Asianet Suvarna News Asianet Suvarna News

ಕೈ v/s ಬಿಜೆಪಿ ‘ಕೊರೋನಾ ಕದನ’!2000 ಕೋಟಿ ಹಗರಣ: ಸಿದ್ದು | ಸುಳ್ಳು ಆರೋಪ: ಬಿಜೆಪಿ ತಿರುಗೇಟು

ಕೊರೋನಾ ವೈರಸ್‌ ತನ್ನ ದೈತ್ಯ ಸ್ವರೂಪ ತೋರುತ್ತಿರುವ ಈ ಹಂತದಲ್ಲೇ ರಾಜ್ಯ ರಾಜಕಾರಣದಲ್ಲಿ ಕರೋನಾ ನಿಯಂತ್ರಣ ಪರಿಕರಗಳ ಖರೀದಿ ಭ್ರಷ್ಟಾಚಾರದ ನೆಪದಲ್ಲಿ ಭಾರಿ ಕೆಸರೆರಚಾಟ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಾಯಕರು ನಡುವೆ ಭ್ರಷ್ಟಾಚಾರದ ತೀವ್ರ ಆರೋಪ-ಪ್ರತ್ಯಾರೋಪಗಳು ನಡೆದಿವೆ.

Congress vs bjp siddaramaiahas complaints about 2 thousand crore scam
Author
Bangalore, First Published Jul 24, 2020, 7:50 AM IST

ಬೆಂಗಳೂರು(ಜು.24): ಕೊರೋನಾ ವೈರಸ್‌ ತನ್ನ ದೈತ್ಯ ಸ್ವರೂಪ ತೋರುತ್ತಿರುವ ಈ ಹಂತದಲ್ಲೇ ರಾಜ್ಯ ರಾಜಕಾರಣದಲ್ಲಿ ಕರೋನಾ ನಿಯಂತ್ರಣ ಪರಿಕರಗಳ ಖರೀದಿ ಭ್ರಷ್ಟಾಚಾರದ ನೆಪದಲ್ಲಿ ಭಾರಿ ಕೆಸರೆರಚಾಟ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಾಯಕರು ನಡುವೆ ಭ್ರಷ್ಟಾಚಾರದ ತೀವ್ರ ಆರೋಪ-ಪ್ರತ್ಯಾರೋಪಗಳು ನಡೆದಿವೆ.

‘ಕೊರೋನಾ ನಿಯಂತ್ರಣ ಹೆಸರಿನಲ್ಲಿ ರಾಜ್ಯ ಸರ್ಕಾರ ಇದುವರೆಗೂ 4167 ಕೋಟಿ ರು. ವೆಚ್ಚ ಮಾಡಿದ್ದು, ಇದರಲ್ಲಿ ಬಿಜೆಪಿ ಸಚಿವರು ಹಾಗೂ ಅಧಿಕಾರಿಗಳು 2000 ಕೋಟಿ ಲೂಟಿ ಮಾಡಿದ್ದಾರೆ’ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್‌ ನಾಯಕರು ಕೆಲ ದಾಖಲೆಗಳ ನೆರವಿನೊಂದಿಗೆ ಗುರುವಾರ ಮಾಡಿದರು. ಅಲ್ಲದೆ, ಈ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲಿ, ಈ ಆಯೋಗಕ್ಕೆ ಎಲ್ಲಾ ದಾಖಲೆ ನೀಡಲಾಗುವುದು ಎಂದು ತಿಳಿಸಿದರು.

'ಒಬ್ಬ ವ್ಯಕ್ತಿ ಇಮೇಜ್ ಬದಲಾದರೆ ದೇಶ ಬದಲಾಗಲ್ಲ' ಮೋದಿಗೆ ರಾಹುಲ್ ಗುದ್ದು

ಇದಕ್ಕೆ ಬಿಜೆಪಿ ಸರ್ಕಾರದ ಪಂಚ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್‌ ನಾಯಕರು ಮಾಡಿದ ಪ್ರತಿಯೊಂದು ಆರೋಪಕ್ಕೂ ಸ್ಪಷ್ಟನೆ ನೀಡಿದರು. ‘ಕೆಲವೊಂದು ಉಪಕರಣಗಳ ಖರೀದಿಗೆ ನೀಡಲಾಗಿದ್ದ ಪ್ರಸ್ತಾವನೆಯನ್ನೇ ಕಾಂಗ್ರೆಸ್‌ ನಾಯಕರು ಅಂತಿಮ ಖರೀದಿ ಎಂಬ ತಪ್ಪು ಕಲ್ಪನೆಯೊಂದಿಗೆ ಆರೋಪ ಬೇಜಾವಾಬ್ದಾರಿತನ ತೋರಿದ್ದಾರೆ. ಇದು ರಾಜಕೀಯ ದುರುದ್ದೇಶ ಪೂರಿತ ಆರೋಪವಾದ ಕಾರಣ ಯಾವುದೇ ರೀತಿಯ ತನಿಖೆಯ ಅಗತ್ಯವಿಲ್ಲ. 1 ರು. ಭ್ರಷ್ಟಾಚಾರ ಆಗಿದ್ದರೂ ಸಾರ್ವಜನಿಕವಾಗಿ ನೇಣು ಹಾಕಿ’ ಎಂದು ಪ್ರತಿ ಸವಾಲು ಹಾಕಿದರು.

ಜತೆಗೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿದ್ದ ಅವ್ಯವಹಾರ ಹಾಗೂ ದುಬಾರಿ ದರ ನೀಡಿ ನಡೆಸಲಾಗಿದ್ದ ವೆಂಟಿಲೇಟರ್‌ ಖರೀದಿ ಪ್ರಕರಣವನ್ನು ಮುಂದು ಮಾಡುವ ಮೂಲಕ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸುವ ಯತ್ನ ಮಾಡಿದರು.

2 ಸಾವಿರ ಕೋಟಿ ಲೂಟಿ!:

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ‘ರಾಜ್ಯ ಸರ್ಕಾರವು ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿ ಏಳು ಪ್ರಮುಖ ಇಲಾಖೆಗಳಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ವಿವಿಧ ಉಪಕರಣ ಖರೀದಿ ನೆಪದಲ್ಲಿ ಸುಮಾರು 4,167 ಕೋಟಿ ರು. ವೆಚ್ಚ ಮಾಡಿದೆ. ಮಾಸ್ಕ್‌, ವೆಂಟಿಲೇಟರ್‌, ಪಿಪಿಇ ಕಿಟ್‌, ಆಹಾರ ಕಿಟ್‌, ಸ್ಯಾನಿಟೈಜರ್‌ಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಸಲಾಗಿದೆ. ನೆರೆ ರಾಜ್ಯಗಳು ಕಡಿಮೆ ದರಕ್ಕೆ ಖರೀದಿ ಮಾಡಿದ ಪರಿಕರಗಳನ್ನೇ ರಾಜ್ಯ ಸರ್ಕಾರ 2-3 ಪಟ್ಟು ದುಬಾರಿ ಬೆಲೆಗೆ ಖರೀದಿಸುವ ಮೂಲಕ ಭಾರಿ ಭ್ರಷ್ಟಾಚಾರ ಎಸೆಗಿದ್ದಾರೆ’ ಎಂದು ದೂರಿದರು.

ಸಿದ್ದರಾಮಯ್ಯ ಆರೋಪ ಕಾಂಗ್ರೆಸ್‌ಗೇ ತಿರುಗುಬಾಣ..?

‘ತಮಿಳುನಾಡು ತಲಾ 4.74 ಲಕ್ಷ ರು. ವೆಚ್ಚದಲ್ಲಿ ವೆಂಟಿಲೇಟರ್‌ ಖರೀದಿಸಿದರೆ ರಾಜ್ಯ ಸರ್ಕಾರ 5.6 ಲಕ್ಷ ರು.ಗಳಿಂದ 18.20 ಲಕ್ಷ ರು.ವರೆಗೆ ಹಣ ಪಾವತಿಸಿ ನೂರಾರು ಕೋಟಿ ರು. ಲೂಟಿ ಹೊಡೆದಿದೆ. ಕೇಂದ್ರ ಸರ್ಕಾರ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಅಭಿಯಾನ ನಡೆಸಿದರೆ ರಾಜ್ಯ ಸರ್ಕಾರ ಚೀನಾದಿಂದ 3 ಲಕ್ಷ ಪಿಪಿಇ ಕಿಟ್‌ ಖರೀದಿಸಲಾಗಿದೆ. ಆಮ್ಲಜನಕ ಕೊರತೆಯಿಂದ ಬಳಲುವ ಮಕ್ಕಳಿಗೆ ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಸುವ ಸಾಧನವನ್ನು (ಎಚ್‌ಎಫ್‌ಎನ್‌ಸಿ ಥೆರಪಿ ಡಿವೈಸ್‌) ಕೇರಳ ರಾಜ್ಯ 2.86 ಲಕ್ಷದಂತೆ ಖರೀದಿಸಿದರೆ ರಾಜ್ಯ ಸರ್ಕಾರವು 4.36 ಲಕ್ಷ ರು. ವೆಚ್ಚ ಮಾಡಿದೆ. 50-60 ರು.ಗಳಿಗೆ ಲಭ್ಯವಾಗುವ ಮಾಸ್ಕ್‌ಗಳಿಗೆ 126 ರು.ಗಳಿಂದ 150 ರು. ಪಾವತಿಸಿ ಕೋಟ್ಯಂತರ ರು. ಲೂಟಿ ಮಾಡಿದೆ’ ಎಂದು ಆರೋಪಿಸಿದರು.

ಗಾಳಿಯಲ್ಲಿ ಗುಂಡು- ಸಚಿವರ ತಿರುಗೇಟು:

ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಪಂಚ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ನಾಯಕರು ಮಾಡಿದ ಪ್ರತಿ ಆರೋಪಕ್ಕೂ ಸ್ಪಷ್ಟನೆ ನೀಡುವ ಮೂಲಕ ತನಿಖೆಯ ಆಗ್ರಹವನ್ನು ತಳ್ಳಿ ಹಾಕಿದರು.

‘ಕಾಂಗ್ರೆಸ್‌ ಪಕ್ಷವು ಕೊರೋನಾ ಸಂಕಷ್ಟವನ್ನು ಕಾಂಗ್ರೆಸ್‌ ಪುನಃಶ್ಚೇತನಕ್ಕೆ ಬಳಸಿಕೊಳ್ಳಲು ಗಾಳಿಯಲ್ಲಿ ಗುಂಡು ಹಾರಿಸುತ್ತಿದೆ. ಒಂದು ರುಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಸಾರ್ವಜನಿಕವಾಗಿ ನೇಣು ಹಾಕಿ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಆರೋಪ ಮಾಡುವುದನ್ನು ಜನ ಕ್ಷಮಿಸುವುದಿಲ್ಲ’ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ಸಿಂದಲೇ ಅಕ್ರಮ:

ಅಲ್ಲದೆ, ಕಾಂಗ್ರೆಸ್‌ನ ಆರೋಪಗಳನ್ನೇ ತಮ್ಮ ಅಸ್ತ್ರಗಳನ್ನಾಗಿ ಬಳಸಿಕೊಂಡ ಸಚಿವರು ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವೆಂಟಿಲೇಟರ್‌ ಹಗರಣ ನಡೆದಿದೆ’ ಎಂದು ಆರೋಪಿಸಿದರು. ‘ವೆಂಟಿಲೇಟರ್‌ಗೆ ನಾವು 5.5 ಲಕ್ಷ ರು.ಗಳಿಂದ 18 ಲಕ್ಷ ರು. ಪಾವತಿಸಿರುವುದೇ ಭ್ರಷ್ಟಾಚಾರ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ 2019ರಲ್ಲಿ ಒಂದೊಂದು ವೆಂಟಿಲೇಟರ್‌ಗೆ 21.73 ಲಕ್ಷ ಪಾವತಿಸಿತ್ತು. ಯಾವುದೇ ತುರ್ತು ಇಲ್ಲದಿದ್ದರೂ ಹೋಮ್‌ ಮೆಡಿಕ್ಸ್‌ ಎಂಬ ಕಂಪೆನಿಯಿಂದ 21.73 ಲಕ್ಷ ರು.ಗಳಂತೆ 9 ವೆಂಟಿಲೇಟರ್‌ ಖರೀದಿಸಿದೆ. ಹಾಗಾದರೆ ಇದು ಹಗರಣವಲ್ಲವೇ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಹೇಳಿದರು.

ಅಲ್ಲದೆ, ‘2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ 500 ಕೋಟಿ ರು. ಹಗರಣ ನಡೆಸಿದೆ ಎಂದು ಸ್ವತಃ ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ. ಈ ಬಗ್ಗೆಯೂ ಸಿದ್ದರಾಮಯ್ಯ ಅವರು ಚರ್ಚೆ ನಡೆಸಲಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿರುಗೇಟು ನೀಡಿದರು.

ಗುರುವಾರ ರಾಜ್ಯದಲ್ಲಿ 5 ಸಾವಿರ ಕೇಸ್.. ಜಿಲ್ಲೆಗಳು ಡೇಂಜರ್..ಡೇಂಜರ್!

‘ಸಿದ್ದರಾಮಯ್ಯ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ರು. ವೆಚ್ಚವಾಗಿದೆ ಎಂದು ಹೇಳುತ್ತಾರೆ. ನಾವು 10 ಉಪಕರಣಗಳನ್ನು 33 ಕೋಟಿ ರು.ಗೆ ಖರೀದಿಸಿರುವುದು ಬಿಟ್ಟರೆ ಬೇರೇನೂ ಖರೀದಿ ಮಾಡಿಲ್ಲ. ಪ್ರಸ್ತಾವನೆಗಳನ್ನೇ ಖರೀದಿ ಎಂದು ಭಾವಿಸಿ ಜನರಿಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. 13-14 ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಇಷ್ಟೂಗೊತ್ತಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌. ಆಶೋಕ್‌ ಹಾಗೂ ಶಿವರಾಂ ಹೆಬ್ಬಾರ್‌ ಇದ್ದರು.

ಸಿದ್ದು ಆರೋಪ: ಸರ್ಕಾರ ಕೊರೋನಾ ನೆಪದಲ್ಲಿ 4,167 ಕೋಟಿ ರು. ವೆಚ್ಚ ಮಾಡಿದ್ದರೂ, ಬಿಜೆಪಿ ಸಚಿವರು 327 ಕೋಟಿ ರು. ಮಾತ್ರ ವೆಚ್ಚ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ.

ಬಿಜೆಪಿ ಉತ್ತರಳ: ಕಾಂಗ್ರೆಸ್‌ ನಾಯಕರು 4,167 ಕೋಟಿ ರು. ವೆಚ್ಚ ಆಗಿದೆ ಎಂಬುದು ಸುಳ್ಳು ಆರೋಪ. ವಾಸ್ತವವಾಗಿ ವೆಚ್ಚವಾಗಿರುವುದು 2,118 ಕೋಟಿ ರು. ಮಾತ್ರ. ಪ್ರಸ್ತಾವನೆಯನ್ನೇ ವೆಚ್ಚ ಎಂದಿದೆ ಕಾಂಗ್ರೆಸ್‌

ಸಿದ್ದು ಆರೋಪ: ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ರು. ಖರೀದಿ ವ್ಯವಹಾರ ನಡೆದಿದೆ. ಇದರಲ್ಲಿ ಹತ್ತಾರು ಕೋಟಿ ರು. ಅಕ್ರಮ

ಬಿಜೆಪಿ ಉತ್ತರ: ಇಲಾಖೆಯಲ್ಲಿ 815 ಕೋಟಿ ರು. ಖರೀದಿ ಪ್ರಸ್ತಾವನೆ ಇದೆಯೇ ಹೊರತು ಖರೀದಿ ಮಾಡಿಲ್ಲ. ಈವರೆಗೂ 33 ಕೋಟಿ ರು. ಮಾತ್ರ ಖರೀದಿ ವೆಚ್ಚ.

ಸಿದ್ದು ಆರೋಪ: ತಮಿಳುನಾಡಿಂದ ತಲಾ 4.74 ಲಕ್ಷ ರು.ಗಳಂತೆ ವೆಂಟಿಲೇಟರ್‌ ಖರೀದಿ. ರಾಜ್ಯದಿಂದ ಕನಿಷ್ಠ 5.6 ಲಕ್ಷ ರು.ಗಳಿಂದ 18.20 ಲಕ್ಷ ರು.ವರೆಗೆ ಖರೀದಿ. 1000 ವೆಂಟಿಲೇಟರ್‌ಗೆ 40 ಕೋಟಿ ರು. ಬದಲು 120 ಕೋಟಿ ನೀಡಿಕೆ.

ಬಿಜೆಪಿ ಉತ್ತರ: ಗುಣಮಟ್ಟಆಧರಿಸಿ ವಿವಿಧ ಗುಣಮಟ್ಟದ ಒಟ್ಟು 747 ವೆಂಟಿಲೇಟರ್‌ಗಳನ್ನು ಖರೀದಿ. 10.61 ಕೋಟಿ ವೆಚ್ಚ. ಆರೋಗ್ಯ ಇಲಾಖೆಯ ಒಟ್ಟಾರೆ ವೆಚ್ಚ 290 ಕೋಟಿ. ಅಕ್ರಮ ಆಗಿಲ್ಲ

ಸಿದ್ದು ಆರೋಪ: ಕಾರ್ಮಿಕ ಇಲಾಖೆಯಲ್ಲಿ 1 ಸಾವಿರ ಕೋಟಿ ರು. ವೆಚ್ಚ. 85 ಲಕ್ಷ ಜನರಿಗೆ ಆಹಾರ ಪ್ಯಾಕೆಟ್‌ ವಿತರಣೆ; 2.8 ಲಕ್ಷ ಆಹಾರ್‌ ಕಿಟ್‌ಗಳು ಶಾಸಕರ ವಿವಿಧ ಕ್ಷೇತ್ರಗಳಿಗೆ ನೀಡಿಕೆ. ಕಿಟ್‌ಗಳ ಹೆಸರಿನಲ್ಲೂ ಸರ್ಕಾರ ಹಣ ಲೂಟಿ.

ಬಿಜೆಪಿ ಪ್ರತ್ಯುತ್ತರ: ಕಾರ್ಮಿಕ ಇಲಾಖೆಯಲ್ಲಿ 892 ಕೋಟಿ ವೆಚ್ಚ, ಕಾರ್ಮಿಕರಿಗೆ ತಲಾ 5 ಸಾವಿರ ರು. ಪರಿಹಾರದಂತೆ 816 ಕೋಟಿ ರು. ಜಮೆ. 25.27 ಕೋಟಿ ರು. ಆಹಾರ, 44.84 ಕೋಟಿ ರು. ಡ್ರೈ ಫುಟ್ಸ್‌, 5.58 ಕೋಟಿ ರು. ವೆಚ್ಚದ ಆಹಾರ ಕಿಟ್‌ ವಿತರಣೆ. ಅಕ್ರಮ ನಡೆದಿಲ್ಲ

ಸಿದ್ದು ಅರೋಪ: ಆರೋಗ್ಯ ಇಲಾಖೆ ಪ್ರಕಾರ 9.5 ಲಕ್ಷ ಪಿಪಿಇ ಕಿಟ್‌ ಖರೀದಿ; ಚೀನಾ ವಸ್ತುಗಳ ನಿಷೇಧಿಸಿ ಎನ್ನುವವರಿಂದ ಚೀನಾದಿಂದ ಕಿಟ್‌ ಖರೀದಿ. ಒಂದೇ ಕಂಪನಿಯಿಂದ 2,117.52 ರು.ಗೆ ಒಂದರಂತೆ 1 ಲಕ್ಷ ಕಿಟ್‌ ಖರೀದಿ, ಬಳಿಕ ಅದೇ ಕಂಪನಿಯಿಂದ 330 ರು. ನೀಡಿಯೂ ಪಿಪಿಇ ಕಿಟ್‌ ಖರೀದಿ. ಒಂದೇ ಕಂಪೆನಿಯಿಂದ ಬೇರೆ ಬೇರೆ ದರ ಏಕೆ?

ಬಿಜೆಪಿ ಉತ್ತರ: ಆರಂಭದಲ್ಲಿ ಪಿಪಿಇ ಕಿಟ್‌ ದರ ದುಬಾರಿ ಇತ್ತು. ಭಾರತದಲ್ಲಿ ಉತ್ಪಾದನೆ ಆಗದ ಕಾರಣ ಚೀನಾ ಸಂಪರ್ಕಿಸಿ 3ಲಕ್ಷ ಪಿಪಿಇ ಕಿಟ್‌ನ್ನು ತರಿಸಲಾಗಿತ್ತು. ಬಳಿಕ 1.5 ಲಕ್ಷದಷ್ಟುಪಿಪಿಇ ಕಿಟ್‌ನ್ನು 330 ರು.ಗಳಂತೆ ಖರೀದಿ

ಸಿದ್ದು ಆರೋಪ: ಮಾರುಕಟ್ಟೆಯಲ್ಲಿ 50-60 ರು. ದರಕ್ಕೆ ದೊರೆಯುವ ಮಾಸ್ಕ್‌ 126 ರು. ದರದಲ್ಲಿ 10 ಲಕ್ಷ ಮಾಸ್ಕ್‌ ಖರೀದಿ.

ಬಿಜೆಪಿ ಉತ್ತರ: ಪ್ರತಿ ಮಾಸ್ಕ್‌ಗೆ ಗರಿಷ್ಠ 147 ರು. ನೀಡಿಕೆ. ಸರ್ಕಾರ ಖರೀದಿ ಮಾಡಿದ 3ಎಂಎನ್‌-95 ಮಾಸ್ಕ್‌ ಬೆಲೆ 200 ರು.

ಕಾಂಗ್ರೆಸ್‌ ಆರೋಪ: ಮಾರುಕಟ್ಟೆಯಲ್ಲಿ 80 ರಿಂದ 100 ರು. ದರವಿರುವ 80 ಎಂ.ಎಲ್‌. ಸ್ಯಾನಿಟೈಜರ್‌ಗೆ 250 ರು. ಪಾವತಿ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಇದೇ 500 ಎಂ.ಎಲ್‌.ಗೆ 600 ರು. ಪಾವತಿ.

ಬಿಜೆಪಿ ಪ್ರತ್ಯುತ್ತರ: ಸ್ಯಾನಿಟೈಸರ್‌ಗೆ 500 ಎಂಎಲ್‌ ಸ್ಯಾನಿಟೈಸರ್‌ಗೆ . 250 ಕೊಟ್ಟು ಖರೀದಿ. ಆಗ ಉತ್ಪಾದನೆ ಕಡಿಮೆಯಿರುವುದರಿಂದ ದರ ಹೆಚ್ಚಿತ್ತು. ಈಗ ಉತ್ಪಾದನೆ ಹೆಚ್ಚಾಗಿದೆ. ದರ ಕಡಿಮೆ. ಹೀಗಾಗಿ ಹೋಲಿಕೆ ಸರಿಯಲ್ಲ.

ಕಾಂಗ್ರೆಸ್‌ ಆರೋಪ: ಮಾರುಕಟ್ಟೆಯಲ್ಲಿ 2 ರಿಂದ 3 ಸಾವಿರ ರು. ಮೌಲ್ಯದ ಥರ್ಮಲ್‌ ಸ್ಕಾ್ಯನರ್‌ಗೆ ಆರೋಗ್ಯ ಇಲಾಖೆಯಿಂದ 5,945 ರು.ಗೆ ಖರೀದಿ. ಸಮಾಜ ಕಲ್ಯಾಣ ಇಲಾಖೆಯಿಂದ 9 ಸಾವಿರ ರು.ಗೆ ಖರೀದಿ.

ಬಿಜೆಪಿ ಪ್ರತ್ಯುತ್ತರ: ಥರ್ಮಲ್‌ ಸ್ಕಾ್ಯನರ್‌ ಖರೀದಿಯೇ ನಡೆದಿಲ್ಲ.

ಕಾಂಗ್ರೆಸ್‌ ಆರೋಪ: ಮಕ್ಕಳಿಗೆ ಆಮ್ಲಜನಕ ಪೂರೈಸುವ (ಹೈ ಫೆä್ಲೕ ನೇಸಲ್‌ ಥೆರಪಿ ಡಿವೈಸ್‌) ಸಾಧನಕ್ಕೆ ಕೇರಳ ತಲಾ 2.86 ಲಕ್ಷ ನೀಡಿದ್ದರೆ, ರಾಜ್ಯ ಸರ್ಕಾರ 4.36 ಲಕ್ಷ ರು. ನೀಡಿದೆ.

ಬಿಜೆಪಿ ಉತ್ತರ: ಹೈಫೆä್ಲೕ ನೇಸಲ್‌ನ್ನು ಕೇರಳ ಸರ್ಕಾರ 2.94 ಲಕ್ಷ ರು.ಗೆ ಖರೀದಿಸಿದೆ. ರಾಜ್ಯ . 2.83 ಲಕ್ಷಕ್ಕೆ ಖರೀದಿಸಿದೆ. ಕೇರಳಕ್ಕಿಂತ 10 ಸಾವಿರ ಕಡಿಮೆಗೆ ರಾಜ್ಯ ಖರೀದಿ

ಕಾಂಗ್ರೆಸ್‌ ಆರೋಪ: 200 ರು. ದರದಲ್ಲಿ 10 ಲಕ್ಷ ಸರ್ಜಿಕಲ್‌ ಗ್ಲೌಸ್‌ಗೆ 20 ಕೋಟಿ ರು. ಆಗುತ್ತದೆ. ಆದರೆ, ರಾಜ್ಯದಿಂದ ಇದಕ್ಕೆ 40 ಕೋಟಿ ರು. ವೆಚ್ಚ. ಕೊರೋನಾ ಪರೀಕ್ಷೆಗೆ ಬಳಸುವ 20 ಲಕ್ಷ ಗ್ಲೌಸ್‌ಗಳಿಗೆ 40 ಕೋಟಿ ರು. ಮಾರುಕಟ್ಟೆದರ. ಸರ್ಕಾರ ನೀಡಿದ್ದು 65 ಕೋಟಿ

ಬಿಜೆಪಿ ಉತ್ತರ: ಸಾಮಾನ್ಯ ಗ್ಲೌಸು 30 ಸಾವಿರ ಮಾತ್ರ ಖರೀದಿಸಿದ್ದು ತಲಾ 11.40 ರು. ಮಾತ್ರ ಪಾವತಿಸಲಾಗಿದೆ. ಉಳಿದ ಆರೋಪಗಳು ಸುಳ್ಳು.

ಕಾಂಗ್ರೆಸ್‌ ಆರೋಪ: 6.2 ಲಕ್ಷ ಜನರಿಗೆ ಕರೋನಾ ಪರೀಕ್ಷೆಯನ್ನು ತಲಾ 4 ಸಾವಿರ ರು. ವೆಚ್ಚದಂತೆ 248 ಕೋಟಿ ರು. ವೆಚ್ಚವಾಗಬೇಕು. ಸರ್ಕಾರ ಇದಕ್ಕೆ 530 ಕೋಟಿ ರು. ವೆಚ್ಚ ತೋರಿಸಿದೆ.

ಬಿಜೆಪಿ ಪ್ರತ್ಯುತ್ತರ: ಕಾಂಗ್ರೆಸ್‌ನದ್ದು ಸುಳ್ಳು ಆರೋಪ

ಕಾಂಗ್ರೆಸ್‌ ಆರೋಪ: ಸೋಂಕಿತರ ಕ್ವಾರಂಟೈನ್‌ ವೆಚ್ಚ (15 ಸಾವಿರ ಜನರಿಗೆ 14 ದಿನದ ಕ್ವಾರಂಟೇನ್‌ಗೆ) 100 ಕೋಟಿ ರು. ವೆಚ್ಚವಾಗಬೇಕು. ಸರ್ಕಾರ 525 ಕೋಟಿ ರು. ವೆಚ್ಚ ತೋರಿಸಿದೆ.

ಬಿಜೆಪಿ ಉತ್ತರ: ಕಾಂಗ್ರೆಸ್‌ನದ್ದು ಸುಳ್ಳು ಆರೋಪ. ಈ ಬಾಬ್ತಿಗಾಗಿ ಈವರೆಗೆ ಸರ್ಕಾರ ಬಿಡುಗಡೆ ಮಾಡಿರುವುದೇ 232 ಕೋಟಿ ರು.

Follow Us:
Download App:
  • android
  • ios