Asianet Suvarna News Asianet Suvarna News

2024ರ ಚುನಾವಣೆಗೆ ಒಗ್ಗಟ್ಟಿನ ಹೋರಾಟಕ್ಕೆ ಸೋನಿಯಾ ಕರೆ!

* 17 ಪಕ್ಷಗಳ ನಾಯಕ ಜೊತೆ ಸೋನಿಯಾ ವಚ್ರ್ಯುವಲ್‌ ಸಭೆ

* 2024ರ ಚುನಾವಣೆಗೆ ಒಗ್ಗಟ್ಟಿನ ಹೋರಾಟಕ್ಕೆ ಸೋನಿಯಾ ಕರೆ

* ನಾಯಕತ್ವ ಪ್ರಶ್ನೆ ಮರೆತು ಕೆಲಸ ಮಾಡೋಣ: ಮಮತಾ ಸಲಹೆ

No alternative need to come together for 2024 Sonia to Opposition pod
Author
Bangalore, First Published Aug 21, 2021, 12:41 PM IST

ನವದೆಹಲಿ(ಆ.21): 2024ರ ಲೋಕಸಭಾ ಚುನಾವಣೆಗೆ ಎಲ್ಲಾ ವಿಪಕ್ಷಗಳು ಒಂದಾಗಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕಿದೆ ಎಂದು ವಿಪಕ್ಷಗಳ ನಾಯಕರಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ಕೊಟ್ಟಿದ್ದಾರೆ.

17 ವಿಪಕ್ಷಗಳ ನಾಯಕರ ಜೊತೆ ಶುಕ್ರವಾರ ವಚ್ರ್ಯುವಲ್‌ ಸಭೆ ನಡೆಸಿದ ಸೋನಿಯಾ, ‘ಸಂವಿಧಾನದ ತತ್ವಗಳಲ್ಲಿ ನಂಬಿಕೆ ಇರುವ ಸರ್ಕಾರವನ್ನು ದೇಶಕ್ಕೆ ನೀಡುವುದು ನಮ್ಮ ಗುರಿ. ನಾವೆಲ್ಲಾ ಒಟ್ಟಿಗೆ ಸೇರಿ ಈ ಸವಾಲನ್ನು ಗೆಲ್ಲಬಹುದು’ ಎಂದು ಹೇಳಿದರು.

ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ‘ನಮ್ಮ ಮುಂದಿನ ನಾಯಕರಾರು ಎಂಬುದನ್ನು ಮರೆತು, ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿಟ್ಟು ಪ್ರತಿಯೊಂದು ವಿಪಕ್ಷವೂ ಒಟ್ಟಾಗಿ 2024ರಲ್ಲಿ ಬಿಜೆಪಿಯನ್ನು ಎದುರಿಸಬೇಕು. ಜನರೇ ನಾಯಕರು. ವಿಪಕ್ಷಗಳ ಒಂದು ಗುಂಪು ರಚಿಸಿ ಒಟ್ಟಾಗಿ ಕೆಲಸ ಮಾಡೋಣ’ ಎಂದು ಕರೆ ನೀಡಿದರು.

ಬಳಿಕ ಎನ್‌ಸಿಪಿ ಪರಮೋಚ್ಚ ನಾಯಕ ಶರದ್‌ ಪವಾರ್‌, ಯಾರಿಗೆ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇದೆಯೋ ಅವರೆಲ್ಲಾ ಒಟ್ಟಾಗಿ ಸೇರಿ ಪ್ರಜಾಪ್ರಭುತ್ವ ಸಿದ್ಧಾಂತಗಳನ್ನು ಉಳಿಸುವ ಕೆಲಸದಲ್ಲಿ ಕೈಜೋಡಿಸಬೇಕು ಎಂದು ಟ್ವೀಟ್‌ ಮೂಲಕ ಕರೆ ನೀಡಿದರು.

Follow Us:
Download App:
  • android
  • ios