.‘BJPಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಲು ಚಿಂತನೆ’
ಸ್ತ್ರೀಯರ ಅಭ್ಯುದಯಕ್ಕೆ ಮಹತ್ವ ನೀಡುತ್ತಿರುವ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಅಭಿಪ್ರಾಯಪಟ್ಟರು.
ತುಮಕೂರು : ಸ್ತ್ರೀಯರ ಅಭ್ಯುದಯಕ್ಕೆ ಮಹತ್ವ ನೀಡುತ್ತಿರುವ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಅಭಿಪ್ರಾಯಪಟ್ಟರು.
ತುಮಕೂರಿನಲ್ಲಿ ಆಯೋಜಿಸಿದ್ದ ಬಿಜೆಪಿ (BJP ) ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ ಹಲವು ವರ್ಷಗಳಿಂದ ದೇಶವನ್ನು ಆಳಿದ ಕಾಂಗ್ರೆಸ್ ಅಭಿವೃದ್ಧಿಗೆ ಗಮನ ನೀಡಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ದೇಶವು ಅಭಿವೃದ್ಧಿಯಡೆಗೆ ಸಾಗುತ್ತಿದೆ. ಮಹಿಳಾ ಮೋರ್ಚಾ ಸಂಘಟನೆಯಲ್ಲಿ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದ್ದು, ಮಹಿಳಾ ಮೋರ್ಚಾದ ಸಂಘಟನಾ ಶಕ್ತಿ, ಸೇವೆಯನ್ನು ಪಕ್ಷ ಗುರುತಿಸಿ ಪಕ್ಷದ ಮುಂಚೂಣಿ ಘಟಕ, ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಅವಕಾಶಗಳನ್ನು ಕಲ್ಪಿಸಿದೆ ಎಂದರು.
ಮಹಿಳಾ ಮೋರ್ಚಾದ ಪದಾಧಿಕಾರಿಗಳಾಗಿದ್ದ 5 ಮಂದಿ ರಾಜ್ಯಸಭಾ ಸದಸ್ಯರಾಗಿರುವುದು ವಿಶೇಷ ಎಂದು ಹೇಳಿ ಕಲೆ ಸಂಸ್ಕೃತಿಗೆ ಹೆಸರಾದ ಕರ್ನಾಟಕ ಅದರಲ್ಲೂ ಸಿದ್ಧಗಂಗೆಯ ಪವಿತ್ರ ತಾಣವಿರುವ ತುಮಕೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಯಶಸ್ವಿಯಾಗಿ ಆಯೋಜಿಸಿದ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ನಾಯಕರ ಕಾರ್ಯವನ್ನು ಶ್ಲಾಘಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಶ್ರೀರಾಮನಿಗೆ ರಾಮಸೇತು ನಿರ್ಮಾಣಕ್ಕೆ ವಾನರ ಸೇನೆ ನೆರವಾದಂತೆ ರಾಷ್ಟ್ರದ ನವ ನಿರ್ಮಾಣ, ಪ್ರಗತಿ ಕಾರ್ಯದಲ್ಲಿ ತೊಡಗಿರುವ ಪ್ರಧಾನಿ ಮೋದಿಯವರಿಗೆ ನಾರಿಶಕ್ತಿ ಬೆಂಬಲವಾಗಿ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ದೇಶದ ನಾರಿಯರನ್ನು ಪ್ರೇರಿಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೇಂದ್ರದ ಮಾದರಿಯಲ್ಲೇ ನವಕರ್ನಾಟಕ ನಿರ್ಮಾಣಕ್ಕೆ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವೂ ಒತ್ತುಕೊಟ್ಟು, ಮಹಿಳೆ ಮತ್ತು ಮಕ್ಕಳ ಸಬಲೀಕರಣ, ಅಂಗನವಾಡಿ ಬಲವರ್ಧನೆ, ಆಯುಷ್ಮಾನ್ ಭಾರತ್ ಹೀಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ಹೊಸ ಕನಸು, ಗುರಿಯೊಂದಿಗೆ ಹೆಜ್ಜೆ ಇಡೋಣ ಎಂದರು.
ನಾವೆಲ್ಲಾ ಸ್ವಾಮಿ ವಿವೇಕಾನಂದ ಅವರನ್ನು ನೋಡಿಲ್ಲ. ಸ್ವಾಮಿ ವಿವೇಕಾನಂದ ಅವರ ಪೂರ್ವಾಶ್ರಮದ ಹೆಸರು ನರೇಂದ್ರ. ಅದೇ ವಿವೇಕಾನಂದರು ಮತ್ತೊಂದು ಜನ್ಮ ತಾಳಿ ಮೋದಿಯವರ ರೂಪದಲ್ಲಿ ಬಂದಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯೆ ಇಂದು ಗೋಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಸಂಸದ ಜಿ.ಎಸ್.ಬಸವರಾಜ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧ್ಯಕ್ಷ ಹೆಬ್ಬಾಕರವಿ ಸೇರಿದಂತೆ ಮಹಿಳಾ ಮೋರ್ಚಾದ ಹಲವು ಮುಖಂಡರು ಹಾಜರಿದ್ದರು.
ರಾಷ್ಟ್ರದ 31 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮೋರ್ಚಾ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ತುಮಕೂರಿನ ಟೌನ್‌ಹಾಲ್ ಸರ್ಕಲ್‌ನಿಂದ ಸಿದ್ಧಗಂಗಾ ಮಠದವರೆಗೆ ನೂರಾರು ಮಹಿಳೆಯರು ಬೈಕ್ ರ್ಯಾಲಿ ನಡೆಸಿದರು. ಅಲ್ಲಿಂದ ತುಮಕೂರಿನ ರಿಂಗ್ ರಸ್ತೆಯ ಖಾಸಗಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿದರು.
ಆಪರೇಷನ್ ಹಸ್ತದ ಸುಳಿವು
ಹಾವೇರಿ(ಜ.20): ಮುಖ್ಯಮಂತ್ರಿಗಳೇ ನಿಮ್ಮ ಜಿಲ್ಲೆಯ ಶಾಸಕರೇ ಕಾಂಗ್ರೆಸ್ ಸೇರೋಕೆ ಸಿದ್ದರಾಗಿದ್ದಾರೆ. ಜಾಗ ಇಲ್ಲ ಸ್ವಲ್ಪ ತಡೆಯಿರಿ ಎಂದು ನಾನೇ ಹೇಳಿದ್ದೇನೆ ಎಂದು ನಿನ್ನೆ ಡಿ.ಕೆ ಶಿವಕುಮಾರ್ ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಹಾವೇರಿ ನಗರದಲ್ಲಿ ನಿನ್ನೆ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಷಣ ಮಾಡ್ತಾ ಮಾತನಾಡಿದ ಡಿ.ಕೆ ಶಿವಕುಮಾರ್ , ಮಾಜಿ ಶಾಸಕ ಯು.ಬಿ ಬಣಕಾರ್ ಏನು ದಡ್ಡರಾ? ಅವರು ಬಿ.ಎಸ್ ಯಡಿಯೂರಪ್ಪ ಬಲಗೈ ಬಂಟರಾಗಿದ್ರು. ಇದೇ ಬಸವರಾಜ ಬೊಮ್ಮಾಯಿ ಬಂಟರಾಗಿದ್ದವರು. ಈಗ ಕಾಂಗ್ರೆಸ್ ಸೇರಿ ನಮ್ಮ ಜೊತೆ ಇದ್ದಾರೆ. ನಿಮ್ಮ ಜಿಲ್ಲೆಯ ಶಾಸಕರೇ ಕಾಂಗ್ರೆಸ್ ಸೇರೋಕೆ ರೆಡಿಯಾಗಿದ್ದಾರೆ ನೋಡ್ತಾ ಇರಿ ಅಂತ ಹೇಳಿದ್ದು ಹಲವು ಆಯಾಮಗಳಲ್ಲಿ ಚರ್ಚೆಯಾಗ್ತಿದೆ. ಬಿಜೆಪಿ ಪಾಳಯದಲ್ಲೂ ಸಾಕಷ್ಟು ತಳಮಳ ಸೃಷ್ಟಿಸಿದೆ. ಹಾಗಾದರೆ ಸಿಎಂ ತವರು ಜಿಲ್ಲೆಯಲ್ಲೇ ಆಪರೇಶನ್ ಹಸ್ತ ಶುರುವಾಗಿದೆಯಾ? ಹಿರೇಕೇರೂರು ಮಾಜಿ ಶಾಸಕ ಬಣಕಾರ್ ಬಳಿಕ ಮತ್ತೆ ಕಾಂಗ್ರೆಸ್ ಸೇರೋ ಬಿಜೆಪಿ ಮುಖಂಡರು ಯಾರು? ಅದ್ರಲ್ಲೂ ಶಾಸಕರು ಯಾರು? ಎಂಬ ಚರ್ಚೆ ಜೋರಾಗೇ ನಡೆದಿದೆ.
ಹಾವೇರಿ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. 6 ಕ್ಷೇತ್ರಗಳಲ್ಲಿ ಒಂದಾದ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಇದ್ದರೆ ಉಳಿದ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಐವರು ಬಿಜೆಪಿ ಶಾಸಕರಲ್ಲಿ ಕಾಂಗ್ರೆಸ್ ಸಂಪರ್ಕದಲ್ಲಿ ಇರೋ ಶಾಸಕರ್ಯಾರು ಎಂಬ ಚರ್ಚೆ ನಡೆದಿದೆ.
ಶಿಗ್ಗಾವಿಯಲ್ಲಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಶಾಸಕರು. ಸಿಎಂ ಅಂತೂ ಕೈ ಪಡೆ ಸೇರೋ ಸನ್ನಿವೇಶಗಳೇನೂ ಇಲ್ಲ. ಇನ್ನು ಹಾನಗಲ್ ನಲ್ಲಿ ಶಾಸಕ ಶ್ರೀನಿವಾಸ್ ಮಾನೆ ಕಾಂಗ್ರೆಸ್ ನವರೇ ಇದ್ದಾರೆ. ಹಿರೇಕೇರೂರಿನಲ್ಲಿ ಬಿಜೆಪಿ ತೊರೆದು ಮಾಜಿ ಶಾಸಕ ಬಣಕಾರ್ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಉಳಿದಿರೋದು ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ವಿಧಾನಸಭಾ ಕ್ಷೇತ್ರಗಳು ಮಾತ್ರ. ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ನಿಂದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಕಾಂಗ್ರೆಸ್ ಪ್ರಬಲ ಟಿಕೇಟ್ ಆಕಾಂಕ್ಷಿ.