ಎಚ್‌.ಡಿ. ಕೋಟೆ ಹಾಗೂ ನಂಜನಗೂಡಿನಲ್ಲಿಯೂ ಕಾಂಗ್ರೆಸ್‌ ಗೆಲ್ಲುವುದು ನಿಶ್ಚಿತ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ. ವಿಜಯ…ಕುಮಾರ್‌ ಹೇಳಿದರು.

 ಸರಗೂರು : ಎಚ್‌.ಡಿ. ಕೋಟೆ ಹಾಗೂ ನಂಜನಗೂಡಿನಲ್ಲಿಯೂ ಕಾಂಗ್ರೆಸ್‌ ಗೆಲ್ಲುವುದು ನಿಶ್ಚಿತ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ. ವಿಜಯ…ಕುಮಾರ್‌ ಹೇಳಿದರು.

ಪಟ್ಟಣದ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಕಾರ್ಯಕರ್ತರನ್ನು ಕುರಿತು ಅವರು ಮಾತನಾಡಿದರು.

ಅರ್‌. ಧ್ರುವನಾರಾಯಣ… ಅವರು ಇಲ್ಲದೆ ಈ ದಿನ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ನೋವಿನ ಸಂಗತಿ ಎಂದು ಭಾವುಕರಾದರು. ಆರ್‌. ಧ್ರುವನಾರಾಯಣ… ಅವರನ್ನು ಕಳೆದುಕೊಂಡು ರಾಜಕೀಯವಾಗಿ ನನಗೆ ಹಾಗೂ ರಾಜ್ಯದ ಹಲವು ನಾಯಕರಿಗೆ ತುಂಬಲಾರದ ನಷ್ಟವಾಗಿದೆ. ಅವರು ಎಚ್‌.ಡಿ. ಕೋಟೆ ಮತ್ತು ಜನತೆ ಬಗ್ಗೆ ಅಪಾರವಾದ ಗೌರವವಿತ್ತು. ತಾಲೂಕಿಗೆ ಮೊದಲ ಆಧ್ಯತೆ ನೀಡುತ್ತಿದ್ದರು. ಅನಿಲ್… ಚಿಕ್ಕಮಾದು ಅವರು ಮತ್ತೊಮ್ಮೆ ಶಾಸಕರಾಗಬೇಕೆಂಬುದು ಮಹದಾಸೆಯಾಗಿತ್ತು. ಇಂದು ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸಬೇಕಾಗಿದೆ ಎಂದರು.

ಸರಗೂರಿನಲ್ಲಿ ಬ್ಲಾಕ್‌ ಕಾಂಗ್ರೆಸ್‌ ಕಚೇರಿ ತೆರೆದಿರುವುದು ಸಂತಸ ತಂದಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಲು ಮತ್ತು ಪಕ್ಷ ಸಂಘಟನೆಗೆ ತುಂಬ ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.

ಶಾಸಕ ಅನಿಲ… ಚಿಕ್ಕಮಾದು ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಇಂದು ನನ್ನ ರಾಜಕೀಯ ಗುರುಗಳಾದ ತಂದೆ ಸಮಾನರಾದ ಆರ್‌. ಧ್ರುವನಾರಾಯಣ… ಅವರನ್ನು ಕಳೆದುಕೊಂಡು ಇಡಿ ಕ್ಷೇತ್ರ ತಬ್ಬಲಿಯಾಗಿದೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಅವರ ಕನಸುಗಳನ್ನು ನನಸು ಮಾಡವ ಮೂಲಕ ತಾಲೂಕಿನ ಅಭಿವೃದ್ಧಿಗೆ ಮುಂದಾಗೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ. ಸುಂದರದಾಸ್‌, ಪುರಸಭೆ ಮಾಜಿ ಅಧ್ಯಕ್ಷ ಎಸ್‌.ಬಿ. ಸತೀಶ್‌ಕುಮಾರ್‌, ಏಜಾಜ… ಪಾಷ, ಜಿಪಂ ಮಾಜಿ ಸದಸ್ಯರಾದ ರವಿ, ಕೆಪಿಸಿಸಿ ಸದಸ್ಯರಾದ ಎಸ್‌.ಆರ್‌. ಜಯಮಂಗಳ. ಮಾದಪ್ಪ. ಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಏಜಾಜ… ಪಾಷ, ಸರಗೂರು ಟೌನ್‌ ಅಧ್ಯಕ್ಷ ಎಸ್‌.ಎನ್‌. ನಾಗರಾಜು. ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜು ಇದ್ದರು.

ಇಂದು ಕೈ ಪಟ್ಟಿ ಬಿಡುಗಡೆ

ನವದೆಹಲಿ/ಬೆಂಗಳೂರು (ಏ.06): ಕಾಂಗ್ರೆಸ್‌ ಪಾಲಿಗೆ ತಲೆನೋವಾಗಿರುವ ಮುಂಬರುವ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಕಸರತ್ತು ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಸುಮಾರು 40ರಿಂದ 45 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಬಿಡುಗಡೆಯಾಗಲಿದೆ. ಬಾಕಿ ಉಳಿದಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಅಖೈರುಗೊಳಿಸಲು ಬುಧವಾರ ಇಡೀ ದಿನ ನಡೆದ ಕಸರತ್ತಿನ ನಂತರ ಸುಮಾರು 40ರಿಂದ 45 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಲಾಯಿತು. ಈ ಅಖೈರುಗೊಳಿಸಿದ ಅಂತಿಮ ಪಟ್ಟಿಯನ್ನು ತಡರಾತ್ರಿಯೇ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಲಾಯಿತು. ಅಂತಿಮವಾಗಿ ಗುರುವಾರ ಬೆಳಗ್ಗೆ 11 ಗಂಟೆಗೆ ಪಟ್ಟಿಬಿಡುಗಡೆ ಮಾಡಲು ನಾಯಕರು ತೀರ್ಮಾನಿಸಿದರು ಎಂದು ಮೂಲಗಳು ಹೇಳಿವೆ.

ಬಾಕಿ ಉಳಿದಿರುವುದರಲ್ಲಿ ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಹೆಸರುಗಳು ಚುನಾವಣಾ ಸಮಿತಿ ಸಭೆ ಮುಂದೆ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಮಂಗಳವಾರವೇ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಅವರು ಗರಂ ಆಗಿದ್ದರು. ಒಂದು ಅಥವಾ ಎರಡು ಹೆಸರುಗಳಿರುವ ಪಟ್ಟಿಯನ್ನಷ್ಟೇ ಚುನಾವಣಾ ಸಮಿತಿ ಮುಂದೆ ತನ್ನಿ ಎಂದು ಖಡಕ್‌ ಸೂಚನೆ ನೀಡಿದ್ದರು. ಅದರಂತೆ ಮತ್ತೊಮ್ಮೆ ಸಭೆ ಸೇರಿದ ಸ್ಕ್ರೀನಿಂಗ್‌ ಕಮಿಟಿಯು ಎರಡಕ್ಕಿಂತ ಹೆಚ್ಚು ಹೆಸರುಗಳಿರುವ ಕ್ಷೇತ್ರಗಳಲ್ಲಿ ಸಂಭಾವ್ಯರ ಸಂಖ್ಯೆಯನ್ನು ಎರಡಕ್ಕಿಳಿಸುವ ಕಾರ್ಯವನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಿದೆ.

ಸುದೀಪ್‌ ರಾಜಕೀಯ ಪ್ರವೇಶ ಇಲ್ಲ: ಬಿಜೆಪಿಯ ಪರ ಪ್ರಚಾರ

ಆ ಬಳಿಕ ಕಾಂಗ್ರೆಸ್‌ ಚುನಾವಣಾ ಸಮಿತಿಯು ಸಂಜೆ 4.30ರಿಂದ ಸುಮಾರು 2 ಗಂಟೆಗಳ ಕಾಲ ಎರಡನೇ ಪಟ್ಟಿಕುರಿತು ಚರ್ಚೆ ನಡೆಸಿದೆ. ಸದ್ಯಕ್ಕೆ ಸಭೆ ಅಪೂರ್ಣಗೊಂಡಿದ್ದು, ಗುರುವಾರ ಮಧ್ಯಾಹ್ನ 2.30 ವೇಳೆಗೆ ಮತ್ತೆ ಸಮಿತಿ ಸಭೆ ಸೇರಲಿದೆ. ಈ ಸಭೆಯಲ್ಲಿ ತೀವ್ರ ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ ಎರಡನೇ ಪಟ್ಟಿಗುರುವಾರ ಬಿಡುಗಡೆಯಾದರೂ ಅನಂತರದ ಪಟ್ಟಿಯೇನಿದ್ದರೂ ಬಿಜೆಪಿಯ ಪಟ್ಟಿಪ್ರಕಟವಾದ ನಂತರವೇ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮತ್ತೊಂದು ಸಭೆ: ಚುನಾವಣಾ ಸಮಿತಿ ಸಭೆ ಬಳಿಕ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲಾ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್‌, ಕಾಂಗ್ರೆಸ್‌ನ ಚುನಾವಣಾ ತಂತ್ರಗಾರ ಸುನಿಲ್‌ ಕನಗೋಲು ಪಾಲ್ಗೊಂಡಿದ್ದರು. ಚುನಾವಣಾ ಸಮಿತಿ ಅಖೈರುಗೊಳಿಸಿರುವ ಪಟ್ಟಿಬಿಡುಗಡೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.