಗೊಂಡ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಕಲಬುರಗಿ ಜಿಲ್ಲೆಗೆ ಮಂಜೂರಾಗಿರೋದು ಸಂತಸದ ಸಂಗತಿ. ಇದಕ್ಕಾಗಿ ಕಾರಣೀಭೂತರಾದ ಎಲ್ಲರಿಗೂ ಅಭಿನಂದಿಸುವೆ ಎಂದಿರುವ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜಕುಮಾರ್‌ ಕಡಗಂಚಿ ಈಗಿರುವ ರಾಜಾಪುರದಲ್ಲಿನ ಜಿಲ್ಲಾ ಗ್ರಾಹಕರ ವೇದಿಕೆಯನ್ನು ಡಿಸಿ ಕಚೇರಿಯ ಲೇಬರ್‌ ಕೋರ್ಚ್‌ಗೆ ಸ್ಥಳಾಂತರ ಮಾಡಿ, ರಾಜಾಪುರದ ಕಟ್ಟಡದಲ್ಲೇ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಆರಂಭವಾಗಲಿ. ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಪಿಎಸ್‌ಐ ಪರೀಕ್ಷೆ ಅಕ್ರಮ: ಮತ್ತಿಬ್ಬರು ಅರೆಸ್ಟ್‌, ಬಂಧಿತರ ಸಂಖ್ಯೆ 39ಕ್ಕೇರಿಕೆ

ಬೆಂಗಳೂರು ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಗೆ ಪ್ರಪ್ರಥಮವಾಗಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಂಜೂರಾಗಿದೆ. ರೂ.50 ಲಕ್ಷಕ್ಕೂ ಅಧಿಕ ಪರಿಹಾರ ಬಯಸುವ ಗ್ರಾಹಕರು ಈ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಆಯಾ ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗ್ರಾಹಕರ ಹಿತರಕ್ಷಣಾ ವೇದಿಕೆಯಲ್ಲಿ ಸೂಕ್ತ ಪರಿಹಾರ ದೊರಕದ ಗ್ರಾಹಕರು ಈ ಆಯೋಗದ ಎದುರು ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ, ಇದೇ ಅವಧಿಗೆ ಅನ್ವಯ ಆಗುವಂತೆ ಬರುವ ಆಗಸ್ಟ್‌ 15ರೊಳಗೆ ಆಯೋಗದ ಪೀಠ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡುವಂತೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಜಕುಮಾರ್‌ ಕಡಗಂಚಿ ಒತ್ತಾಯಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಪತ್ರು ಬಿ, ಏಕೆ ಶಹಾ, ಪ್ರ. ಕಾರ್ಯದರ್ಶಿ ಪಿಎನ್‌ ಕಪನೂರ್‌, ಜಂಟಿ ಕಾರ್ಯದರ್ಶಿ ದೇವನಾಥ ಮಾಳಗಿ, ಖಜಾಂಚಿ ವಿಶ್ವರಾಧ್ಯ ಇಜೇರಿ ಹಾಗೂ ಸಂಘದ ಪದಾಧಿಕಾರಗಿಳು ಸುದ್ದಿಗೋಷ್ಠಿಯಲ್ಲಿದ್ದರು.
 

Follow Us:
Download App:
  • android
  • ios