ಬಿಜೆಪಿಗನ ಮೇಲೆ ಕಾಂಗ್ರೆಸಿಗರ ಹಲ್ಲೆ : ಗಾಯ

  • ಉಪಚುನಾವಣೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕಾರ್ಯಕರ್ತ ತನ್ನ ಸಹಚರನೊಂದಿಗೆ ಸೇರಿ ಬಿಜೆಪಿ ಯುವ ಕಾರ್ಯಕರ್ತರನ ಮೇಲೆ ಹಲ್ಲೆ
  • ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಪಿ.ಎ.ಗ್ರಾಮದ ಪೆಟ್ರೋಲ್‌ ಪಂಪ್‌ ಬಳಿ 
Congress workers attack On Bjp leader in sindagi snr

ಸಿಂದಗಿ (ಅ.13): ಉಪಚುನಾವಣೆ (Karnataka By election) ಸಂಬಂಧಿಸಿದಂತೆ ಕಾಂಗ್ರೆಸ್‌ (Congress) ಕಾರ್ಯಕರ್ತ ತನ್ನ ಸಹಚರನೊಂದಿಗೆ ಸೇರಿ ಬಿಜೆಪಿ (BJP) ಯುವ ಕಾರ್ಯಕರ್ತರನ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರ (vijayapura) ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಪಿ.ಎ.ಗ್ರಾಮದ ಪೆಟ್ರೋಲ್‌ ಪಂಪ್‌ (Petrol pump) ಬಳಿ ಮಂಗಳವಾರ ನಡೆದಿದೆ. 

ಪ್ರಮೋದ ಬಾಗೇವಾಡಿ (Pramoda bagewadi) ಅವರ ಮೇಲೆ ಬಬಲೇಶ್ವರ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. 

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸಲೀಂ ಅಹ್ಮದ್‌

ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ (Ashok managuli) ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ (social Media) ಪೋಸ್ಟ್‌ ಮಾಡಬಾರದು ಎಂದು ಹೇಳಿ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗಾಯಗೊಂಡ ಬಿಜೆಪಿ (BJP) ಕಾರ್ಯಕರ್ತ ದೂರಿದ್ದಾನೆ.

ಜೋರಾದ ಚುನಾವಣಾ ಕಾವು - ನಾವೆ ಗೆಲ್ಲುತ್ತೇವೆ ಎನ್ನುವ ಬಿಜೆಪಿಗರು

 

ಸದ್ಯ ರಾಜ್ಯದ ಎರಡು ಕ್ಷೇತ್ರಗಳಾದ ಸಿಂದಗಿ (sindagi) ಹಾಗು ಹಾನಗಲ್ (Hanagal) ಕ್ಷೇತ್ರಗಳಿಗೆ ಉಪ ಚುನಾವಣೆ (By Election) ನಡೆಯುತ್ತಿದ್ದು, ಈ ಉಪ ಚುನಾವಣೆಗಳು 2023ರ ಚುನಾವಣೆಯ ದಿಕ್ಸೂಚಿ ಆಗಲಿವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ (Sunil Kumar) ಹೇಳಿದರು. 

ಬೈಎಲೆಕ್ಷನ್‌: ಚುನಾವಣೆಗೂ ಮುನ್ನವೇ ಜೆಡಿಎಸ್ ಮೇಲೆ ಕಾಂಗ್ರೆಸ್‌ ಸಿಟ್ಟು..!

ದಾವಣಗೆರೆಯಲ್ಲಿ (Davanagere) ಇಂದು ಮಾತನಾಡಿದ ಸಚಿವ ಸುನೀಲ್ ಕುಮಾರ್ ಉಪ ಚುನಾವಣೆಗಳೇ ಮುಂದಿನ ವಿಧಾನಸಭಾ ಚುನಾವಣೆಯ (Assembly Election) ದಿಕ್ಸೂಚಿ. ಆದರೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK shivakumar) ಇದನ್ನು ದಿಕ್ಸೂಚಿ ಎಂದು ಒಪ್ಪಿಕೊಳ್ಳದೆ ತಮ್ಮ ಸೋಲನ್ನು ಮೊದಲೇ ಒಪ್ಪಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿಗೆ ಟಾಂಗ್ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ (bsavaraj Bommai) ನೇತೃತ್ವದಲ್ಲಿ ಎರಡೂ ಉಪಚುನಾವಣೆ ಗೆಲ್ಲುತ್ತೇವೆ. ಆದರೆ ಕಾಂಗ್ರೆಸ್ (Congress) ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯದಲ್ಲಿ  ಈಗಾಗಲೇ ಸೋಲು ಒಪ್ಪಿಕೊಂಡಿದೆ. ಅದೇ ಕಾರಣಕ್ಕೆ ಉಪಚುನಾವಣೆಗಳನ್ನು ದಿಕ್ಸೂಚಿ ಎಂದು ಒಪ್ಪಕೊಂಡಿಲ್ಲ  ಎಂದು ಹೇಳಿದರು. 

ಸಪ್ತ ತಂಡ

 ಸಿಂಧಗಿಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಸಿಂದಗಿ ಹೊಣೆಯನ್ನು ಲಕ್ಷ್ಮಣ ಸವದಿಗೆ ವಹಿಸಲಾಗಿದೆ. ಜಿಲ್ಲೆಯಲ್ಲಿ 7 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡಕ್ಕೆ ಓರ್ವ ಸಚಿವರು ಅಥವಾ ಪ್ರಭಾವಿ ಶಾಸಕರಿಗೆ ಜವಾಬ್ದಾರಿ ವಹಿಸಲಾಗಿದೆ. ಇವರ ನೇತೃತ್ವದಲ್ಲಿ ಗೆಲುವಿನ ತಂತ್ರ ರೂಪಿಸಲಾಗುತ್ತಿದೆ. 

Latest Videos
Follow Us:
Download App:
  • android
  • ios