ನವದೆಹಲಿ(ಜು. 23)  ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಚೀನಾದ ಪ್ರಕರಣವನ್ನು ಉಲ್ಲೇಖ ಮಾಡುತ್ತಲೇ ಮಾತನಾಡಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿ ಶೇ. 100 ರಷ್ಟು ತನ್ನ ಸ್ವಂತ ವರ್ಚಸ್ಸು ಹೆಚ್ಚಿಸಿಕೊಳ್ಳಲು ನಿರತರಾಗಿದ್ದಾರೆ. ಮೋದಿ ವಶಕ್ಕೆ ಪಡೆದುಕೊಂಡಿರುವ ಸಂಘಟನೆಗಳು ಅವರ ವರ್ಚಸ್ಸು ಹೆಚ್ಚಿಗೆ ಮಾಡುವುದರಲ್ಲಿ ತೊಡಗಿಕೊಂಡಿವೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ 'ಸಾಧನೆ'ಗಳನ್ನು ಪಟ್ಟಿ ಮಾಡಿದ ರಾಹುಲ್

ಒಬ್ಬ ವ್ಯಕ್ತಿಯ ಇಮೇಜ್ ಬದಲಾದರೆ ಇಡೀ ದೇಶದ ಚಿತ್ರಣ ಬದಲಾಗುವುದಿಲ್ಲ.  ಮೋದಿಯ ದೂರದೃಷ್ಟಿ ಇಲ್ಲದ ವಿಚಾರಗಳೇ ನಮ್ಮ ಭೂಪ್ರದೇಶದ ಮೇಲೆ ಬೇರೆಯವರು ಕಣ್ಣು ಹಾಕಲು ಕಾರಣ. ನಾವು ಪ್ರಪಂಚದ ದೃಷ್ಟಿಯಲ್ಲಿ ಯೋಚನೆ ಮಾಡಬೇಕು ಎಂದಿದ್ದಾರೆ.

ಜನರ ಒಳಿತಿಗಾಗಿ ಪ್ರಶ್ನೆ ಕೇಳುವುದು ನನ್ನ ಜವಾಬ್ದಾರಿ. ದೇಶದ ಹಿತ ಕಾಪಾಡಲು ಮುಂದೆ ನಿಲ್ಲಲೇಬೇಕಾಗುತ್ತದೆ. ಒಬ್ಬ ವ್ಯಕ್ತಿ ನಕಲಿ ಇಮೇಜ್ ಬೆಳೆಸಿಕೊಂಡು ಇದನ್ನೇ ಸತ್ಯ ಎಂದು ನಂಬಿಸಲು ಹೋಗಬಾರದು. ದೇಶದ ಪರಿಸ್ಥಿತಿ ಬೇರೆಯೇ ಆಗಿದೆ ಎಂದು ರಾಹುಲ್ ಹೇಳಿದ್ದಾರೆ.