ಸರ್ಕಾರಿ ನಿಯಮ ಗಾಳಿಗೆ ತೂರಿ ಬಡಾವಣೆ ನಿರ್ಮಾಣ: ಗೌರ್ಮೆಂಟ್ ಅಧಿಕಾರಿಗಳೇ ಸಾಥ್..?
ಕರ್ನಾಟಕ ರಾಜ್ಯ ಸಾರಿಗೆ ಗೃಹ ನಿರ್ಮಾಣ ಸಹಕಾರ ಸಂಘದಿಂದ ಆಕ್ರಮ ಲೇಔಟ್ ನಿರ್ಮಾಣ
ವರದಿ- ಜಗದೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ
ರಾಮನಗರ(ಅ.08): ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಬಿಡದಿ, ಶರವೇಗವಾಗಿ ಬೆಳೆಯುತ್ತಿರೋ ಪಟ್ಟಣ. ಇಲ್ಲಿ ಇಂಚಿಂಚೂ ಭೂಮಿಗೂ ಬಂಗಾರದ ಬೆಲೆ ಇದೆ. ಹೀಗಾಗಿ ಸರ್ಕಾರಿ ನಿಮಯಗಳನ್ನ ಗಾಳಿಗೆ ತೂರಿ ಲೇಔಟ್‌ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ನಾಯಿಕೊಡೆಯಂತೆ ಬಡಾವಣೆಗಳು ತಲೆ ಎತ್ತುತ್ತಿವೆ. ಇದಕ್ಕೆ ಕೆಲ ಸರ್ಕಾರಿ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ. ಈ ಕುರಿತು ಒಂದು ವರದಿ.
ಹೌದು, ಕರ್ನಾಟಕ ರಾಜ್ಯ ಸಾರಿಗೆ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದವತಿಯಿಂದ ನಿರ್ಮಾಣ ಮಾಡಿರೋ ಲೇಔಟ್ ನ ಮೇಲೆ ಗಂಭೀರ ಆರೋಪಿಗಳು ಕೇಳಿ ಬಂದಿದ್ದು, ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಬಡಾವಣೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಬಂದಿದೆ. ಅಂದಹಾಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರೋ ಬಿಡದಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರ.ಇಲ್ಲಿ ಇಂಚಿಂಚೂ ಭೂಮಿಗೂ ಬಂಗಾರದ ಬೆಲೆ ಇದೆ. ಅಲ್ಲದೆ ರಿಯಲ್ ಎಸ್ಟೇಟ್ ಮಾಫಿಯಾ ಕೂಡ ಜೋರಾಗಿದೆ.
ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ ಡಿಕೆಶಿ
ಹೀಗಾಗಿ ಹೊಸ ಹೊಸ ಲೇಔಟ್ ಗಳು ಕೂಡ ತಲೆ ಎತ್ತುತ್ತಿವೆ. ಅದೇ ರೀತಿ ಕರ್ನಾಟಕ ರಾಜ್ಯ ಸಾರಿಗೆ ಗೃಹ ನಿರ್ಮಾಣ ಸಹಕಾರ ಸಂಘದಿಂದ ರಾಮನಗರ ತಾಲೂಕಿನ ಬಿಡದಿ ಸಮೀಪದ ಕೆಂಚನಗುಪ್ಪೆ ಗ್ರಾಮದ ಸರ್ವೆ ನಂಬರ್ 189, 199 ರಲ್ಲಿ ಐದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರೋ ಲೇಔಟ್ ಗೆ ಯಾವುದೇ ಅನುಮತಿ ಪಡೆಯದೇ, ಕನ್ವರ್ಷನ್ ಮಾಡದೇ, ಪ್ಲಾನ್ ಅಪ್ರೂವಲ್ ಇಲ್ಲದೆ ಲೇಔಟ್ ನಿರ್ಮಾಣ ಮಾಡಿರೋ ಆರೋಪ ಕೇಳಿಬಂದಿದೆ.
ಅಂದಹಾಗೆ ಯಾವುದೇ ಒಂದು ಬಡಾವಣೆ ನಿರ್ಮಾಣ ಮಾಡಬೇಕಾದರೆ ಸರ್ಕಾರದ ನಿಯಮಗಳನ್ನ ಪಾಲಿಸಬೇಕು. ಈ ಪ್ರಕಾರ ಲೇಔಟ್ ನಿರ್ಮಾಣ ಮಾಡಿದ್ರೆ, ಹೆಚ್ಚು ಸೈಟ್ ಗಳನ್ನ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೆಲವೊಂದು ಅನುಮತಿ ಪಡೆಯದೇ ಬಿಡದಿ ಪುರಸಭೆ ಕೆಲ ಅಧಿಕಾರಿಗಳ ಜೊತೆ ಶಾಮೀಲಾಗಿ, ಲೇಔಟ್ ನಿರ್ಮಾಣ ಮಾಡಿ, ಈಗಾಗಲೇ ಐದು ಎಕರೆ ಪ್ರದೇಶದಲ್ಲಿ 57 ಜನರಿಗೆ ಸೈಟ್ ಗಳನ್ನ ಹಂಚಿಕೆ ಕೂಡ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಂಪತ್ ಎಂಬುವವರು ಮಾಹಿತಿ ಪಡೆದು ಲೋಕಯುಕ್ತಕ್ಕೂ ಕೂಡ ದೂರು ನೀಡಿದ್ದಾರೆ.
ಒಟ್ಟಾರೆ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿಗೆ ಲೇಔಟ್ ನಿರ್ಮಾಣ ಮಾಡಿ, ಸಾರಿಗೆ ನೌಕಕರಿಗೆ ಹಂಚಿಕೆ ಕೂಡ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿದ್ರೆ ತಪ್ಪಿತಸ್ಥರು ಸಿಕ್ಕಿ ಬೀಳಲಿದ್ದಾರೆ.