ಕರ್ನಾಟಕದ ಕೊರೋನಾ ಸಂಖ್ಯೆಯಲ್ಲಿ ಯಾವ ಬದಲಾವಣೆಯೂ ಇಲ್ಲ/ ಐದು ಸಾವಿರ ದಾಟಿದ ಕೇಸುಗಳು/ ಬೆಂಗಳೂರಿನಲ್ಲಿ  2207 ಪ್ರಕರಣಗಳು/ 97 ಮಂದಿ ಕೊರೋನಾದಿಂದ ಸಾವು

ಬೆಂಗಳೂರು(ಜು. 23) ಕರ್ನಾಟಕದಲ್ಲಿ ಕೊರೋನಾ ರಣಕೇಕೆ ಮುಂದುವರಿದೆ ಇದೆ. ಗುರುವಾರ ಕರ್ನಾಟಕದಲ್ಲಿ 5030 ಮಂದಿಗೆ ಸೋಂಕು ತಲುಪಿದ್ದು ಬೆಂಗಳೂರಿನಲ್ಲಿ 2207 ಪ್ರಕರಣಗಳು ದೃಢವಾಗಿವೆ.

Add Asianetnews Kannada as a Preferred SourcegooglePreferred

ಮಾಮೂಲಿಯಂತೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 207 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 80,863ಕ್ಕೆ ತಲುಪಿದೆ.

ಗುರುವಾರ ಒಂದೇ ದಿನ ಬರೋಬ್ಬರಿ 97 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದು ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1616ಕ್ಕೆ ಏರಿದೆ. ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 48 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 97 ಮಂದಿ ಸಾವನ್ನಪ್ಪಿದ್ದಾರೆ .

1000 ರೂ. ಕಡಿಮೆಗೆ ಸಿಗಲಿದೆ ಕೊರೋನಾ ಔಷಧ, ಕೊನೆಯ ಪ್ರಯೋಗವೊಂದೇ ಬಾಕಿ

ಚೇತರಿಕೆ ಪ್ರಮಾಣ ಉತ್ತಮವಾಗಿದ್ದು, ಕಳೆದ 24 ಗಂಟೆಗಳಲ್ಲಿ 2071 ಮಂದಿ ಸೋಂಕಿನಿಂದ ಬಿಡುಗಡೆಯಾಗಿದ್ದು ಗುಣಮುಖರಾದವರ ಸಂಖ್ಯೆ 29,310ಕ್ಕೇರಿಕೆಯಾಗಿದೆ. 49,931 ಸಕ್ರಿಯ ಪ್ರಕರಣಗಳಿದ್ದು, 640 ಮಂದಿ ಐಸಿಯುನಲ್ಲಿದ್ದಾರೆ.

ಜಿಲ್ಲಾವಾರು ಲೆಕ್ಕಾಚಾರ;
ಬೆಂಗಳೂರು ನಗರ 22017, ರಾಯಚೂರು 258, ಕಲಬುರಗಿಯಲ್ಲಿ 229, ದಕ್ಷಿಣ ಕನ್ನಡದಲ್ಲಿ 218, ಬೆಳಗಾವಿಯಲ್ಲಿ 214, ಧಾರವಾಡದಲ್ಲಿ 183, ಬಳ್ಳಾರಿಯಲ್ಲಿ 164, ಬೆಂಗಳೂರು ಗ್ರಾಮಾಂತರದಲ್ಲಿ 161, ಉಡುಪಿಯಲ್ಲಿ 160, ಮೈಸೂರಿನಲ್ಲಿ 116, ಹಾಸನದಲ್ಲಿ 108, ದಾವಣಗೆರೆಯಲ್ಲಿ 107, ಬಾಗಲಕೋಟೆಯಲ್ಲಿ 106, ಬೀದರ್‌ನಲ್ಲಿ 94, ಉತ್ತರ ಕನ್ನಡದಲ್ಲಿ 83, ಶಿವಮೊಗ್ಗದಲ್ಲಿ 82, ಗದಗದಲ್ಲಿ 72, ಚಿಕ್ಕಬಳ್ಳಾಪುರದಲ್ಲಿ 65, ಚಿಕ್ಕಮಗಳೂರಿನಲ್ಲಿ 62, ತುಮಕೂರಿನಲ್ಲಿ 56, ಯಾದಗಿರಿಯಲ್ಲಿ 55, ಮಂಡ್ಯದಲ್ಲಿ 50, ಕೋಲಾರದಲ್ಲಿ 40, ಚಾಮರಾಜನಗರದಲ್ಲಿ 27, ರಾಮನಗರದಲ್ಲಿ 26, ಕೊಡಗಿನಲ್ಲಿ 22, ವಿಜಯಪುರದಲ್ಲಿ 20, ಹಾವೇರಿಯಲ್ಲಿ 18, ಕೊಪ್ಪಳದಲ್ಲಿ 17, ಚಿತ್ರದುರ್ಗದಲ್ಲಿ 10 ಕೊರೋನಾ ಸೋಂಕಿನ ಪ್ರಕರಣ ಕಂಡುಬಂದಿದೆ.