Asianet Suvarna News Asianet Suvarna News

'ಮತ್ತೆ ಕೈ ಅಲೆ : 145 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ'

  • 'ಮತ್ತೆ ಕೈ ಅಲೆ : 145 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ' 
  • 145 ಸೀಟ್ ಎಂಎಲ್ಎಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ
Congress will win in 145 seats in next assembly Election says Puttegowda snr
Author
Bengaluru, First Published Aug 24, 2021, 12:49 PM IST
  • Facebook
  • Twitter
  • Whatsapp

ಹಾಸನ (ಆ.24) : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಪ್ರಾರಂಭವಾಗಿದೆ.  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಅವರು 145 ಸೀಟ್ ಎಂಎಲ್ಎಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಮಾಜಿ ಶಾಸಕ ಸಿಎಸ್ ಪುಟ್ಟೇಗೌಡ ತಿಳಿಸಿದರು. 

ನುಗ್ಗೆಹಳ್ಳಿ ಹೋಬಳಿ ಕೆಂದ್ರದ ನುಗ್ಗೇಳಮ್ಮ ದೇವಾಲಯದ ಪಕ್ಕದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಬಿಜೆಪಿ ಆಡಳಿತ ನಡೆಸಲು  ವಿಫಲವಾಗಿದೆ. ಕಾಂಗ್ರೆಸ್  ಪಕ್ಷ  ಅಧಿಕಾರಕ್ಕೆ ಬರುವುದನ್ನು ಯಾವ ಪ್ರಾದೇಶಿಕ ಪಕ್ಷದ ನಾಯಕರು ತಡೆಯಲು ಸಾಧ್ಯವಿಲ್ಲ. ತಾಲೂಕಿನಲ್ಲೂ ಕಾಂಗ್ರೆಸ್ ಅಲೆ ಪ್ರಾರಂಭವಾಗಿದೆ ಎಂದರು. 

2024ರ ಚುನಾವಣೆಗೆ ಒಗ್ಗಟ್ಟಿನ ಹೋರಾಟಕ್ಕೆ ಸೋನಿಯಾ ಕರೆ!

ಕಾರ್ಯಕರ್ತರು  ಒಗ್ಗಟ್ಟಾಗಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ನೀರಾವರಿ ಯೋಜನೆಗಳನ್ನು ಮಾಡಿಸಿದ್ದು   ನಾನೆ ಎಂದು ಸುಳ್ಳು ಹೇಳುತ್ತಿರುವ ಕ್ಷೇತ್ರದ ಜೆಡಿಎಸ್ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳಿಸಿ ಕಾಂಗ್ರೆಸ್‌ನ ಪ್ರಾಮಾಣಿಕ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳಿಸಿ ಇದು ನನ್ನ ರಾಜಕೀಯದ ಕೊನೆಯ ಆಸೆ. ನುಗ್ಗೇಹಳ್ಳಿ ಏತ ನಿರಾವರಿ ಯೋಜನೆಯನ್ನು ಮಂಜೂರು ಮಾಡಿ ನೀರು ಹರಿಸಲು ಕಾರಣರಾದವರು ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು  ನೆನೆಸಬೇಕಾಗಿದೆ. ಮಾಜಿ ಮಂತ್ರಿ ದಿ. ಶ್ರೀ ಕಂಠಯ್ಯನವರು ಹಾಗು ಸ್ಥಳೀಯ ಮುಖಂಡರುಗಳು ಇದಕ್ಕೆ  ಹೋರಾಟ ನಡೆಸಿದ್ದು ನೆನೆಯಬೇಕೆಂದರು. 

Follow Us:
Download App:
  • android
  • ios